ಜೊಹಾನ್ಸ್ಬರ್ಗ್: ದಿ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ (Team India) ಹಾಗೂ ದಕ್ಷಿಣ ಆಫ್ರಿಕಾ (South Africa) ನಡುವಿನ ಟಿ20 ಸರಣಿಯ ನಾಲ್ಕನೇ ಪಂದ್ಯವನ್ನು ಗೆಲ್ಲುವ ಮೂಲಕ ಪ್ರವಾಸಿ ತಂಡವು ಸೀರೀಸ್ಅನ್ನು ವಶಪಡಿಸಿಕೊಳ್ಳುವ ತವಕದಲ್ಲಿದ್ದು, ಸದ್ಯ ಭಾರತ ತಂಡವು (Team India) 2-1 ಅಂತರದಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ದಕ್ಷಿಣ ಆಫ್ರಿಕಾ (South Africa) ತಂಡ ಗೆದ್ದರೂ ಸರಣಿ ಸಮಬಲ ಸಾಧಿಸುವ ಅವಕಾಶವನ್ನು ಹೊಂದಿದ್ದು, ಆತಿಥೇಯರು ಸರಣಿಯನ್ನು ಸಮಬಲಗೊಳಿಸುವತ್ತ ಕಣ್ಣಿಟ್ಟಿದ್ದಾರೆ. ಇದು ಟೀಮ್ ಇಂಡಿಯಾ (Team India) ಟಿ20 ವಿಶ್ವ ಚಾಂಪಿಯನ್ ಪಟ್ಟಕ್ಕೆ ಮರಳಿರುವ ವರ್ಷದಲ್ಲಿ ಆಡುತ್ತಿರುವ ಕೊನೇ ಚುಟುಕು ಕ್ರಿಕೆಟ್ ಪಂದ್ಯವಾಗಿದ್ದು, ಸರಣಿಯನ್ನು ವಶಪಡಿಸಿಕೊಳ್ಳುವ ತವಕದಲ್ಲಿದೆ.
ಇನ್ನೂ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದ್ದು, ಜೊಹಾನ್ಸ್ಬರ್ಗ್ನಲ್ಲಿ ಶೇ.70ರಷ್ಟು ಮಳೆಯಾಗುವ ಬಗ್ಗೆ ವರದಿಯಾಗಿದೆ. ಪಂದ್ಯಕ್ಕೆ ಅಡ್ಡಿಪಡಿಸುವ ಸಾಧ್ಯತೆಗಳಿದ್ದು, ತೇವಾಂಶವು ಶೇ.55 ಹಾಗೂ ಗಾಳಿಯು 14 ಕಿಲೋಮೀಟರ್ ವೇಗದಲ್ಲಿ ಬೀಸಲಿದೆ. ಪಂದ್ಯದ ವೇಳೆ ಮಳೆ ಬಂದರೆ ಬೌಲಿಂಗ್ ಮಾಡಲು ಕಷ್ಟವಾಗುವುದರ ಜತೆಗೆ ಬ್ಯಾಟ್ಸ್ಮನ್ಗಳಿಗೆ ರನ್ ಗಳಿಸಲು ಪರದಾಡಬೇಕಾಗುತ್ತದೆ ಎಂದು ವರದಿಯಾಗಿದೆ.
ಇನ್ನೂ ಪಿಚ್ ವಿಚಾರಕ್ಕೆ ಬರುವುದಾದರೆ ಜೊಹಾನ್ಸ್ಬರ್ಗ್ನ ದಿ ವಾಂಡರರ್ಸ್ ಕ್ರೀಡಾಂಗಣವು ಬ್ಯಾಟ್ಸ್ಮನ್ಗಳಿಗೆ ಹೆಚ್ಚು ನೆರವಾಗಲಿದ್ದು, ಉತ್ತಮ ಬೌನ್ಸ್‌ನಿಂದಾಗಿ, ಚೆಂಡು ಸುಲಭವಾಗಿ ಬ್ಯಾಟ್ಗೆ ಬರುತ್ತದೆ ಎಂದು ಹೇಳಲಾಗಿದೆ. ಪಿಚ್ನ ಮೇಲಿರುವ ತೇವಾಂಶದಿಂದ ಬೌಲರ್ಗಳು ಆರಂಭದಲ್ಲಿ ಲಾಭ ಪಡೆಯಲಿದ್ದಾರೆ ಎಂದು ಹೇಳಲಾಗಿದ್ದು, ಮೊದಲ ಇನ್ನಿಂಗ್ಸ್ನ ಸರಾಸರಿ ಸ್ಕೋರ್ 171 ರನ್ ಆಗಿದೆ. ಇನ್ನೂ ಈ ಕ್ರೀಡಾಂಗಣದಲ್ಲಿ ಈವರೆಗೂ 33 ಪಂದ್ಯಗಳು ನಡೆದಿದ್ದು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ತಡಮವು ಮೊದಲು ಗೆದ್ದಿದ್ದು, 20 ಪಂದ್ಯಗಳಲ್ಲಿ ಸೋಲು ಕಂಡಿದೆ.
ಸಂಭಾವ್ಯ Playing XI
ಟೀಮ್ ಇಂಡಿಯಾ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ರಮಣದೀಪ್ ಸಿಂಗ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ.
ದಕ್ಷಿಣ ಆಫ್ರಿಕಾ: ರಿಯಾನ್ ರಿಕೆಲ್ಟನ್, ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್ (ಸಿ), ಟ್ರಿಸ್ಟಾನ್ ಸ್ಟಬ್ಸ್, ಹೆನ್ರಿಚ್ ಕ್ಲಾಸೆನ್ (ವಾಕ್), ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಜೆರಾಲ್ಡ್ ಕೋಟ್ಜಿ, ಆಂಡಿಲ್ ಸಿಮೆಲೆನ್, ಕೇಶವ್ ಮಹಾರಾಜ್, ಲುಥೋ ಸಿಪಾಮ್ಲಾ.
Toxic ಅಖಾಡಕ್ಕೆ ಎಂಟ್ರಿ ಕೊಟ್ಟ ಮತ್ತೊಬ್ಬ Hollywood Star; ವಿಡಿಯೋ ವೈರಲ್