More

    ಯೋಗಪುರುಷ … ಭಾರತೀಯ ಚಿತ್ರರಂಗದ ಮೊದಲ ಯೋಗ ಐಕಾನ್

    ಯೋಗಪುರುಷ ... ಭಾರತೀಯ ಚಿತ್ರರಂಗದ ಮೊದಲ ಯೋಗ ಐಕಾನ್ಬೆಂಗಳೂರು: ಭಾರತೀಯ ಚಿತ್ರರಂಗದಲ್ಲಿ ಹಲವು ಐಕಾನ್‌ಗಳಿದ್ದಾರೆ. ಫ್ಯಾಶನ್​ಗೊಬ್ಬರು, ಸ್ಟೈಲ್‌ಗೊಬ್ಬರು … ಹೀಗೆ ಹಲವರನ್ನು ಹೆಸರಿಬಹುದು. ಆದರೆ, ಯೋಗದ ಮಟ್ಟಿಗೆ ಮೊದಲ ಐಕಾನ್ ಎಂದರೆ, ಅದು ಡಾ. ರಾಜ್‌ಕುಮಾರ್. ಕಡಿಮೆಯಾಗುತ್ತಿದ್ದ ಈ ಪ್ರಾಚೀನ ಕಲೆಯನ್ನು, ನಿರಂತರ ಅಭ್ಯಾಸ ಮೂಲಕ ಮತ್ತೆ ಜನಪ್ರಿಯಗೊಳಿಸಿದ ಮೊದಲ ಸಿನಿಮಾ ನಟ ಅವರು ಎಂದರೆ ತಪ್ಪಿಲ್ಲ.

    ಇದನ್ನೂ ಓದಿ: ಅಪ್ಪನ ನೆನೆದ ಸ್ಯಾಂಡಲ್​​ವುಡ್​ ಸೆಲೆಬ್ರಿಟಿಗಳು …

    ರಾಜಕುಮಾರ್ ಅವರು ಯೋಗಾಭ್ಯಾಸ ಮೊರೆಹೋಗಿದ್ದು 70ರ ದಶಕದ ಕೊನೆಯಲ್ಲಿ. ಅಷ್ಟರಲ್ಲಿ ಅವರಿಗಾಗಲೇ 50 ವರ್ಷವಾಗಿತ್ತು. ಯೋಗಗುರು ಎಚ್.ಎಸ್. ನಾಯ್ಕರ್ ಅವರಿಂದ ಯೋಗ ಕಲಿತ ರಾಜಕುಮಾರ್, ಅದನ್ನು ತಮ್ಮ ಪ್ರತಿನಿತ್ಯ ಭಾಗವನ್ನಾಗಿಸಿಕೊಂಡರು. ಬೆಳಿಗ್ಗೆ ಬೇಗ ಎದ್ದು, ಯೋಗ ಮಾಡಿ, ಆ ನಂತರ ತಮ್ಮ ದಿನಚರಿಯನ್ನು ಮುಂದುವರೆಸುತ್ತಿದ್ದರು.

    ಯೋಗ ಕಲಿಯುವುದಕ್ಕಿಂತ ಮುನ್ನ ರಾಜಕುಮಾರ್ ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿತ್ತು ಎಂದು ಹೇಳಲಾಗುತ್ತದೆ. ಅವರನ್ನು ಬೆನ್ನುನೋವು ಬಾಧಿಸುತ್ತಿತ್ತು ಎಂಬ ಮಾತಿದೆ. ನಿರಂತರ ಯೋಗಾಭ್ಯಾಸದಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಾಕಷ್ಟು ಬಲಿಷ್ಠರಾದ ಅವರು, ಯೋಗವನ್ನು ಕೊನೆಯವರೆಗೂ ಬಿಡಲಿಲ್ಲ.

    ಇದನ್ನೂ ಓದಿ: ಬಾಯ್​ಫ್ರೆಂಡ್​ಗಾಗಿ ಬರೋಬ್ಬರಿ 175 ಕೋಟಿ ರೂ. ಖರ್ಚು ಮಾಡಿದ ಶ್ರೀಲಂಕಾ ಬ್ಯೂಟಿ!

    ಯೋಗದ ಬಗ್ಗೆ ರಾಜಕುಮಾರ್ ಅವರಿಗಿದ್ದ ಆಸಕ್ತಿ ಮತ್ತು ಅವರೊಬ್ಬ ಅದ್ಭುತ ಯೋಗಪಟುವಾಗಿದ್ದರು ಎಂದು ಜನಸಾಮಾನ್ಯರಿಗೆ ಗೊತ್ತಾಗಿದ್ದು ‘ಕಾಮನಬಿಲ್ಲು’ ಚಿತ್ರದಿಂದ. ಚಿ. ದತ್ತರಾಜ್ ನಿರ್ದೇಶನದ ಈ ಚಿತ್ರದ ಆರಂಭದಲ್ಲಿ ರಾಜಕುಮಾರ್ ಅವರು ಯೋಗ ಮಾಡುವ ದೃಶ್ಯಗಳಿವೆ. ಈ ದೃಶ್ಯಗಳು ಜನಪ್ರಿಯವಾಗುವುದರ ಜತೆಗೆ ಸಾಕಷ್ಟು ಜನರಿಗೆ ಸ್ಫೂರ್ತಿಯಾಯಿತು. ಯೋಗಾಭ್ಯಾಸ ಮಾಡುವುದಕ್ಕೆ ಹಲವರಿಗೆ ಪ್ರೇರೇಪಣೆಯಾಯಿತು ಎನ್ನುವುದು ವಿಶೇಷ.

    ಒಂದೇ ದಿನಕ್ಕೆ ಸೀಮಿತವಲ್ಲ … ಯೋಗದ ಮಹತ್ವ ಸಾರಿದ ತಾರೆಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts