ಉಗ್ರರಿಗೆ ತಕ್ಕ ಪಾಠ ಕಲಿಸಿದ್ದೇವೆ; ಭಯೋತ್ಪಾದಕರನ್ನು ಸೇನೆ ಸೆದೆಬಡಿಯುತ್ತದೆ; ಡಿಜಿಎಂಒ ರಾಜೀವ್ ಘಾಯ್| dgmo

dgmo
Published on

ಆಪರೇಷನ್​ ಸಿಂಧೂರ್​ ಬಗ್ಗೆ ಡಿಜಿಎಂಒ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಚೈನಾ ನಿರ್ಮಿತ ಪಾಕಿಸ್ತಾನದ ಶಸ್ತ್ರಸಜ್ಜಿತ ಕ್ಷಿಪಣಿ ಧ್ವಂಸ ಮಾಡಲಾಗಿದೆ, ಹೆಚ್ಚು ನಾಗರಿಕರ ಜೀವ ಹಾನಿಯನ್ನು ತಡೆದಿದ್ದೇವೆ, ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆ ವಿಫಲವಾಗಿದೆ ಎಂದು ಭಾರತದ ವಾಯು ರಕ್ಷಣಾ ಕಾರ್ಯಗಳ ಬಗ್ಗೆ ಭಾರತೀಯ ಸೇನೆ ಹೇಳಿಕೊಂಡಿದೆ.

Dgmo | ಅಂತಾರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಲು ಮೇ 10 ರ ಒಪ್ಪಂದದ ಬಗ್ಗೆ ಚರ್ಚಿಸಲು ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒ) ಮಾತನಾಡಿದ್ದಾರೆ.

ಪಾಕಿಸ್ತಾನ ಉಗ್ರ ಚಟುವಟಿಕೆಗಳ ವಿರುದ್ಧದ ಸೇನಾ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ ಎನ್ನುವ ಮೂಲಕ ಆಪರೇಷನ್ ಸಿಂದೂರ ಮುಂದುವರೆದಿದೆ ಎಂದು ವಾಯು ಸೇನೆಯ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರಾದ ಅವಧೇಶ್ ಕುಮಾರ್ ಭಾರ್ತಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ತಕ್ಕ ಪಾಠ ಕಲಿಸಲಾಗಿದೆ ಎಂದು ಭಾರತೀಯ ಸೇನೆಯ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರು (DGMO) ರಾಜೀವ್ ಘಾಯ್ ಮಾಹಿತಿ ನೀಡಿದ್ದಾರೆ.

ಭಾರತದ ವಾಯುನೆಲೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದ್ದು, ದೇಶಾದ್ಯಂತ ನಿರಂತರ ರಕ್ಷಣಾ ಸನ್ನದ್ಧತೆಯನ್ನು ಖಚಿತಪಡಿಸುತ್ತದೆ. ಜಾಗರೂಕತೆ ಮತ್ತು ಸಾಮರ್ಥ್ಯದ ಬಲವಾದ ಪ್ರದರ್ಶನದಲ್ಲಿ, ಭಾರತದ ವಾಯುಪ್ರದೇಶವನ್ನು ಉಲ್ಲಂಘಿಸಲು ಪ್ರಯತ್ನಿಸುತ್ತಿರುವ ಎಲ್ಲಾ ಪಾಕಿಸ್ತಾನಿ ಡ್ರೋನ್‌ಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಲಾಗಿದೆ, ಇದು ದೇಶದ ಬಲಿಷ್ಠ ವಾಯು ಭದ್ರತೆಯನ್ನು ಪುನರುಚ್ಚರಿಸುತ್ತದೆ ಎಂದು ಹೇಳಿದ್ದಾರೆ.

ಪಾಕಿಸ್ತಾನಿ ಸೇನೆ ಭಯೋತ್ಪಾದಕರನ್ನು ಬೆಂಬಲಿಸಿತು ಮತ್ತು ಅದನ್ನು ತಮ್ಮದೇ ಆದ ಹೋರಾಟವನ್ನಾಗಿ ಮಾಡಿಕೊಂಡಿತು. ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ಉಡಾವಣಾ ಕ್ಷಿಪಣಿಗಳ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾ ಏರ್ ಮಾರ್ಷಲ್ ಎಕೆ ಭಾರ್ತಿ ಹೇಳಿದ್ದಾರೆ.

ಗಡಿ ಬಾಗಗಳಲ್ಲಿ ಮೂರು ಸೇನಾಪಡೆಗಳು ಫುಲ್​ ಅಲರ್ಟ್​ ಆಗಿದ್ದು, ನಾವು ನಾಗರಿಕರಿಗೆ ಯಾವುದೇ ದಾಳಿ ಮಾಡಲ್ಲ. ಆದರೆ ಭಯೋತ್ಪಾದಕರನ್ನು ಮಾತ್ರ ಬಿಡುವುದಿಲ್ಲ ಎಂದು ಸೇನಾಪಡೆ ಹೇಳಿಕೊಂಡಿದೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net