ಟ್ರಂಪ್ ಮೊಮ್ಮಗಳನ್ನು ಮದುವೆಯಾಗಲು ಮನೆಯ ಗೋಡೆ ಹಾರಿ ಬಂದು ಪರಾರಿಯಾಗಿದ್ದ ಯುವಕ ಅರೆಸ್ಟ್‌...Donald Trump

Donald Trump
Published on

Donald Trump: ಪಾಮ್ ಬೀಚ್‌ನಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾರ್-ಎ-ಲಾಗೊ ಎಸ್ಟೇಟ್‌ನ ಗೋಡೆ ಹತ್ತಿ  ಟ್ರಂಪ್‌ ಮೊಮ್ಮಗಳು ಕೇ ಮ್ಯಾಡಿಸನ್ ಟ್ರಂಪ್ ಅವರನ್ನು ಮದುವೆಯಾಗಬೇಕೆಂದು ಒತ್ತಾಯಿಸಿದ 23 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

ಸಿಕ್ಕಿಬಿದ್ದ ನಂತರ ಕೇ ಮ್ಯಾಡಿಸನ್ ಟ್ರಂಪ್ ಅವರನ್ನು ಮದುವೆಯಾಗಲು ಬಯಸಿದ್ದಾಗಿ ಆ ವ್ಯಕ್ತಿ ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳಿಗೆ ತಿಳಿಸಿದ್ದಾನೆ ಎಂದು ವರದಿಯಾಗಿದೆ.

ಕೇ ಮ್ಯಾಡಿಸನ್ ಟ್ರಂಪ್ ಡೊನಾಲ್ಡ್ ಟ್ರಂಪ್ ಜೂನಿಯರ್ ಮತ್ತು ವನೆಸ್ಸಾ ಟ್ರಂಪ್ ಅವರ ಪುತ್ರಿ. ಘಟನೆ ನಡೆದ ಸಮಯದಲ್ಲಿ ಟ್ರಂಪ್ ಅವರ ನಿವಾಸದಲ್ಲಿ ಇರಲಿಲ್ಲ. ಅವರು ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿದ್ದರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಇದೇ ರೀತಿಯ ಘಟನೆ ಸಂಭವಿಸಿದೆ. ಅದೇ ದಿನ ಮಾರ್-ಎ-ಲಾಗೊಗೆ ನುಗ್ಗಲು ಪ್ರಯತ್ನಿಸಿದ ನಂತರ ಆಂಥೋನಿ ಥಾಮಸ್ ರೆಯೆಸ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

23 ವರ್ಷದ ಆಂಥೋನಿ ಥಾಮಸ್ ರೆಯೆಸ್ ಅವರನ್ನು ಅಮೆರಿಕದ ರಹಸ್ಯ ಸೇವಾ ಏಜೆಂಟರು ಮಧ್ಯರಾತ್ರಿ ಬಂಧಿಸಿದರು. ಮಾರ್-ಎ-ಲಾಗೊದಲ್ಲಿ ಟ್ರಂಪ್ ಅವರನ್ನು ಭೇಟಿ ಮಾಡಲು, ಅವರೊಂದಿಗೆ ಮಾತನಾಡಲು ಮತ್ತು ಅವರ ಮೊಮ್ಮಗಳಿಗೆ ಪ್ರಪೋಸ್ ಮಾಡಲು ಅವರು ಪ್ರಯತ್ನಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಆಂಥೋನಿ ಥಾಮಸ್ ರೈಸ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಯುವಕ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net