

ಯುಎಸ್ ಮಹಿಳೆಯೋರ್ವರ ಕತೆಯಿದು...ಲೈಂಗಿಕ ಸಂಪರ್ಕಹೊಂದದೆ..ಬಸಿರಾಗಿ ಮಗುವನ್ನು ಹೆತ್ತವಳು ಹೇಳಿಕೊಂಡ ಅಚ್ಚರಿಯ ಕತೆ !ಸಮಂತಾ ಲಿನ್ ಇಸಾಬೆಲ್ ಎಂಬುವರಿಗೆ ಈಗ 24 ವರ್ಷ. ಇತ್ತೀಚೆಗೆ ಟಿಕ್ಟಾಕ್ನಲ್ಲಿ ತಮ್ಮ ಬಗ್ಗೆ ಹೇಳಿಕೊಂಡಿದ್ದಾರೆ.
ಆಗ ಆಕೆಗೆ 19 ವರ್ಷ. ಒಂದು ತಿಂಗಳು ಮುಟ್ಟಾಗಲಿಲ್ಲ. ಹಾಗೇ ಹೊಟ್ಟೆಯಲ್ಲಿ ಏನೋ ಸಂಕಟ ಶುರುವಾಯಿತು. ವೈದ್ಯರ ಬಳಿ ಹೋದಾಗ ಅವಳು ಗರ್ಭಿಣಿ ಎಂಬುದು ಗೊತ್ತಾಯಿತು. ಆದರೆ ಆಗ ಅವಳಿಗೆ ಸಿಕ್ಕಾಪಟೆ ಶಾಕ್ ಆಯಿತು. ಯಾಕೆಂದರೆ ಇಸಾಬೆಲ್ ಲೈಂಗಿಕ ಸಂಪರ್ಕಹೊಂದಿರಲಿಲ್ಲ. ನನಗೆ ಬಾಯ್ಫ್ರೆಂಡ್ ಇದರೂ ಕೂಡ, ಒಮ್ಮೆಯೂ ಪೆನೆಟ್ರೇಟಿವ್ ಸೆಕ್ಸ್ ಮಾಡಿರಲಿಲ್ಲ. ಸುಮ್ಮನೆ ಒಬ್ಬರಿಗೊಬ್ಬರು ಮುದ್ದಾಡಿಕೊಳ್ಳುವುದಷ್ಟೇ ಆಗಿತ್ತು. ಆದರೆ ನಾನು ಹೇಗೆ ಗರ್ಭಿಣಿಯಾದರೆ ಎಂಬುದೇ ನನಗೆ ಗೊತ್ತಾಗಲಿಲ್ಲ ಎಂದು ಸಮಂತಾ ಹೇಳಿಕೊಂಡಿದ್ದಾರೆ.
ಅದಾದ ಬಳಿಕ ಗೆಳೆಯನೊಂದಿಗೆ ಸೇರಿ ಸುಮಾರು ಆಸ್ಪತ್ರೆಗಳಿಗೆ ಹೋಗಿ ಮರು ಪರೀಕ್ಷೆ ಮಾಡಿಸಿದ್ದೇನೆ. ಏನಿಲ್ಲವೆಂದರೂ ಒಟ್ಟು 6 ಬಾರಿ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಿದೆ. ಎಲ್ಲದರಲ್ಲೂ ನಾನು ಗರ್ಭಿಣಿ ಎಂದೇ ರಿಪೋರ್ಟ್ ಬಂತು..ನನಗೆ ಆಗ ಒಂದೂವರೆ ತಿಂಗಳಾಗಿದೆ ಎಂದೇ ಎಲ್ಲ ವೈದ್ಯರೂ ತಿಳಿಸಿದರು ಎಂದಿದ್ದಾರೆ. ಇದನ್ನೂ ಓದಿ: ‘ನಮ್ಮ ಮನೆಯ ದುಷ್ಟ ಬೆಕ್ಕಿನಿಂದ ನನ್ನ ಪತ್ನಿ ಗರ್ಭಿಣಿಯಾಗಿದ್ದಾಳೆ…’-ಬೇಸ್ತು ಬಿದ್ದ ಪತಿ ಮಹಾಶಯನ ಅಳಲು
ನಂತರ ಗಂಡು ಮಗು ಜನಿಸಿತು. ಈಗವನಿಗೆ ಐದು ವರ್ಷ. ಹಾಗೇ ಇನ್ನೊಂದು ಮಗು ಕೂಡ ನಂತರ ಹುಟ್ಟಿತು. ನನ್ನ ಮನೆಯಲ್ಲಿ ಎಲ್ಲರೂ ವರ್ಜಿನ್ ಮೇರಿ ಎಂದೇ ನನ್ನನ್ನು ಕರೆಯುತ್ತಾರೆ. ಸೆಕ್ಸ್ ಮಾಡದೆಯೇ ಗರ್ಭ ಧರಿಸಿ ಮಗುವಿಗೆ ಜನ್ಮ ನೀಡಿದ್ದಕ್ಕೆ ಈ ಹೆಸರು ಬಂತು ಎಂದು ಸಮಂತಾ ತಿಳಿಸಿದ್ದಾರೆ.
ಈ ಬಗ್ಗೆ ನ್ಯೂಯಾರ್ಕ್ನ ಸ್ತ್ರೀರೋಗ ತಜ್ಞರಾದ ಡಾ. ಅಲ್ಯಸ್ಸಾ ಡ್ವೆರ್ಕ್ ಅವರೂ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇವರಿಬ್ಬರೂ ಒಟ್ಟಿಗೆ ಇದ್ದಾಗ ಪುರುಷನಿಗೆ ಸ್ಖಲನವಾಗಿ ವೀರ್ಯ ಆಕೆಯ ಜನನೇಂದ್ರಿಯದ ಮೂಲಕ ಪ್ರವೇಶಿಸಿರಬಹುದು. ಅಪರೂಪದ ಪ್ರಕರಣದಲ್ಲಿ ಮೇಲಿಂದ ತಾಗಿದರೂ ಗರ್ಭಧಾರಣೆಯಾಗುತ್ತದೆ. ಇದಕ್ಕೆ ಉದಾಹರಣೆಗಳು ಇವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)