VIDEO| ಸಾಯಲು ಹೋಗಿದ್ದ ತಾಯಿ ಮಗು ನೆನಪಾಗಿ ಓಡೋಡಿ ಬಂದಳು: ಕರುಳು ಚುರುಕ್​ ಎನಿಸುವ ದೃಶ್ಯವಿದು!

Mother Child
Published on

ಹಾವೇರಿ: ಅದು ಕೇವಲ 10 ತಿಂಗಳ ಹಾಲುಗಲ್ಲದ ಹಸುಗೂಸು. ಜಗತ್ತಿನ ಅರಿವೆ ಇಲ್ಲದ ಆ ಕಂದ ನಡುಬೀದಿಯಲ್ಲಿ ಅಳುತ್ತಿತ್ತು. ಕಾರಣ ಆಟವಾಡಿಸುತ್ತಲೆ ಹಡೆದ ತಾಯಿಯೊಬ್ಬಳು ಈ ಮಗು ಬೇಡಾ ಅಂತಾ ಬಿಟ್ಟೊಗಿದ್ದಳು. ಅನಾಥವಾಗಿ ಅಳುತ್ತಿದ್ದ ಮಗು ಹಾವೇರಿಯ ದತ್ತು ಸ್ವೀಕಾರ ಕೇಂದ್ರ ಸೇರಿತ್ತು. ಗಂಡ ಕುಡಿದು ಹೊಡಿತಾನೆ, ನಾನು ಸಾಯಬೇಕು ಅಂತಾ ಮಗು ಬಿಟ್ಟೊಗಿದ್ದ ತಾಯಿ ಇದೀಗ ವಾಪಸ್ಸು ಬಂದಿದ್ದಾಳೆ. ಈಗ ಮನಮಿಡಿಯುವ ರೀತಿ ಮಗು ತಾಯಿಯ ಮಡಿಲು ಸೇರಿದೆ. ತಾಯಿ ಮಗುವಿನ ಈ ಅಪರೂಪದ ದೃಶ್ಯ ನೋಡಿದರೆ ನಿಮ್ಮ ಕಣ್ಣುಗಳು ಒದ್ದೆಯಾಗೋದು ಗ್ಯಾರಂಟಿ.

ಎರಡು ದಿನಗಳ ಹಿಂದೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿ ಆಲೂರು ಬಳಿಯ 4ನೇ ಕ್ರಾಸ್​ ಹತ್ತಿರ ಮಗು ಬಿಟ್ಟು ತಾಯಿ ಪಾರಾರಿಯಾಗಿರುತ್ತಾಳೆ. ನಂತರ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸದ್ದು ಮಾಡುತ್ತದೆ. ಅನಾಥ ಮಗು ಸಿಕ್ಕಿದೆ, ಪಾಲಕರಿಗೆ ತಲುಪುವವರೆಗೂ ಶೇರ್ ಮಾಡಿ ಎಂಬ ಘೋಷಣೆ ಜೋರಾಗಿಯೆ ಹರಡಿರುತ್ತದೆ. ಆದರೆ, ಇದ್ದಕಿದ್ದಂತೆ ಬಿಟ್ಟು ಹೋದಮಗುವಿನ ತಾಯಿ ನನ್ನ ಮಗ ಎಲ್ಲಿ ಅಂತಾ ಹುಡುಕುತ್ತಾ ಬರುತ್ತಾಳೆ. ಕಂಡ ಕಂಡವರ ಕೈ ಕಾಲು ಹಿಡಿದು ಮಗು ಇರುವ ಸ್ಥಳ ಪತ್ತೆಹಚ್ಚಿದ್ದಾಳೆ. ಹಾವೇರಿಯ ಸ್ಪಂದನ ದತ್ತು ಸ್ವೀಕಾರ ಕೇಂದ್ರದ ಜಾಗಕ್ಕೆ ತಾಯಿ ರೇಖಾ ಮತ್ತು ಸಂಬಂಧಿಕರು ಆಗಮಿಸಿದ್ದಾರೆ. ಮಗುವನ್ನು ನೋಡಿದ ತಾಯಿ ರೇಖಾ, ಕಂದಾ ಧೃವ ಎಂದು ಅಪ್ಪಿಕೊಳ್ಳುತ್ತಾಳೆ.

ನಾನು ಇನ್ನೊಮ್ಮೆ ನಿನ್ನ ಬಿಟ್ಟು ಹೋಗುವುದಿಲ್ಲ. ನನ್ನ‌ ಕ್ಷಮಿಸು ಧೃವ ಅಂತಾ ಮಗುವನ್ನು ತಾಯಿ ಮುದ್ದಾಡಿದ ದೃಶ್ಯ ಕಂಡು ನೇರದವರ ಕಣ್ಣುಗಳು ಒದ್ದೆಯಾಗಿದ್ದವು. ಮನೆಯಲ್ಲಿ ತೊಂದರೆ ಇರುವುದಕ್ಕೆ ಮಗು ಬಿಟ್ಟು ನಾನು ಸಾಯಲು ಹೋಗಿದ್ದೆ ಎಂದು ತಾಯಿ ರೇಖಾ ಕಣ್ಣೀರಾಕಿದರು.

ಗಂಡ ಹೆಂಡಿರ ಜಗಳದ ನಡುವೆ ಕೂಸು ಬಡವವಾಯಿತು ಎನ್ನುವ ಹಾಗೇ. ಇವರಿಂದ ಹತ್ತು ತಿಂಗಳ‌ ಮಗು ಒಂದು ದಿನ ಪೂರ ಎದೆಹಾಲಿಲ್ಲದೆ ನರಳುವ ಹಾಗೇ ಆಗಿದೆ. ಮಗುವಿನ ತಾಯಿ ಈ ಥರ ಮಾಡೊದಕ್ಕೆ ಕಾರಣ, ಗಂಡ ಪ್ರಕಾಶ. ದಿನವೀಡಿ ಕುಡಿದು ಬಂದು ರೇಖಾಳನ್ನ ಹೊಡಿತಿದ್ದನಂತೆ.ಅದಕ್ಕೆ ದಿನಾನು ಸಾಯುವ ಬದಲು ಒಂದೆ ದಿನ ಸತ್ತು ಹೋಗೋಣ ಅಂತಾ ಈ ನಿರ್ಧಾರ ಮಾಡಿದ್ದಾಳೆಂದು ಸಂಬಂಧಿಕರು ದೂರಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net