ಲಕ್ಷಾಂತರ ಟೆಕ್ಕಿಗಳು ಲೇ ಆಫ್: ಅಗ್ರ ಸ್ಥಾನದಲ್ಲಿ ಗೂಗಲ್​, ಇನ್ನಷ್ಟು ಟೆಕ್ಕಿಗಳು ಸಂತ್ರಸ್ತರಾಗುವ ಭೀತಿ

Lay Off
Published on

ಹೊಸ ವರ್ಷ ಆರಂಭವಾಗಿ ಕೇವಲ 40 ದಿನ ಕಳೆದಿದೆ. ಆದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇದುವರೆಗೆ ಒಂದು ಲಕ್ಷಕ್ಕೂ ಅಧಿಕ ಉದ್ಯೋಗಿಗಳು ಕೆಲಸ ಕಳೆದು ಕೊಂಡಿದ್ದು ಲೇಆಫ್ ಹಾವಳಿಯಿಂದ ಇನ್ನಷ್ಟು ಮಂದಿ ಸಂತ್ರಸ್ತರಾಗುವ ಭೀತಿಯಿದೆ. ಆರ್ಥಿಕ ಬಿಕ್ಕಟ್ಟಿನ ಒತ್ತಡದಿಂದಾಗಿ ವೆಚ್ಚ ಕಡಿತದ ಹೆಸರಿನಲ್ಲಿ ಜಗತ್ತಿನಾದ್ಯಂತ ಟೆಕ್ ಕಂಪನಿಗಳು ಕಳೆದ ತಿಂಗಳಿಂದ ಸಾಮೂಹಿಕ ಲೇಆಫ್​ಗೆ ಮುಂದಾಗಿವೆ.

ಲಭ್ಯವಾಗಿರುವ ಅಂಕಿ ಸಂಖ್ಯೆಗಳ ಪ್ರಕಾರ 2023ರಲ್ಲಿ ಇದುವರೆಗೆ 1,00,746 ಟೆಕ್ಕಿಗಳು ಲೇಆಫ್ ಆಗಿದ್ದಾರೆ.

ದಿಗ್ಗಜ ಕಂಪನಿಗಳು

ಗೂಗಲ್, ಮೈಕ್ರೋಸಾಫ್ಟ್, ಸೇಲ್ಸ್​ಫೋರ್ಸ್, ಟ್ವಿಟರ್ ಮತ್ತು ಅಮೆಜಾನ್ ಇದುವರೆಗೆ ಲೇಆಫ್ ಮಾಡಿರುವ ಕೆಲವು ಪ್ರಮುಖ ದಿಗ್ಗಜ ಕಂಪನಿಗಳು. ಲೇಆಫ್ ಯಾದಿಯಲ್ಲಿ ಯಾಹೂ ಇತ್ತೀಚಿನ ಹೊಸ ಸೇರ್ಪಡೆಯಾಗಿದೆ. ಅದರ ಜಾಹೀರಾತು ತಂತ್ರಜ್ಞಾನ ವಿಭಾಗದ ನೌಕರರಿಗೆ ಬಿಸಿ ತಟ್ಟಿದೆ. ದಿನದ (ಗುರುವಾರ) ಕೊನೆಯಲ್ಲಿ ಶೇಕಡ 12 (ಅಂದರೆ 1,000 ನೌಕರರು) ಉದ್ಯೋಗಿಗಳನ್ನು ಲೇಆಫ್ ಮಾಡುವುದಾಗಿ ಯಾಹೂ ಗುರುವಾರ ತಿಳಿಸಿತ್ತು.

ಗೂಗಲ್ ಅಗ್ರ ಸ್ಥಾನ

ತನ್ನ ಶೇಕಡ 6ರಷ್ಟು ನೌಕರರನ್ನು, ಅಂದರೆ 12,000 ಉದ್ಯೋಗಿಗಳನ್ನು ಮನೆಗೆ ಕಳಿಸುವ ಮೂಲಕ ಲೇಆಫ್ ಪರ್ವದಲ್ಲಿ ಗೂಗಲ್ ಅಗ್ರ ಸ್ಥಾನದಲ್ಲಿದೆ. ಮೈಕ್ರೋಸಾಫ್ಟ್ 10,000 ಹಾಗೂ ಅಮೆಜಾನ್ 8,000 ದೊಂದಿಗೆ ನಂತರದ ಸ್ಥಾನಗಳಲ್ಲಿವೆ.

ಯಾವ ಕಂಪನಿ? ಎಷ್ಟು ಕಡಿತ?

* ಮೈಕ್ರೋಸಾಫ್ಟ್ -10,000 (5%).

* ಅಮೆಜಾನ್ -8,000 (3%).

* ಸೇಲ್ಸ್​ಫೋರ್ಸ್ -8,000 (10%).

* ಡೆಲ್ -6,650 (5%).

* ಐಬಿಎಂ -3,900 (2%).

* ಎಸ್​ಎಪಿ -3,000 (3%).

*ಝೂಮ್ -1,300 (15%).

* ಯಾಹೂ -1,600 (20%).

* ಕಾಯಿನ್​ಬೇಸ್ -950 (20%).

* ಗಿಟ್​ಹಬ್ -300 (10%)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net