More

    ಇವಿಎಂ ಯಂತ್ರ ಪರಿಶೀಲಿಸಿದ ಸಿಬ್ಬಂದಿ

    ಹುಬ್ಬಳ್ಳಿ: ನಗರದ ಲ್ಯಾಮಿಂಗ್ಟನ್ ಪ್ರೌಢಶಾಲೆ ಹಾಗೂ ಸರ್ಕಾರಿ ಪಾಲಿಟೆಕ್ನಿಕ್‌ನ ಮಸ್ಟರಿಂಗ್ ಕೇಂದ್ರದಲ್ಲಿ ಧಾರವಾಡ ಲೋಕಸಭಾ ಚುನಾವಣೆ ನಿಮಿತ್ತ ಹು-ಧಾ ಕೇಂದ್ರ ಹಾಗೂ ಪೂರ್ವ ವಿಧಾನಸಭಾ ಕ್ಷೇತ್ರದ ಚುನಾವಣಾ ಸಿಬ್ಬಂದಿ ತಮ್ಮ ಇವಿಎಂ ಯಂತ್ರಗಳನ್ನು ಸೋಮವಾರ ಪರಿಶೀಲಿಸಿದರು.
    ಬೆಳಗ್ಗೆಯಿಂದಲೇ ಕೇಂದ್ರಕ್ಕೆ ಆಗಮಿಸಿದ ಸಿಬ್ಬಂದಿ ತಮ್ಮ ತಮ್ಮ ಕೊಠಡಿಗಳಲ್ಲಿ ಇವಿಎಂ ಯಂತ್ರ ಪರಿಶೀಲನೆ ಮಾಡಿಕೊಂಡರು. ಪ್ರತಿಯೊಬ್ಬ ಬೂತ್‌ಗೆ ಸಿಬ್ಬಂದಿ ಹಾಗೂ ಪೊಲೀಸ್ ನಿಯೋಜನೆ ಮಾಡುವ ದೃಶ್ಯಗಳು ಕಂಡು ಬಂದವು. ಚುನಾವಣೆಗೆ ತೆರಳುವ ಮುನ್ನ ಸಿಬ್ಬಂದಿ ಅಂಚೆ ಮತದಾನ ಮಾಡಿದರು.
    4 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ: ಬಂದೋಬಸ್ತ್ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ಚುನಾವಣೆ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭದ್ರತೆಗೆ 4ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದರು.
    ತಮಿಳುನಾಡಿನಿಂದ ಹೆಚ್ಚಿನ ಸಿಬ್ಬಂದಿಯನ್ನು ಕರೆಯಿಸಿಕೊಳ್ಳಲಾಗಿದೆ. ಅದರಂತೆ ಸಿಆರ್‌ಪಿಎಫ್, ಕೆಎಸ್‌ಆರ್‌ಪಿ ತುಕಡಿ ಸೇರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಗಮಿಸಿದ್ದಾರೆ ಎಂದರು.
    ಸೂಕ್ಷ್ಮ ಮತ್ತು ಸಾಮಾನ್ಯ ಬೂತ್‌ಗಳನ್ನು ಗುರುತಿಸಲಾಗಿದೆ. ಸೂಕ್ಷ್ಮ ಬೂತ್‌ಗಳಲ್ಲಿ ಇಬ್ಬರು, ಸಾಮಾನ್ಯ ಬೂತ್‌ನಲ್ಲಿ ಒಬ್ಬರನ್ನು ನೇಮಕ ಮಾಡಲಾಗಿದೆ. ಈ ಎಲ್ಲ ಪ್ರಕ್ರಿಯೆ ನೋಡಿಕೊಳ್ಳಲು 42 ಸೆಕ್ಟರ್ ಮೊಬೈಲ್ ವಾಹನ ಇರಿಸಲಾಗಿದೆ. ಇದನ್ನು ಪಿಎಸ್‌ಐ, ಎಎಸ್‌ಐ ನೇತೃತ್ವದಲ್ಲಿ ಪೆಟ್ರೋಲಿಂಗ್ ಕಾರ್ಯ ನಡೆಯಲಿದೆ. ಇವರ ಮೇಲೆ 11 ಸೂಪರವೈಸರ್ ಮೊಬೈಲ್ ವಾಹನಗಳು ಪೊಲೀಸ್ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ಕೆಲಸ ಮಾಡಲಿವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts