58 ಗಂಟೆಗಳ ಕಾಲ ಚುಂಬಿಸುವ ಮೂಲಕ ದಾಖಲೆ! ಈಗ ವಿಚ್ಛೇದನಕ್ಕೆ ಮುಂದಾದ ಜೋಡಿ.. longest kiss couple

longest kiss thai couple
Published on

ಥೈಲ್ಯಾಂಡ್‌: ( longest kiss couple ) ಹನ್ನೆರಡು ವರ್ಷಗಳ ಹಿಂದೆ 2013 ರಲ್ಲಿ ಥೈಲ್ಯಾಂಡ್‌ನ ಎಕ್ಕಾಚೈ ತಿರನಾರತ್ ಮತ್ತು ಅವರ ಪತ್ನಿ ಲಕ್ಸಾನಾ 58 ಗಂಟೆ, 35 ನಿಮಿಷ ಮತ್ತು 58 ಸೆಕೆಂಡುಗಳ ಕಾಲ ನಡೆದ ಚುಂಬನದ ಮೂಲಕ ಸುದ್ದಿಯಾಗಿದ್ದರು. ಈ ಜೋಡಿ ಈಗ ತಮ್ಮ ಬೇರ್ಪಡುವಿಕೆಯನ್ನು ಘೋಷಿಸಿದ್ದಾರೆ.

ಥೈಲ್ಯಾಂಡ್​ ಮೂಲದ ಪ್ರೇಮಿಗಳು ಕಿಸ್ ಮಾಡುವ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ. ಪೊಟ್ಟಾಯದವರಾಗಿರುವ ಎಕಚೈ(44) ಮತ್ತು ಲಕ್ಸಾನಾ ತಿರನಾಥನ್ (33) ಇಬ್ಬರು ಇದೀಗ ದಾಖಲೆ ಪುಟ ಸೇರಿದ್ದಾರೆ. ಪ್ರೇಮಿಗಳ ದಿನದಂದು ಮ್ಯಾರಥಾನ್ ಚುಂಬನ ಸ್ಪರ್ಧೆಯನ್ನು ಅಯೋಜಿಸಲಾಗಿತ್ತು. ವಿತೇತರಿಗೆ 3.5 ಲಕ್ಷ ರೂ ಬಹುಮಾನದ ಜೊತೆಗೆ ಎರಡು ವಜ್ರದ ಉಂಗುರವನ್ನು ಉಡುಗೊರೆಯಾಗಿ ಘೋಷಿಸಲಾಗಿತ್ತು.

ಸುದೀರ್ಘವಾಗಿ ಚುಂಬಿಸುವುದರಲ್ಲಿ ವಿಶ್ವ ದಾಖಲೆ ಬರೆದಿದ್ದರೋ ಯಾರು ಪ್ರಣಯಕ್ಕೆ ಹೊಸದೊಂದು ರೂಪ ಕೊಟ್ಟಿದ್ದರೋ ಅವರೇ ಈಗ ಬೇರೆ ಬೇರಯಾಗಿದ್ದಾರೆ. ನಾವು ಈಗ ಜೊತೆಯಾಗಿಲ್ಲ, ಪ್ರತ್ಯೇಕವಾಗುತ್ತಿದ್ದೇವೆ ಎಂದು ಹೇಳುವ ಮೂಲಕ ಜಗತ್ತಿಗೆ ಶಾಕ್ ಕೊಟ್ಟಿದ್ದಾರೆ. ಅವರು ಬೇರೆಯಾಗುತ್ತಿರುವ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡದಾಗಿ ವೈರಲ್ ಆಗುತ್ತಿದೆ. ಟ್ವಿಟರ್, ಇನ್​ಸ್ಟಾಗ್ರಾಮ್ ಹಾಗೂ ಫೇಸ್​ಬುಕ್​ಗಳಲ್ಲೆಲ್ಲಾ ಇವರ ಪ್ರತ್ಯೇಕವಾಗುತ್ತಿರುವ ಸುದ್ದಿ ಜೋರಾಗಿ ಹರಿದಾಡುತ್ತಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಎಕ್ಕಾಚೈ, ಒಟ್ಟಿಗೆ ದೀರ್ಘ ಮತ್ತು ಒಳ್ಳೆಯ ಸಮಯವನ್ನು ಕಳೆದಿದ್ದಕ್ಕೆ ಹೆಮ್ಮೆಪಡುತ್ತೇನೆ. ನಾನು ಒಳ್ಳೆಯ ನೆನಪುಗಳನ್ನು ನೆನಪಿಸಿಕೊಳ್ಳಲು ಬಯಸುತ್ತೇನೆ.  ನಾವು 58 ಗಂಟೆಗಳಕಾಲ ಚುಂಬಿಸಿದ್ದು ಅದು ಸುಲಭವಲ್ಲ. ಏಕೆಂದರೆ  ಶೌಚಾಲಯದ ವಿರಾಮದ ಸಮಯದಲ್ಲೂ ಪರಸ್ಪರ ಚುಂಬಿಸುತ್ತಲೇ ಇರಬೇಕಾಗಿತ್ತು. ಇದನ್ನೆಲ್ಲಾ ಒಟ್ಟಿಗೆ ಮಾಡಿದ್ದಕ್ಕೆ ನನಗೆ ಸಂತೋಷವಾಗಿದೆ ಎಂದು ಅವರು ಹೇಳಿದರು.

ನಾವಿಬ್ಬರು ಬೇರೆಯಾಗುತ್ತಿರುವುದನ್ನು ಘೋಷಿಸಲು ನನಗೆ ತುಂಬಾ ದುಃಖವಾಗಿದೆ. ಈ ಪ್ರಯಾಣವು ನೆನಪುಗಳಿಂದ ತುಂಬಿತ್ತು, ಆದರೆ ಈಗ ವಿಭಿನ್ನ ದಿಕ್ಕುಗಳಲ್ಲಿ ಸಾಗುವ ಸಮಯ. ಆದಾಗ್ಯೂ, ದಂಪತಿ  ಪರಸ್ಪರ ಗೌರವವನ್ನು ಮುಂದುವರಿಸುತ್ತೇವೆ ಮತ್ತು ಮಕ್ಕಳನ್ನು ಸಹ-ಪೋಷಕರಾಗಿ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಎಕ್ಕಾಚೈ ಮತ್ತು ಲಕ್ಷಣಾ ಅವರ ದಾಖಲೆ ಮುರಿದ ಕ್ಷಣವು ಇನ್ನೂ ಐತಿಹಾಸಿಕ ಸಾಧನೆಯಾಗಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ 'ಲಾಂಗೆಸ್ಟ್ ಕಿಸ್' ವಿಭಾಗವನ್ನು 'ಲಾಂಗೆಸ್ಟ್ ಕಿಸ್ಸಿಂಗ್ ಮ್ಯಾರಥಾನ್' ಎಂದು ಬದಲಾಯಿಸಿದೆ.

ದಂಪತಿ  ಈಗ ತಮ್ಮ ಬೇರ್ಪಡುವಿಕೆಯನ್ನು ಘೋಷಿಸಿದ್ದಾರೆ, ಇದು ಅವರ ಅಭಿಮಾನಿಗಳನ್ನು ನಿರಾಶೆಗೊಳಿಸಿದೆ. ಆದರೆ ಇದಕ್ಕೆ ಕಾರಣಗಳನ್ನು ದಂಪತಿ  ಬಹಿರಂಗಪಡಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net