ಐಟಿಎಫ್​ ಟೂರ್ನಿಯ ನಡುವೆ ಮೃತಪಟ್ಟ ಪಾಕಿಸ್ತಾನದ ಉದಯೋನ್ಮುಖ ಟೆನಿಸ್​ ಆಟಗಾರ್ತಿ!

pak tennis web
Published on

ಇಸ್ಲಾಮಾಬಾದ್​: ಪಾಕಿಸ್ತಾನದ 17 ವರ್ಷದ ಟೆನಿಸ್​ ಆಟಗಾರ್ತಿ ಜೈನಾಬ್​ ಅಲಿ ನಖ್ವಿ ಐಟಿಎಫ್​ ಜೂನಿಯರ್​ ಟೆನಿಸ್​ ಟೂರ್ನಿಯಲ್ಲಿ ಅಭ್ಯಾಸ ನಡೆಸಿ ಹೋಟೆಲ್​ ಕೋಣೆಗೆ ಮರಳಿದ ಬಳಿಕ ಕುಸಿದು ಬಿದ್ದು ಮೃತಪಟ್ಟಿದ್ದು, ಹೃದಯಾಘಾತವೇ ಇದಕ್ಕೆ ಕಾರಣ ಎನ್ನಲಾಗಿದೆ.

ಸೋಮವಾರ ರಾತ್ರಿ ಜೈನಾಬ್​ ತನ್ನ ಹೋಟೆಲ್​ ಕೋಣೆಯಲ್ಲಿ ಕುಸಿದುಬಿದ್ದ ವೇಳೆ ಅವರ ಜತೆಗಿದ್ದ ಅಜ್ಜಿ ಸಹಾಯ ಯಾಚಿಸಿದ್ದರು. ಬೆನ್ನಲ್ಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಜೈನಾಬ್​ ಪಾಣ ಉಳಿಸಲು ಸಾಧ್ಯವಾಗಲಿಲ್ಲ. ಪಾಕಿಸ್ತಾನದ ಉದಯೋನ್ಮುಖ ಟೆನಿಸ್​ ಆಟಗಾರ್ತಿ ಎನಿಸಿದ್ದ ಜೈನಾಬ್​ ಐಟಿಎಫ್​ ಜೂನಿಯರ್​ ಟೂರ್ನಿಗಳಲ್ಲಿ ಗಮನಾರ್ಹ ನಿರ್ವಹಣೆ ತೋರಿದ್ದರು.

ಹೃದಯಾಘಾತದ ಸ್ವಾಭಾವಿಕ ಕಾರಣದಿಂದಲೇ ಜೈನಾಬ್​ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದು, ಆಕೆಯ ಪಾಲಕರೂ ಮರಣೋತ್ತರ ಪರೀೆ ನಡೆಸಲು ಇಚ್ಛಿಸಲಿಲ್ಲ. ಹೀಗಾಗಿ ಶವವನ್ನು ಕರಾಚಿಗೆ ಕರೆದೊಯ್ಯಲು ಹಸ್ತಾಂತರಿಸಲಾಗಿದೆ ಎಂದು ಇಸ್ಲಾಮಾಬಾದ್​ ಪೊಲೀಸರು ತಿಳಿಸಿದ್ದಾರೆ. ಹೃದಯದ ಸ್ನಾಯ ದಪ್ಪಗಾಗುವ ಹೈಪಟ್ರೋರ್ಫಿಕ್​ ಕಾರ್ಡಿಯೊಮಿಯೋಪತಿ ಎಂಬ ಕಾಯಿಲೆಯಿಂದ ಆಕೆ ಬಳಲುತ್ತಿದ್ದರು ಎಂದೂ ವೈದ್ಯರು ಶಂಕಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net