ಯಜ್ಞ ತಂಡದಿಂದ ಸಸಿ ನೆಟ್ಟು ಸ್ನೇಹಿತರ ದಿನಾಚರಣೆ: ಫ್ರೆಂಡ್ಸ್ ಗೆ ಪರಿಸರ ರಕ್ಷಿಸುವ ಹೊಣೆ

IMG-20230807-WA0000
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರದ ಬಸವೇಶ್ವರ ಬಡಾವಣೆಯಲ್ಲಿನ ಶ್ರೀ ಶರಣಬಸವೇಶ್ವರ ಉದ್ಯಾನದಲ್ಲಿ ಭಾನುವಾರ ಟೀಮ್ ಯಜ್ಞ ತಂಡದಿAದ ಸ್ನೇಹಿತರ ದಿನವನ್ನು  ಹೂವಿನ ಗಿಡ ನೆಟ್ಟು, ಸಸಿಗಳಿಗೆ ಬ್ಯಾಂಡ್ ಕಟ್ಟಿ ಆಚರಿಸಲಾಯಿತು.
ಯಜ್ಞ ತಂಡದ ಮುಖ್ಯಸ್ಥೆ ಮಾಲಾ ದಣ್ಣೂರ ಮಾತನಾಡಿ, ಪ್ರಸ್ತುತ ಪರಿಸರ ಕಾಳಜಿ ಮರೆಯಾಗುತ್ತಿದ್ದು, ಮುಂದಿನ ತಲೆಮಾರುಗಳ ಭವಿಷ್ಯದ ದೃಷ್ಟಿಯಿಂದ ಮರಗಿಡಗಳನ್ನು ಬೆಳೆಸಬೇಕಿದೆ. ಗಾಳಿ, ಮಳೆ, ಜಾಗತಿಕ ತಾಪಮಾನ ನಿಯಂತ್ರಣದಲ್ಲಿ ಪರಿಸರ ಮಹತ್ವದ ಪಾತ್ರ ವಹಿಸುತ್ತಿದ್ದು, ಎಲ್ಲರೂ ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದರು.
ಶರಣಬಸವೇಶ್ವರ ಉದ್ಯಾನ ಅಭಿವೃದ್ಧಿ ಸಂಘದ ಅಧ್ಯಕ್ಷ ಭೀಮರಾವ ಅಕ್ಕೋಣಿ, ಕಾರ್ಯದರ್ಶಿ ಶ್ರೀಶೈಲ, ಪ್ರಮುಖರಾದ ನಾಗಣ್ಣ ಮಲಶೆಟ್ಟಿ, ರಾಜೇಂದ್ರ ಸೋನಿ, ಸುಮಾ ಪಪ್ಪಾ, ಮಾಲಿನಿ ಸ್ವಾಮಿ, ಭುವನೇಶ್ವರಿ ಹಳ್ಳಿಖೇಡ, ಪ್ರಸಾದ ಜೋಶಿ, ಜ್ಯೋತಿ ನಿಪ್ಪಾಣಿ, ಪ್ರಿಯಾ, ಜ್ಯೋತಿ ಕೋಟನೂರ, ಕಾರ್ತಿಕ ದಣ್ಣೂರ, ಶರಣು, ಶ್ರೇಯಾ ಕೋಟನೂರ, ಓಂ ಶ್ರೇಯಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net