ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ (Team India) ಹಾಗೂ ನ್ಯೂಜಿಲೆಂಡ್ (NewZealand) ನಡುವಿನ ಟೆಸ್ಟ್ ಸರಣಿಯ (Test Series) ಮೊದಲ ಪಂದ್ಯದಲ್ಲಿ ಆತಿಥೇಯರು ಹೀನಾಯ ಪ್ರದರ್ಶನ ತೋರಿದ್ದು, 188 ಎಸೆತಗಳಲ್ಲಿ 46 ರನ್‌ಗಳಿಗೆ ಆಲೌಟ್ ಆಗುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (World Test Championship) 2023-25ರ ಅಡಿಯಲ್ಲಿ ನಡೆಯುತ್ತಿರುವ ಸರಣಿಯಲ್ಲಿ (Test Series) ಭಾರತ (Team India) ಹೀನಾಯ ಪ್ರದರ್ಶನ ತೋರಿದ್ದು, ಇದು ಮುಂಬರುವ ಸರಣಿಗಳ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ.
ಬಾಂಗ್ಲಾದೇಶ (Bangladesh) ವಿರುದ್ಧದ ಟೆಸ್ಟ್ ಸರಣಿಯಲ್ಲಿ (Test Series) ಕ್ಲೀನ್ಸ್ವೀಪ್ ಮಾಡುವ ಮೂಲಕ ಆತ್ಮವಿಶ್ವಾಸದಲ್ಲಿದ್ದ ಭಾರತ (Team India) ತಂಡವು ನ್ಯೂಜಿಲೆಂಡ್ (NewZealand) ವಿರುದ್ಧವೂ ಅದೇ ಜೋಷ್ನಲ್ಲಿ ಕಣಕ್ಕಿಳಿಯಿತು. ಆದರೆ, ಹಾಕಿಕೊಂಡಿದ್ದ ಲೆಕ್ಕಾಚಾರವೆಲ್ಲವೂ ಉಲ್ಟಾ ಆಗಿದ್ದು, ಟೀಮ್ ಇಂಡಿಯಾವನ್ನು (Team India) ಬಗ್ಗುಬಡಿಯುವಲ್ಲಿ ಕಿವೀಸ್ ಪಡೆ ಯಶಸ್ವಿಯಾಗಿದೆ. ಕಳಪೆ ಪ್ರದರ್ಶನದ ನಡುವೆಯೇ ಭಾರತ ತಂಡವು (Team India) ಐದು ಅನಪೇಕ್ಷಿತ ದಾಖಲೆಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಕ್ರೀಡಾ ವಲಯದಲ್ಲಿ ಸೌಂಡ್ ಮಾಡುತ್ತಿದೆ.
ತವರು ನೆಲದಲ್ಲಿ ಟೀಮ್ ಇಂಡಿಯಾ (Team India) ಗಳಿಸಿದ ಅತ್ಯಂತ ಕನಿಷ್ಠ ಮೊತ್ತ ಇದಾಗಿದೆ. ಇದಕ್ಕೂ ಮುನ್ನ 1987 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 75 ರನ್ಗೆ ಆಲೌಟ್ ಆಗಿದ್ದು ಕಳಪೆ ದಾಖಲೆಯಾಗಿತ್ತು. ಇದೀಗ 46 ರನ್ಗೆ ಆಲೌಟ್ ಆಗಿ ಟೀಮ್ ಇಂಡಿಯಾದ ಆಟಗಾರರು (Indian Cricket Players) ಹಳೆಯ ದಾಖಲೆಯನ್ನು ಅಳಿಸಿಹಾಕಿದ್ದಾರೆ. ಇದಲ್ಲದೆ ಭಾರತದ ಉಪಖಂಡದಲ್ಲಿ (Indian Continent) ಅತ್ಯಂತ ಕಡಿಮೆ ಸ್ಕೋರ್ಗಳಿಸಿದ ಹೀನಾಯ ದಾಖಲೆ ಕೂಡ ಟೀಮ್ ಇಂಡಿಯಾ (Team India) ಪಾಲಾಗಿದೆ. ಈ ಹಿಂದೆ ವೆಸ್ಟ್ ಇಂಡೀಸ್ (West Indies) ವಿರುದ್ಧ ಪಾಕಿಸ್ತಾನ 53 ರನ್ ಗಳಿಸುವ ಮೂಲಕ ಈ ಅಪಕೀರ್ತಿಗೆ ಒಳಗಾಗಿತ್ತು.
ಇದನ್ನೂ ಓದಿ: ಚೆನ್ನೈ, ಮುಂಬೈ ಅಲ್ಲವೇ ಅಲ್ಲ…Ashwin ಪ್ರಕಾರ ಐಪಿಎಲ್ಗಾಗಿ ದೇವರು ಗಿಫ್ಟ್ ಕೊಟ್ಟ ಫ್ರಾಂಚೈಸಿ ಇದೇ ನೋಡಿ
ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ (Test Match) ಅತೀ ಕಡಿಮೆ ಸ್ಕೋರ್ಗೆ ಆಲೌಟ್ ಆದ ಅನಗತ್ಯ ದಾಖಲೆ ಕೂಡ ಟೀಮ್ ಇಂಡಿಯಾ (Team India) ಪಾಲಾಗಿದೆ. ಇದಕ್ಕೂ ಮುನ್ನ 2021 ರಲ್ಲಿ ನ್ಯೂಜಿಲೆಂಡ್ (NewZealand) ತಂಡವು 62 ರನ್ಗೆ ಆಲೌಟ್ ಆಗಿತ್ತು. ಇದೀಗ ಟೀಮ್ ಇಂಡಿಯಾ (Team India) 46 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರೀ ಮುಖಭಂಗಕ್ಕೆ ಒಳಗಾಗಿದೆ. 78 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ತಂಡವೊಂದು 50 ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದೆ. 1946 ರಲ್ಲಿ ನ್ಯೂಜಿಲೆಂಡ್ ವೆಲ್ಲಿಂಗ್ಟನ್ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ಕೇವಲ 42 ರನ್‌ಗಳಿಗೆ ಆಲೌಟ್ ಆಗಿತ್ತು.
25 ವರ್ಷಗಳ ನಂತರ ಭಾರತ ತಂಡದ (Team India) ಐವರು ಬ್ಯಾಟ್ಸ್‌ಮನ್‌ಗಳು ತವರಿನಲ್ಲಿ ಖಾತೆ ತೆರೆಯದೆ ಪೆವಿಲಿಯನ್ ಪೆರೇಡ್ ನಡೆಸಿದ್ದಾರೆ. ಇದಕ್ಕೂ ಮುನ್ನ 1999 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ (Team India) ಐವರು ಬ್ಯಾಟರ್ಗಳು ಶೂನ್ಯಕ್ಕೆ ಔಟಾಗಿದ್ದರು. ಇದೀಗ 25 ವರ್ಷಗಳ ಬಳಿಕ ಮತ್ತೊಮ್ಮೆ ಈ ದಾಖಲೆಗೆ ಭಾರತೀಯ ಬ್ಯಾಟರ್ಗಳು ಕೊರಳೊಡಿದ್ದು, ಜಾಗತಿಕ ಕ್ರಿಕೆಟ್‌ನಲ್ಲಿ ದೊಡ್ಡ ಮುಖಭಂಗಕ್ಕೆ ಕಾರಣವಾಗಿದೆ.