More

    ತೆಲುಗಿನ ಅಲಾ ವೈಕುಂಠಪುರಂಲೋ ಚಿತ್ರದ ಹಿಂದಿ ರಿಮೇಕ್​ಗೆ ಟೈಟಲ್ ಫಿಕ್ಸ್

    ಮುಂಬೈ: ಟಾಲಿವುಡ್​ನಲ್ಲಿ ‘ಅಲಾ ವೈಕುಂಠಪುರಂಲೋ’ ಸೂಪರ್​ ಹಿಟ್ ಸಿನಿಮಾ. ಕಲೆಕ್ಷನ್​ ವಿಚಾರವಾಗಿ, ಹಾಡು ಮತ್ತು ಯೂಟ್ಯೂಬ್ ಹಿಟ್ಸ್​ ವಿಚಾರವಾಗಿ ಸಾಕಷ್ಟು ಸದ್ದು ಮಾಡಿದ್ದ ಚಿತ್ರ. ಕಳೆದ ವರ್ಷ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆ ಆಗಿದ್ದ ಈ ಚಿತ್ರದಲ್ಲಿ ಅಲ್ಲು ಅರ್ಜುನ್, ಪೂಜಾ ಹೆಗ್ಡೆ ಮುಖ್ಯಭೂಮಿಕೆಯಲ್ಲಿದ್ದರು. ತ್ರಿವಿಕ್ರಮ್ ಶ್ರೀನಿವಾಸ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ಇದೀಗ ಈ ಚಿತ್ರ ಮತ್ತೆ ಸುದ್ದಿಯಲ್ಲಿದೆ.

    ಇದನ್ನೂ ಓದಿ: ‘ಬಿಗ್ ಬಾಸ್’ನ ಸೀಸನ್​ 8, ವರ್ಷನ್​ 2 ಬುಧವಾರದಿಂದ ಪ್ರಾರಂಭ …

    ‘ಅಲಾ ವೈಕುಂಠಪುರಂಲೋ’ ಚಿತ್ರ ಹಿಂದಿಗೆ ರಿಮೇಕ್​ ಆಗುತ್ತಿರುವುದು ಈ ಹಿಂದೆಯೇ ಸುದ್ದಿಯಾಗಿತ್ತು. ಆ ಚಿತ್ರದಲ್ಲಿ ಅಲ್ಲು ಅರ್ಜುನ್ ನಿಭಾಯಿಸಿದ ಪಾತ್ರವನ್ನು ಕಾರ್ತಿಕ್ ಆರ್ಯನ್ ಮಾಡುವುದು ಅಧಿಕೃತವಾಗಿತ್ತು. ನಾಯಕಿಯಾಗಿ ಕೃತಿ ಸನೋನ್​ ಸಹ ಆಯ್ಕೆಯಾಗಿದ್ದರು. ಇದೀಗ ಹಿಂದಿಯಲ್ಲಿ ಆ ಚಿತ್ರಕ್ಕೆ ‘ಶೆಹಜಾದ’ ಶೀರ್ಷಿಕೆ ಅಂತಿಮವಾಗಿದೆ. ಶೆಹಜಾದ್ ಎಂದರೆ ರಾಜಕುಮಾರ ಎಂದರ್ಥ.

    ಇದನ್ನೂ ಓದಿ: ಯೋಗಪುರುಷ … ಭಾರತೀಯ ಚಿತ್ರರಂಗದ ಮೊದಲ ಯೋಗ ಐಕಾನ್

    ವಿಶೇಷ ಏನೆಂದರೆ, ಈ ರಿಮೇಕ್ ಚಿತ್ರಕ್ಕೆ ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಬಂಡವಾಳ ಹೂಡುತ್ತಿದ್ದು, ಅವರಿಗೆ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ನಿರ್ಮಾಣದಲ್ಲಿ ಪಾಲುದಾರರಾಗಿದ್ದಾರೆ. ರೋಹಿತ್ ಧವನ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರಲಿದ್ದು, ಪರೇಶ್ ರಾವಲ್, ಮನಿಷಾ ಕೊಯಿರಾಲಾ ಪ್ರಮುಖ ಪಾತ್ರದಲ್ಲಿರಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts