2017, ಮಾರ್ಚ್ 23ರಂದು, ಹನು ನಾರಾ ಎಂಬುವರು ಮೇಪಲ್ ಶೇಡ್‌ನಲ್ಲಿರುವ ಫಾಕ್ಸ್ ಮೆಡೋ ಅಪಾರ್ಟ್‌ಮೆಂಟ್‌ನ ತಮ್ಮ ಮನೆಗೆ ಹಿಂದಿರುಗಿದರು. ಈ ವೇಳೆ ಅವರ ಪತ್ನಿ 38 ವರ್ಷದ ಪತ್ನಿ ಶಶಿಕಲಾ ನಾರಾ ಮತ್ತು ಅವರ 6 ವರ್ಷದ ಮಗ ಅನೀಶ್ ಮೃತಪಟ್ಟಿರುವುದನ್ನು ನೋಡಿ ಆಘಾತಕ್ಕೆ ಒಳಗಾದರು. ಅನೇಕ ಬಾರಿ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ, ಘಟನಾ ಸ್ಥಳದಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದರು. ತನಿಖೆ ನಡೆಯುತ್ತಿರುವ ಸಮಯದಲ್ಲಿ ಸಂಗ್ರಹಿಸಿದ ರಕ್ತದ ಮಾದರಿಗಳಲ್ಲಿ ಒಂದು ಶಶಿಕಲಾ ಅವರಿಗಾಗಲಿ ಅಥವಾ ಅವರ ಮಗನಿಗಾಗಲಿ ಹೊಂದಿಕೆಯಾಗಲಿಲ್ಲ. ಹೀಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದರು.