

IND vs ENG: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಕಡೆಗೂ ಸಮಬಲಗೊಳಿಸುವಲ್ಲಿ ಭಾರತ ಯಶಸ್ವಿಯಾಯಿತು.
ಲಂಡನ್ನ ಕೆನ್ನಿಂಗ್ಟನ್ ಓವಲ್ನಲ್ಲಿ ನಡೆದ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ಕ್ಲೈಮ್ಯಾಕ್ಸ್ ಹಂತವನ್ನು ತಲುಪಿತ್ತು. ಇಂಗ್ಲೆಂಡ್ಗೆ 35 ರನ್ಗಳ ಅಗತ್ಯವಿದ್ದರೆ, ಟೀಮ್ ಇಂಡಿಯಾಗೆ 4 ವಿಕೆಟ್ಗಳು ಬೇಕಿತ್ತು. ಮೂರು ವಿಕೆಟ್ಗಳನ್ನು ಯಶಸ್ವಿಯಾಗಿ ಕಬಳಿಸಿದ ಗಿಲ್ ಪಡೆಗೆ ಅಚ್ಚರಿ ಮೂಡಿಸಿದ್ದು, ಕ್ರಿಸ್ ವೋಕ್ಸ್ ಎಂಟ್ರಿ!
ಕಡೆಯ ದಿನದಾಟದಲ್ಲಿ ಇಂಗ್ಲೆಂಡ್ನ 4 ವಿಕೆಟ್ಗಳನ್ನು ಕಬಳಿಸುವಲ್ಲಿ ಗಿಲ್ ಪಡೆ ಮೇಲುಗೈ ಸಾಧಿಸಿತು. ಪ್ರಸಿದ್ಧ್ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ ತಲಾ ಎರಡು ವಿಕೆಟ್ ಪಡೆದರು. ಈ ವೇಳೆ ಕೊನೆಗೆ ಕಣಕ್ಕಿಳಿದ ಇಂಜುರಿಯಿಂದ ಬಳಲುತ್ತಿದ್ದ ಕ್ರಿಸ್ ವೋಕ್ಸ್, ಒಂದೇ ಕೈಯಲ್ಲಿ ತಂಡದ ಪರ ಆಡಿದರು. ಆದರೆ, ಗೆಲುವು ತಂದುಕೊಡುವಲ್ಲಿ ವಿಫಲರಾದರು.