More

    VIDEO| ಮೃತ ಸ್ನೇಹಿತ ಕೊನೇ ಗೋಲು ಬಾರಿಸಲು ಟೀಮ್​ಮೇಟ್ಸ್​​ ಸಹಾಯ: ವಿಡಿಯೋ ನೋಡಿದ್ರೆ ಕಣ್ತುಂಬಿ ಬರುತ್ತೆ!

    ಮೆಕ್ಸಿಕೋ: ಹೇಳಲು ಪದಗಳೇ ಸಾಲದಂತಹ ಭಾವುಕ ವಿಡಿಯೋಗಳನ್ನು ಹಲವು ಬಾರಿ ನಾವು ಸಾಮಾಜಿಕ ಜಾಲತಾಣದಲ್ಲಿ ವೀಕ್ಷಣೆ ಮಾಡಿದ್ದೇವೆ. ಅಂಥದ್ದೇ ಮತ್ತೊಂದು ವಿಡಿಯೋ ಇದೀಗ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮೃತಪಟ್ಟ ಟೀಮ್​ಮೇಟ್​ ಕೊನೆಯ ಗೋಲ್​ ಹೊಡೆಯಲು ಸ್ನೇಹಿತರು ಒಟ್ಟಿಗೆ ಫುಟ್​ಬಾಲ್ ಆಡಿದ ಮನಕಲಕುವ​ ಘಟನೆ ನಡೆದಿದೆ.

    ಮೆಕ್ಸಿಕೋದಲ್ಲಿ ಸೆರೆಹಿಡಿದ ವಿಡಿಯೋ ಇದಾಗಿದೆ. ಟ್ವಿಟರ್​ ಬಳಕೆದಾರ ಅಲೆಕ್ಸ್​ ಸ್ಟೋನ್​ ಎಂಬಾತ ವಿಡಿಯೋ ಪೋಸ್ಟ್​ ಮಾಡಿದ್ದು, 16 ವರ್ಷದ ಬಾಲಕ ಮೆಕ್ಸಿಕೋದಲ್ಲಿ ಕೊಲೆಯಾದ. ಆತನ ಟೀಮ್​ಮೇಟ್ಸ್​ ಪ್ರತಿದಿನ ಆತ ಫುಟ್​ಬಾಲ್​ ಆಡುತ್ತಿದ್ದ ಸ್ಥಳಕ್ಕೆ ಮೃತದೇಹವನ್ನು ಕೊಂಡೊಯ್ದು, ಕೊನೆಯ ಗೋಲು ಹೊಡೆಯ ಸಹಾಯ ಮಾಡಿದರು. ಈ ರೀತಿಯನ್ನು ಎಂದೂ ನೋಡಿಲ್ಲ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸಾಕುನಾಯಿಯನ್ನು ಕರೆದೊಯ್ಯಲು ಬಾಡಿಗೆ ವಿಮಾನದಲ್ಲಿ ಬೆಂಗಳೂರಿಗೆ ಬಂದು ಮರಳಿದರು!

    ವಿಡಿಯೋದಲ್ಲಿ ಏನಿದೆ?: 54 ಸೆಕೆಂಡಿನ ವಿಡಿಯೋದಲ್ಲಿ ಫುಟ್​ಬಾಲ್​ ಕೋರ್ಟ್​ನಲ್ಲಿ ಸ್ನೇಹಿತನ ಮೃತದೇಹ ಇರುವ ಕೆಫಿನ್​ ಇಟ್ಟಿರುತ್ತಾರೆ. ಓರ್ವ ಬಾಲ್​ ಅನ್ನು ಮತ್ತೋರ್ವನಿಗೆ ಪಾಸ್​ ಮಾಡಿದಾಗ ಆತನ ಚೆಂಡನ್ನು ಕೆಫಿನ್​ ಕಡೆಗೆ ಒದೆಯುತ್ತಾನೆ. ಕೆಫಿನ್​ಗೆ ತಾಗಿದ ಬಾಲ್​ ಸೀದ ಗೋಲಿನೊಳಗೆ ಹೋಗುತ್ತದೆ. ಬಳಿಕ ಎಲ್ಲರೂ ಸಂತೋಷದಿಂದ ಬಂದ ಕೆಫಿನ್​ ಅನ್ನು ತಬ್ಬಿಕೊಂಡು ಅಗಲಿದ ಟೀಮ್​ಮೇಟ್​ಗೆ ಕಂಬನಿ ಮಿಡಿಯುತ್ತಾರೆ. ಈ ವೇಳೆ ಅಲ್ಲಿ ನೆರೆದಿದ್ದ ಗುಂಪು ಚಿಯರ್​ ಮಾಡಿರುವುದನ್ನು ಹಿನ್ನೆಲೆ ಧ್ವನಿಯಲ್ಲಿ ಕೇಳಬಹುದಾಗಿದೆ.

    16 ವರ್ಷದ ಮೆಕ್ಸಿಕನ್​ ಹುಡುಗನ ಹೆಸರು ಅಲೆಕ್ಸಾಂಡರ್​ ಮಾರ್ಟಿನೆಜ್​, ಆತನನ್ನು ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮೃತದೇಹವನ್ನು ಫುಟ್​ಬಾಲ್​ ಸ್ಟೇಡಿಯಂಗೆ ತೆಗೆದುಕೊಂಡು ಹೋಗಿ ಅಂತಿಮ ನಮನ ಸಲ್ಲಿಸಿದ ಬಳಿಕ ಗುರುವಾರ ಅಂತ್ಯಕ್ರಿಯೆ ನೆರವೇರಿಸಲಾಯಿತು. (ಏಜೆನ್ಸೀಸ್​) ಇದನ್ನೂ ಓದಿ: VIDEO| ಶೂ ಧರಿಸಿಕೊಂಡು ಶಿವನ ವಿಗ್ರಹ ಪೀಠದ ಮೇಲೆ ಟಿಕ್​ಟಾಕ್​ ಮಾಡಿದ ನಾಲ್ವರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts