ಕೃತಕ ಬುದ್ಧಿಮತ್ತೆ ಅನ್ನೋದು ಕೇವಲ ತಂತ್ರಜ್ಞಾನವಾಗಿ ಉಳಿದಿಲ್ಲ, ಇದು ನಮ್ಮ ದೈನಂದಿನ ಜೀವನದ ಪ್ರತಿಯೊಂದು ಅಂಶದ ಮೇಲೆ ಪರಿಣಾಮ ಬೀರುವ ಶಕ್ತಿಯಾಗಿ ಬದಲಾಗುತ್ತಿದೆ. ತಜ್ಞರು AI ಅನ್ನು 'ಹೊಸ ಆತ್ಮೀಯ ಸ್ನೇಹಿತ' ಎಂದು ಕರೆಯುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣವೇನೆಂದರೆ, ಎಐ ನಮಗೆ ಮಾಡುತ್ತಿರುವ ಸಹಾಯ. ಇದರಲ್ಲಿ ಕೆಟ್ಟದ್ದು ಕೂಡ ಇದೆ. ಆದರೆ, ನಾವು ಅದನ್ನು ಹೇಗೆ ಬಳಸುತ್ತೇವೆ ಎಂಬುವುದು ನಮಗೆ ಬಿಟ್ಟಿದ್ದು. ಮನುಷ್ಯರು ಎದುರಿಸುತ್ತಿರುವ ಒತ್ತಡ, ಆತಂಕ ಅಥವಾ ಕ್ರಿಯೇಟಿವ್ ಅಗತ್ಯಗಳನ್ನು ಪೂರೈಸುವಲ್ಲಿ AI ಅದ್ಭುತವಾಗಿ ಕೆಲಸ ಮಾಡುತ್ತಿದೆ. ಉದಾಹರಣೆಗೆ, AI ಯಾವುದೇ ಸಮಯದಲ್ಲಿ ನಮ್ಮ ಪ್ರಶ್ನೆಗಳಿಗೆ ಉತ್ತರಿಸಬಹುದು, ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡಬಹುದು ಅಥವಾ ನಮ್ಮ ಆಲೋಚನೆಗಳನ್ನು ಸಂಘಟಿಸುವಲ್ಲಿ ನಮಗೆ ಮಾರ್ಗದರ್ಶನ್ನೂ ನೀಡಬಹುದು.