ಭಾರತದಲ್ಲಿ ಟೆಲಿಗ್ರಾಮ್​ ಬ್ಯಾನ್​! ನಿಜವಾಗಲಿದೆ ಖ್ಯಾತ ಯೂಟ್ಯೂಬರ್​ ಹರ್ಷ ಸಾಯಿ ಹೇಳಿದ ಮಾತು

Telegram
Published on

ನವದೆಹಲಿ: ಜನಪ್ರಿಯ ಮೆಸೇಜಿಂಗ್ ಆಪ್​​ಗಳಲ್ಲಿ ಒಂದಾದ ಟೆಲಿಗ್ರಾಮ್ ಭಾರತದಲ್ಲಿ ಬ್ಯಾನ್ ಆಗುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಟೆಲಿಗ್ರಾಮ್ ಮೂಲಕ ನಡೆಯುತ್ತಿರುವ ಸುಲಿಗೆ ಮತ್ತು ಜೂಜಾಟದಂತಹ ಅಪರಾಧ ಚಟುವಟಿಕೆಗಳನ್ನು ತಡೆಯಲು ಕಂಪನಿ ವಿಫಲವಾಗಿದೆ ಎಂಬ ಆರೋಪದ ಮೇಲೆ ಟೆಲಿಗ್ರಾಮ್‌ ಸಿಇಒ ಪಾವೆಲ್ ಡುರೊವ್ ಅವರನ್ನು ಫ್ರೆಂಚ್ ಸರ್ಕಾರವು ಬಂಧಿಸಿದೆ.

ಡುರೋವ್​ ಬಂಧನವಾಗುತ್ತಿದ್ದಂತೆ ಭಾರತ ಸರ್ಕಾರ ಕೂಡ ಟೆಲಿಗ್ರಾಮ್ ಅಪ್ಲಿಕೇಶನ್ ಅನ್ನು ಗಂಭೀರವಾಗಿ ಪರಿಗಣಿಸುತ್ತಿರುವುದಾಗಿ ತಿಳಿದುಬಂದಿದೆ. ತನಿಖೆ ಸಹ ಆರಂಭಿಸಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ತನಿಖೆಯ ಫಲಿತಾಂಶಗಳ ಪ್ರಕಾರ ಭಾರತದಲ್ಲಿ ಟೆಲಿಗ್ರಾಮ್ ಅನ್ನು ಬ್ಯಾನ್​ ಮಾಡುವ ಸಾಧ್ಯತೆ ಇದೆ. ಸುಲಿಗೆ ಹಾಗೂ ಜೂಜಾಟದಂತಹ ಅಪರಾಧಗಳಿಗೆ ಟೆಲಿಗ್ರಾಮ್ ಒಂದು ಅಡ್ಡವಾಗಿದೆ ಎಂಬ ಆರೋಪಗಳಿವೆ. ಇವು ಸಾಬೀತಾದರೆ ದೇಶದಲ್ಲಿ ಟೆಲಿಗ್ರಾಮ್ ನಿಷೇಧಿಸುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ ಎಂದು ವರದಿಯಾಗಿದೆ.

<p>" class="wp-image-2312115 size-medium" height="183" src="https://www.vijayavani.net/wp-content/uploads/2024/08/Pavel-Darov-300x183.jpg" width="300"/>

ಅಂದಹಾಗೆ ಟೆಲಿಗ್ರಾಮ್​ ಸಿಇಒ ಪಾವೆಲ್ ಡುರೋವ್​ ಬಂಧನದ ಬಳಿಕ ಟೆಲಿಗ್ರಾಮ್​​ನಲ್ಲಿ ನಡೆಯುತ್ತಿರುವ ದೌರ್ಜನ್ಯ ಬೆಳಕಿಗೆ ಬಂದಿದೆ. ಆದರೆ, ಇದಕ್ಕೂ ಮುನ್ನ ಟೆಲಿಗ್ರಾಮ್​ನಲ್ಲಿ ಅಪರಾಧಗಳು ನಡೆಯುತ್ತಿವೆ ಎಂದು ಯೂಟ್ಯೂಬರ್ ಹರ್ಷ ಸಾಯಿ ಹೇಳಿದ್ದರು. ಟೆಲಿಗ್ರಾಮ್​ ಆಧರಿಸಿ ಅಕ್ರಮ ಬೆಟ್ಟಿಂಗ್ ಮಾಫಿಯಾ ನಡೆಯುತ್ತಿದ್ದು, ಲಕ್ಷಗಟ್ಟಲೆ ಹಣ ಹೂಡಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಹರ್ಷ ಸಾಯಿ ಆರೋಪಿಸಿದ್ದರು. ಇಂತಹ ಆ್ಯಪ್​ಗಳನ್ನು ದೇಶದಲ್ಲಿ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದರು.

ಆದರೆ ಹರ್ಷ ಸಾಯಿ ಹೇಳಿದಂತೆ ಅಕ್ರಮ ಬೆಟ್ಟಿಂಗ್ ಮಾತ್ರವಲ್ಲ, ಈ ಆ್ಯಪ್​ನಲ್ಲಿ ಹಲವು ರೀತಿಯ ಅಪರಾಧ ಕೃತ್ಯಗಳು ನಡೆಯುತ್ತಿವೆ ಎಂಬ ಆರೋಪಗಳಿವೆ. ಟೆಲಿಗ್ರಾಮ್‌ನಲ್ಲಿ ಅಕ್ರಮ ಬೆಟ್ಟಿಂಗ್‌ನ ಹೊರತಾಗಿ, ಚಲನಚಿತ್ರ ಪೈರಸಿ, ಪೋರ್ನ್ ವೀಡಿಯೊಗಳು, ನಕಲಿ ಷೇರು ಮಾರುಕಟ್ಟೆ ಹೂಡಿಕೆಯಂತಹ ಹಲವಾರು ರೀತಿಯ ವಂಚನೆಗಳು ಮತ್ತು ಅಪರಾಧಗಳಿವೆ. ಹರ್ಷ ಸಾಯಿ ಹೇಳಿದ್ದಕ್ಕಿಂತ ಹೆಚ್ಚಾಗಿ ಈ ಟೆಲಿಗ್ರಾಮ್​ನಲ್ಲಿ ದೌರ್ಜನ್ಯಗಳು ಮತ್ತು ಅಪರಾಧಗಳು ನಡೆಯುತ್ತಿವೆ. ಟೆಲಿಗ್ರಾಮ್​ ಅಪರಾಧಿಗಳ ಬಲೆಯಲ್ಲಿ ಸಿಲುಕಿದ್ದು, ಅದನ್ನು ತಡೆಯಲು ವಿಫಲವಾಗಿದ್ದಕ್ಕೆ ಟೆಲಿಗ್ರಾಮ್ ಸಿಇಒ ಪೊವೆಲ್ ಅವರನ್ನು ಫ್ರೆಂಚ್ ಸರ್ಕಾರವು ಬಂಧಿಸಿದೆ.

ಇದೀಗ ಪೊವೆಲ್ ಬಂಧನದ ಬಳಿಕ ಭಾರತ ಸರ್ಕಾರವು ದೇಶದಲ್ಲಿ ಟೆಲಿಗ್ರಾಮ್ ಅನ್ನು ನಿಷೇಧಿಸುವ ಕೆಲಸ ಮಾಡುತ್ತಿದೆ. ಹಾಗೇನಾದರೂ ನಡೆದರೆ, ಇನ್ನು ಮುಂದೆ ಟೆಲಿಗ್ರಾಮ್​ನಲ್ಲಿ ಅಕ್ರಮ ಬೆಟ್ಟಿಂಗ್ ಮಾಫಿಯಾ ಕಾರ್ಯನಿರ್ವಹಿಸುವುದಿಲ್ಲ. ಇದರಿಂದ ಹಲವಾರು ಅಮಾಯಕರ ಜೀವ ಉಳಿಯಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net