ಹೈದರಾಬಾದ್: ಅಕ್ಬರುದ್ದೀನ್ ಓವೈಸಿ ಹಂಗಾಮಿ ಸ್ಪೀಕರ್ ಆಗಿದ್ದನ್ನು ಪ್ರತಿಭಟಿದಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮವನ್ನು ಬಹಿಷ್ಕರಿಸಿದರು.
ಇದನ್ನೂ ಓದಿ: ಸೋನಿಯಾ ಗಾಂಧಿಗೆ 77: ರಾಜಕೀಯ ವೈರತ್ವ ಮೀರಿ ಮನಸಾರೆ ಶುಭ ಕೋರಿದ ವಿಶಿಷ್ಟ ವ್ಯಕ್ತಿ
ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್‌ನ ಅಕ್ಬರುದ್ದೀನ್ ಓವೈಸಿ ಅವರನ್ನು ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ನೇಮಿಸಿರುವುದನ್ನು ಶನಿವಾರ ತೀವ್ರವಾಗಿ ಆಕ್ಷೇಪಿಸಿದ್ದು, ಇದು ಹಿರಿಯ ಶಾಸಕರಿಗೆ ಮಾಡಿದ ಅವಮಾನ ಎಂದು ಹೇಳಿದ್ದಾರೆ. ಹಿರಿಯ ಶಾಸಕರನ್ನು ನೇಮಕ ಮಾಡುವ ಸಂಪ್ರದಾಯಕ್ಕೆ ಇದು ವಿರುದ್ಧವಾಗಿದೆ. ಹೀಗಾಗಿ ನಮ್ಮ ಶಾಸಕರು ಓವೈಸಿ ಅವರಿಂದ ಪ್ರಮಾಣವಚನ ಸ್ವೀಕರಿಸುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಕೇಂದ್ರ ಸಚಿವ ಕಿಷನ್ ರೆಡ್ಡಿ ಆರೋಪಿಸಿದರು.
ನಾವು ಎಂಟು ಸ್ಥಾನಗಳನ್ನು ಗೆದ್ದಿದ್ದೇವೆ. ರಾಜ್ಯದಲ್ಲಿ ಶೇಕಡಾ 14 ರಷ್ಟು ಮತ ಪಡೆದಿದ್ದೇವೆ. ಹಿರಿಯ ನಾಯಕರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸುವ ಪದ್ಧತಿ ಇದೆ. ಆದರೆ, ಎಐಎಂಐಎಂ ಜತೆಗಿನ ಒಳೊಪ್ಪಂದದಿಂದಾಗಿ ಕಾಂಗ್ರೆಸ್ ಅಕ್ಬರುದ್ದೀನ್ ಓವೈಸಿ ಅವರನ್ನು ಆ ಸ್ಥಾನಕ್ಕೆ ನೇಮಿಸಿದೆ. ಇದನ್ನು ನಾವು ವಿರೋಧಿಸುತ್ತೇವೆ. ಹಂಗಾಮಿ ಸಭಾಪತಿಯಿಂದ ವಿಧಾನಸಭಾಧ್ಯಕ್ಷರ ಆಯ್ಕೆ ನಡೆಯಬಾರದು ಎಂದು ಆಗ್ರಹಿಸುತ್ತೇವೆ. ಅದನ್ನೇ ರಾಜ್ಯಪಾಲರಿಗೂ ತಿಳಿಸುತ್ತೇವೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪೊಲೀಸ್ ಬಿಗಿ ಬಂದೋಬಸ್ತ್: ವಿಧಾನಸಭೆಯಲ್ಲಿ ಶಾಸಕರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗುವುದು ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದ್ದಾರೆ.
ರಾಜಭವನದಲ್ಲಿ ಹಂಗಾಮಿ ಸ್ಪೀಕರ್ ಆಗಿ ಓವೈಸಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲೇ ಕಿಷನ್ ರೆಡ್ಡಿ ಈ ಹೇಳಿಕೆ ನೀಡಿದ್ದಾರೆ. ಅದರೆ ಹಂಗಾಮಿ ಸ್ಪೀಕರ್ ತಾತ್ಕಾಲಿಕ ಪಾತ್ರವನ್ನು ನಿರ್ವಹಿಸುತ್ತಾರೆ, ಹೊಸದಾಗಿ ಚುನಾಯಿತ ಸದಸ್ಯರು ಪ್ರಮಾಣ ವಚನ ಸ್ವೀಕರಿಸುವವರೆಗೆ ಮತ್ತು ಸ್ಪೀಕರ್ ಆಯ್ಕೆಯಾಗುವವರೆಗೆ ವಿಧಾನಸಭೆ ಅಧಿವೇಶನವನ್ನು ನಿರ್ವಹಿಸುತ್ತಾರೆ. ಹೀಗಾಗಿ ಬಿಜೆಪಿ ಶಾಸಕರು ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಬೇಕು ಎಂದು ರೇವಂತ್ರೆಡ್ಡಿ ಮನವಿಮಾದಿಕೊಂಡರು.
ಹಂಗಾಮಿ ಸ್ಪೀಕರ್ ಆಗಿ ಓವೈಸಿ ಅವರ ನೇಮಕಕ್ಕೆ ಬಿಜೆಪಿ ಶಾಸಕ ರಾಜಾ ಸಿಂಗ್ ವಿರೋಧ ವ್ಯಕ್ತಪಡಿಸಿದ್ದಾರೆ,. ಮತ್ತು ಅವರು ಮತ್ತು ಇತರ ಬಿಜೆಪಿ ಶಾಸಕರು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ. ಅಷ್ಟೇ ಅಲ್ಲ, ಎಐಎಂಐಎಂ ಮುಂದೆ ತಾನು ಬದುಕಿರುವವರೆಗೂ ಪ್ರಮಾಣ ವಚನ ಸ್ವೀಕರಿಸುವುದಿಲ್ಲ ಎಂದು ಘೋಷಿಸಿದರು. ಓವೈಸಿ ಈ ಹಿಂದೆ ಹಿಂದು ವಿರೋಧಿ ಹೇಳಿಕೆಗಳನ್ನು ನೀಡಿದ್ದು, ನಾನೊಬ್ಬ ಹಿಂದುವಾಗಿ ಆತನ ಮುಂದೆ ನಾನು ಪ್ರಮಾಣ ವಚನ ಸ್ವೀಕರಿಸಬಹುದೇ? ಎಂದು ರಾಜಾ ಸಿಂಗ್ ಪ್ರಶ್ನಿಸಿದರು.
2018ರಲ್ಲಿ ಎಐಎಂಐಎಂ ಸದಸ್ಯರೊಬ್ಬರು ಹಂಗಾಮಿ ಸ್ಪೀಕರ್ ಆಗಿದ್ದಾಗ ತಾವು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿರಲಿಲ್ಲ ಎಂದು ಸ್ಮರಿಸಿದರು. ಇದು ಅತ್ಯಂತ ದುರದೃಷ್ಟಕರ. ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಕಾಂಗ್ರೆಸ್‌ನ ಮುಖವಾಡ ಬಯಲಾಗಿದೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ಬಿಆರ್‌ಎಸ್, ಎಐಎಂಐಎಂ ನಡುವೆ ಒಳೊಪ್ಪಂದವಿದೆ ಎಂದು ಆರೋಪಿಸಿದರು.
ಭಾರತದಲ್ಲಿ ಭಯೋತ್ಪಾದನೆಗೆ ಐಸಿಸ್ ಸಂಚು: ಕರ್ನಾಟಕ, ಮಹಾರಾಷ್ಟ್ರದ 44 ಕಡೆ ಎನ್ಐಎ ದಾಳಿ -13 ಶಂಕಿತರ ಬಂಧನ