ಕೆಜಿಎಫ್​ ಅಧೀರ ಪಾತ್ರಕ್ಕೆ ಕನ್ನಡ ಮತ್ತು ತೆಲುಗಿಗೆ ಇವರೇ ನೋಡಿ ಡಬ್ಬಿಂಗ್ ಆರ್ಟಿಸ್ಟ್​

19220700081600518654
Published on

ಬೆಂಗಳೂರು: ಕೆಜಿಎಫ್​ ಚಾಪ್ಟರ್ 2 ಸಿನಿಮಾ ಬಹುತೇಕ ಕೊನೇ ಹಂತದ ಶೂಟಿಂಗ್​ನಲ್ಲಿ ತೊಡಗಿಸಿಕೊಂಡಿದೆ. ಕ್ಲೈಮ್ಯಾಕ್ಸ್​ ಕೆಲಸಗಳು ನಡೆಯುತ್ತಿರುವುದರಿಂದ ಇನ್ನೇನು ಶೀಘ್ರದಲ್ಲಿ ಸಿನಿಮಾ ಬಿಡುಗಡೆಯ ಬಗ್ಗೆ ಅಪ್​ಡೇಟ್ ಮಾಹಿತಿ ನೀಡಲಿದೆ ತಂಡ. ಇದೀಗ ಇದೇ ಬಳಗದಿಂದ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಅದೇನೆಂದರೆ, ಸಂಜಯ್ ದತ್ ಅಧಿರ ಪಾತ್ರಕ್ಕೆ ಡಬ್ ಮಾಡುವವರಾರು ಎಂಬುದು. ಅದಕ್ಕೀಗ ಉತ್ತರ ಸಿಕ್ಕಿದೆ.

ಹಲವು ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಸಿನಿಮಾಕ್ಕೆ ಹಿಂದಿಯಲ್ಲಿ ಸ್ವತಃ ಸಂಜಯ್ ದತ್ ಡಬ್​ ಮಾಡಿದರೆ, ಕನ್ನಡ ಮತ್ತು ತೆಲುಗಿನಲ್ಲಿ ಬೇರೆ ಬೇರೆ ಖಳರೇ ದತ್​ಗೆ ಧ್ವನಿ ನೀಡಲಿದ್ದಾರೆ. ಕನ್ನಡದಲ್ಲಿ ಮಧು ಗುರುಸ್ವಾಮಿ ಡಬ್​ ಮಾಡುವ ಬಗ್ಗೆ ಮಾತುಗಳು ಕೇಳಿಬಂದಿದ್ದು, ತೆಲುಗಿನಲ್ಲಿ ಕಂಚಿನ ಕಂಠದ ಬೊಮ್ಮಾಲಿ ಖ್ಯಾತಿಯ ರವಿಶಂಕರ್​ ಡಬ್​ ಮಾಡಲಿದ್ದಾರೆ.

ಖಳನಾಯಕನಾಗಿ ನಟಿಸುವುದರ ಜತೆಗೆ ಧ್ವನಿ ಮೂಲಕವೂ ಸಾಕಷ್ಟು ಸದ್ದು ಮಾಡಿದ್ದಾರೆ ಈ ಇಬ್ಬರು ಕಲಾವಿದರು. ಇದೀಗ ಇದೇ ನಟರು ಕೆಜಿಎಫ್​ ಚಿತ್ರದ ಭಾಗವಾಗುತ್ತಿದ್ದಾರೆ. ಇನ್ನೇನು ಶೀಘ್ರದಲ್ಲಿ ಈ ವಿಚಾರವನ್ನು ಸ್ವತಃ ಚಿತ್ರತಂಡವೇ ಅಧಿಕೃತವಾಗಿ ಹೇಳಿಕೊಳ್ಳಲಿದೆ. ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್ ಬ್ಯಾನರ್​ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net