

ತಮಿಳುನಾಡು: ಕಾಲಿವುಡ್ ಸ್ಟಾರ್, ದಳಪತಿ ವಿಜಯ್ ನಟಿಸಲಿರುವ ಮುಂದಿನ ತಾತ್ಕಾಲಿಕ ಶೀರ್ಷಿಕೆಯುಳ್ಳ 'ದಳಪತಿ 68' ಚಿತ್ರದ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದೆ. ಇತ್ತೀಚೆಗಷ್ಟೇ ವಿಜಯ್ ಅಭಿನಯದ ಬಹುನಿರೀಕ್ಷಿತ 'ಲಿಯೋ' ಬಹುತೇಕ ಚಿತ್ರಮಂದಿರಗಳಲ್ಲಿ ಅದ್ದೂರಿ ಓಪನಿಂಗ್ ಪಡೆದು, ಬಾಕ್ಸ್ ಆಫೀಸ್ನಲ್ಲಿ ಭಾರೀ ಸದ್ದು ಮಾಡುತ್ತಿದೆ.
ಇಷ್ಟು ದಿನ 'ಲಿಯೋ' ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದಲ್ಲ ಒಂದು ವಿಚಾರ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗುತ್ತಿತ್ತು. ಇದೀಗ ಲಿಯೋ ಬೆನ್ನಲ್ಲೇ ವಿಜಯ್ ನಟಿಸಲಿರುವ ಮುಂದಿನ ಸಿನಿಮಾ 'ದಳಪತಿ 68' ಬಗ್ಗೆ ಕುತೂಹಲಕಾರಿ ಸಂಗತಿಯೊಂದು ಹೊರಬಿದ್ದಿದೆ. ವೆಂಕಟ್ ಪ್ರಭು ಮತ್ತು ವಿಜಯ್ ಕಾಂಬಿನೇಷ್ನ ಈ ಚಿತ್ರಕ್ಕೆ ಮೀನಾಕ್ಷಿ ಚೌಧರಿ ನಾಯಕಿಯಾಗಿ ನಟಿಸಲಿದ್ದಾರೆ.
ಇತ್ತೀಚೆಗಚ್ಟೇ ಚಿತ್ರ ತಯಾರಕರು ಸಿನಿಮಾದ ಪೂಜಾ ಸಮಾರಂಭದ ವೀಡಿಯೊವನ್ನು ಬಿಡುಗಡೆಗೊಳಿಸಿದ್ದರು. ಚಿತ್ರದ ಸಂಪೂರ್ಣ ತಾರಾಗಣ ಮತ್ತು ಸಿಬ್ಬಂದಿಗೆ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ. ಚಿತ್ರದ ಕಥೆಯು ಟೈಂ ಟ್ರಾವೆಲ್ ಅಥವಾ ಕೃತಕ ಬುದ್ಧಿಮತ್ತೆಯ ವಿಷಯಗಳಿಗೆ ಸಂಬಂಧಿಸಿದಂತೆ ಇರಲಿದೆ ಎಂದು ಹಲವರು ಅಭಿಪ್ರಾಯಿಸಿದ್ದಾರೆ. ಆದ್ರೆ, ಈ ಕುರಿತಂತೆ ನಿರ್ಮಾಣ ತಂಡ ಯಾವುದೇ ಅಧಿಕೃತ ಮಾಹಿತಿಯನ್ನು ಘೋಷಿಸಿಲ್ಲ.
ಚಿತ್ರದಲ್ಲಿ ಮೈಕ್ ಮೋಹನ್, ಜಯರಾಮ್, ಸ್ನೇಹಾ, ಲೈಲಾ, ಯೋಗಿಬಾಬು, ವಿಟಿವಿ ಗಣೇಶ್, ಅಜ್ಮಲ್ ಅಮೀರ್, ವೈಭವ್, ಪ್ರೇಮ್ಗಿ, ಅಜಯ್ ರಾಜ್, ಅರವಿಂದ್ ಆಕಾಶ್ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).