ದೇವಸ್ಥಾನದಲ್ಲಿ ಪೂಜೆ ಮಾಡುತ್ತಿರುವಾಗಲೇ ಅರ್ಚಕ ಸಾವು

Temple worship death
Published on

ಮಂಡ್ಯ: ಜವರಾಯ ಯಾರ ಬಳಿ, ಯಾವ ರೂಪದಲ್ಲಿ ಬರುತ್ತಾನೋ ಆ ದೇವರೇ ಬಲ್ಲ. ದೇವಾಯಲದ ಗರ್ಭಗುಡಿಯಲ್ಲಿ ಪೂಜೆ ಮಾಡುತ್ತಿರುವಾಗಲೇ ಅರ್ಚಕನನ್ನು ಕರದೊಯ್ದಿರುವ ಘಟನೆ ಮಂಗಲ ಗ್ರಾಮದಲ್ಲಿ ಸಂಭವಿಸಿದೆ.

ಸಂತೆಕಸಲಗೆರೆ ಗ್ರಾಮದ ಚಂದ್ರಶೇಖರ್ (51) ಮೃತಪಟ್ಟ ಅರ್ಚಕ. ಪೂಜೆ ವೇಳೆ ಹೃದಯಾಘಾತದಿಂದ ಗರ್ಭಗುಡಿಯಲ್ಲೇ ಕುಸಿದು ಸಾವಿಗೀಡಾಗಿದ್ದಾರೆ.

ಹಲವು ವರ್ಷಗಳಿಂದ ಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಚಂದ್ರಶೇಖರ್ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ನಿನ್ನೆ (ಶುಕ್ರವಾರ) ರಾತ್ರಿ ದೇಗುಲದಲ್ಲಿ ಮಲ್ಲೇಶ್ವರಸ್ವಾಮಿಗೆ ಪೂಜೆ ಮಾಡುತ್ತಿದ್ದರು. ಆ ವೇಳೆ ಗರ್ಭಗುಡಿಯಲ್ಲೇ ಕುಸಿದು ಬಿದ್ದ ಅರ್ಚಕರು ಅಸುನೀಗಿದರು.

ಅರ್ಚಕನ ಸಾವಿನಿಂದ ಗ್ರಾಮದಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಹೃದಯಾಘಾತದಿಂದ ಸಾವನ್ನಪ್ಪಿರುವುದು ಎಂದು ತಿಳಿದು ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ‌ ನಡೆದಿದೆ. ಶನಿವಾರ ಮೃತರ ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net