ಭಾರತದಿಂದ ನೆರೆಯ ದ್ವೀಪರಾಷ್ಟ್ರಮಾಲ್ಡೀವ್ಸ್​ಗೆ 50 ಮಿಲಿಯನ್ ಡಾಲರ್ ಆರ್ಥಿಕ ನೆರವು - Maldives

Maldivian President
Published on

ನವದೆಹಲಿ: ಭಾರತ ಸರ್ಕಾರವು ಭಾರತದ ನೆರೆಯ ದ್ವೀಪರಾಷ್ಟ್ರ ಮಾಲ್ಡೀವ್ಸ್‌ಗೆ 50 ಮಿಲಿಯನ್ ಡಾಲರ್ ಖಜಾನೆ ಬಿಲ್​ಅನ್ನು ನೀಡುವ ಮೂಲಕ ಬೆಂಬಲ ನೀಡಿದೆ ಎಂದು ಮಾಲ್ಡೀವ್ಸ್‌ಗೆ ಭಾರತದ ಹೈಕಮಿಷನ್ ಸೋಮವಾರ (12) ಹೇಳಿಕೆಯಲ್ಲಿ ತಿಳಿಸಿದೆ.

ಇನ್ನೂ ಈ ಬಗ್ಗೆ ಮಾಲ್ಡೀವ್ಸ್‌ನ ವಿದೇಶಾಂಗ ಸಚಿವ ಅಬ್ದುಲ್ಲಾ ಖಲೀಲ್ ಭಾರತ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಮತ್ತು ಎರಡೂ ದೇಶಗಳ ನಡುವಿನ ಸ್ನೇಹದ ನಿಕಟ ಬಂಧಗಳನ್ನು ಪ್ರತಿಬಿಂಬಿಸುವ ಸಹಾಯವನ್ನು ಶ್ಲಾಘಿಸಿದ್ದಾರೆ. ಮಾಲ್ಡೀವ್ಸ್‌ಗೆ ಭಾರತದ ಹೈಕಮಿಷನ್, ಭಾರತವು 50 ಮಿಲಿಯನ್ ಡಾಲರ್ ಖಜಾನೆ ಬಿಲ್​ಅನ್ನು ನೀಡುವ ಮೂಲಕ ಮಾಲ್ಡೀವ್ಸ್‌ಗೆ ಆರ್ಥಿಕ ಬೆಂಬಲವನ್ನು ನೀಡುತ್ತಿದೆ. ನಮ್ಮ ದೇಶಕ್ಕೆ ಅಗತ್ಯದ ಸಂದರ್ಭದಲ್ಲಿ ಹಣಕಾಸಿನ ಬೆಂಬಲವನ್ನು ನೀಡಿದ್ದಕ್ಕಾಗಿ ಭಾರತ ಮತ್ತು ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

(ಏಜೆನ್ಸೀಸ್)

ಮಾಲ್ಡೀವ್ಸ್ ಭಾರತದ ಪ್ರಮುಖ ಕಡಲ ನೆರೆಯ ರಾಷ್ಟ್ರ. ದೇಶ ಅನುಸರಿಸುವ 'ನೆರೆಹೊರೆ ಮೊದಲು' ಎಂಬ ನೀತಿಯಡಿ ಆರ್ಥಿಕ ನೆರವು ನೀಡಲಾಗುತ್ತದೆ. ಅದರ ಅಗತ್ಯದ ಸಮಯದಲ್ಲಿ ಭಾರತವು ಸಹಾಯ ಮಾಡಿದೆ. ಮಾರ್ಚ್ 2019ರಿಂದ ಭಾರತ ಸರ್ಕಾರವು SBI ನಿಂದ ಇಂತಹ ಆರ್ಥಿಕ ನೆರವು ನೀಡುತ್ತಾ ಬಂದಿದೆ. ಮಾಲ್ಡೀವ್ಸ್ ಸರ್ಕಾರಕ್ಕೆ ನೀಡಲಾಗುವ ವಾರ್ಷಿಕ ಅನುದಾನವು ಬಡ್ಡಿರಹಿತವಾಗಿರುತ್ತದೆ. ದ್ವೀಪರಾಷ್ಟ್ರದ ಅಭಿವೃದ್ಧಿಗಾಗಿ ನೀಡುವ ತುರ್ತು ಹಣಕಾಸು ಸಹಾಯ ಇದಾಗಿದೆ. ಸರ್ಕಾರಗಳ ನಡುವಿನ ವಿಶಿಷ್ಟ ವ್ಯವಸ್ಥೆಯಡಿ ಈ ಸಾಲ ಮಂಜೂರು ಮಾಡಲಾಗುತ್ತದೆ ಎಂದು ಭಾರತೀಯ ಹೈಕಮಿಷನ್​ ಹೇಳಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net