ಅನ್ಯ ಜಾತಿಯವನೊಂದಿಗೆ ಸರಸ-ಸಲ್ಲಾಪ ನಡೆಸಿ ಬಸಿರಾದ ಮಗಳನ್ನು ತಂದೆ-ತಾಯಿಯೇ ಕೊಂದುಬಿಟ್ಟರು...

Murder 9 June 20
Published on

ಹೈದರಾಬಾದ್: ಮಲಗಿದ್ದ ಮಗಳನ್ನು ತಂದೆ-ತಾಯಿ ಇಬ್ಬರೂ ಸೇರಿ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ತೆಲಂಗಾಣದ ಜೋಗುಲಂಬಾ-ಗಡ್ವಾಲ್ ಜಿಲ್ಲೆಯಲ್ಲಿ ನಡೆದಿದೆ.

ಮೃತ ಯುವತಿಗೆ ಇನ್ನೂ 20 ವರ್ಷ. ಕರ್ನೂಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ಓದುತ್ತಿದ್ದಳು. ಆಕೆ ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಳು. ಇದಕ್ಕೆ ತಂದೆ-ತಾಯಿಯ ಒಪ್ಪಿಗೆ ಇರಲಿಲ್ಲ. ಆಂಧ್ರಪ್ರದೇಶದ ಕರ್ನೂಲ್​​ನಲ್ಲಿಯೇ ಇದ್ದು ಓದುತ್ತಿದ್ದ ವೇಳೆ ಅನ್ಯ ಜಾತಿಯವನೊಂದಿಗೆ ಪ್ರೀತಿಯಲ್ಲಿ ಬಿದ್ದ ಯುವತಿ, ಆತನೊಂದಿಗೆ ದೈಹಿಕ ಸಂಪರ್ಕವನ್ನೂ ಹೊಂದಿದ್ದಳು. ಇದನ್ನೂ ಓದಿ: ದೀಪಿಕಾ ಬಾಡಿಗಾರ್ಡ್​ ಸಂಬಳ ಎಷ್ಟು ಹೇಳಿ?

ಲಾಕ್​ಡೌನ್​ನಿಂದಾಗಿ ಆಕೆ ಮನೆಗೆ ವಾಪಸ್ ಬಂದಿದ್ದಳು. ಅವಳಿಗೆ ತಿಂಗಳ ಮುಟ್ಟಾಗದ ಕಾರಣ ಪಾಲಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಪರಿಶೀಲನೆ ನಡೆಸಿದ ವೈದ್ಯರು ಆಕೆ ಗರ್ಭಿಣಿ. 2.5 ತಿಂಗಳಾಗಿದೆ ಎಂಬ ಶಾಕಿಂಗ್​ ಸತ್ಯವನ್ನು ಪಾಲಕರಿಗೆ ತಿಳಿಸಿದರು. ಅದನ್ನು ಕೇಳಿ ತೀವ್ರ ಕಂಗಾಲಾದ ಪಾಲಕರು ಮಗುವನ್ನು ತೆಗೆಸಿಬಿಡೋಣ. ಅಬಾರ್ಶನ್​ ಮಾಡಿಸೋಣ ಎಂದು ಮಗಳನ್ನು ಒತ್ತಾಯಿಸುತ್ತಲೇ ಇದ್ದರು. ಆದರೆ ಯುವತಿ ಮಾತ್ರ ಅದಕ್ಕೆ ಒಪ್ಪಲೇ ಇಲ್ಲ. ಮಗುವನ್ನು ತೆಗೆಸೋದಿಲ್ಲ ಎಂದು ಪಟ್ಟು ಹಿಡಿದಿದ್ದಳು. ಇದನ್ನೂ ಓದಿ: ನೋಡಿದಿರಾ… ಶ್ವೇತವರ್ಣದ ಮಯೂರ ನಾಟ್ಯ?

ಈ ದಂಪತಿಗೆ ಇನ್ನೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಭಾನುವಾರ ರಾತ್ರಿ ಆ ಇಬ್ಬರು ಮಲಗಿದ ಮೇಲೆ, ಈಕೆಯ ಕತ್ತು ಹಿಸಿಕಿ ಸಾಯಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಹತ್ಯೆ ಮಾಡಿದ ಬಳಿಕ, ತಮಗೇನೂ ಗೊತ್ತಿಲ್ಲದಂತೆ ನಡೆದುಕೊಂಡಿದ್ದಾರೆ. ಇಡೀ ಮೃತದೇಹವನ್ನು ಬಟ್ಟೆಯಿಂದ ಸುತ್ತಿ, ತಾವೂ ಅತ್ತಿದ್ದಾರೆ. ಆದರೆ ನೆರೆ ಮನೆಯ ಕೆಲವರಿಗೆ ಹುಡುಗಿಯ ಕುತ್ತಿಗೆ ಮೇಲೆ ಕೆಂಪಾದ ಗುರುತುಗಳು ಕಂಡುಬಂದಿದೆ. ಅದನ್ನು ಪೊಲೀಸರಿಗೆ ಅವರು ತಿಳಿಸಿದ ಬಳಿಕ, ಪೊಲೀಸ್​ ಅಧಿಕಾರಿಗಳ ತಂಡವೊಂದು ಅಲ್ಲಿ ತೆರಳಿತ್ತು. ಇದನ್ನೂ ಓದಿ: ಪತಿಗೆ ಉಡುಗೊರೆಯಾಗಿ ಮಗು ನೀಡುವ ತವಕದಲ್ಲಿದ್ದ ಪತ್ನಿಗೆ ಆ ಒಂದು ಸುದ್ದಿ ಸಿಡಿಲು ಬಡಿದಂತಾಯಿತು

ಯುವತಿಯ ಮೃತದೇಹವನ್ನು ಪೋಸ್ಟ್​ ಮಾರ್ಟ್ಂಗೆ ಒಳಪಡಿಸಿದಾಗ ಆಕೆಯ ಕುತ್ತಿಗೆ ಹಿಸುಕಲಾಗಿದೆ ಎಂಬುದು ಸಾಬೀತಾಗಿದೆ. ಆಗ ಪೊಲೀಸರು ತಂದೆ-ತಾಯಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ನಂತರ ಅವರೂ ಸತ್ಯವನ್ನೂ ಒಪ್ಪಿಕೊಂಡಿದ್ದಾರೆ. ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net