More

    ಕೊವಿಡ್​-19 ಸೋಂಕಿನಿಂದ ಮೃತಪಟ್ಟ ಸಿನಿಮಾ ನಿರ್ಮಾಪಕ…

    ತೆಲಂಗಾಣ: ಕರೊನಾ ಸೋಂಕಿನಿಂದ ತೆಲುಗು ನಿರ್ಮಾಪಕ ಪೊಕುರಿ ರಾಮ ರಾವ್​ ಅವರು ಮೃತರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಜು.3ರಂದು ಖಾಸಗಿ ಆಸ್ಪತ್ರೆಯೊಂದರಲ್ಲಿ ಸಾವನ್ನಪ್ಪಿದ್ದಾರೆ.
    ಕಳೆದ ಎರಡು ದಿನಗಳ ಹಿಂದಷ್ಟೇ ಅವರಲ್ಲಿ ಕರೊನಾ ದೃಢಪಟ್ಟಿತ್ತು. ವೈದ್ಯರು ಚಿಕಿತ್ಸೆ ನೀಡುತ್ತಿದ್ದರೂ ಅವರ ದೇಹ ಅದಕ್ಕೆ ಸ್ಪಂದಿಸುತ್ತಿರಲಿಲ್ಲ.

    ರಾಮ ರಾವ್​ ಅವರು 10 ತಿಂಗಳ ಹಿಂದಷ್ಟೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರ ಸಾವಿಗೆ ಇಡೀ ತೆಲುಗು ಚಿತ್ರಮಂದಿರ ಕಂಬನಿ ವ್ಯಕ್ತಪಡಿಸಿದೆ. ಇಂದು ರಾಮ ರಾವ್​ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

    ಪೊಕುರಿ ರಾಮ ರಾವ್​ ಹಾಗೂ ಅವರ ಸಹೋದರ ಪೊಕುರಿ ಬಾಬು ರಾವ್​ ಅವರು ಜತೆಯಾಗಿ ತಮ್ಮದೇ ಸ್ವಂತ ಬ್ಯಾನರ್​ನಲ್ಲಿ ರಣಂ, ಒಂಟರಿ, ಯಜ್ಞಂ ಸೇರಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಹೈದರಾಬಾದ್​ನಲ್ಲಿ ಕರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಸಿನಿಮಾ ಕ್ಷೇತ್ರದ ಹಲವು ಗಣ್ಯರಲ್ಲಿ ಕರೊನಾ ದೃಢಪಟ್ಟಿದೆ. (ಏಜೆನ್ಸೀಸ್​)

    ಎಷ್ಟು ಆಸ್ಪತ್ರೆಗಳಿಗೆ ಹೋಗಿ ಜನರನ್ನು ಸಂತೈಸಿದ್ದೀರಿ: ಸಿದ್ದರಾಮಯ್ಯಗೆ ಬೈರತಿ ಟಾಂಗ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts