Ranji Trophy 2025: ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ 3-1 ಅಂತರದಲ್ಲಿ ಸೋಲುಂಡ ಟೀಮ್ ಇಂಡಿಯಾ, ಇದೀಗ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾಗಿಯಾಗಿದೆ. ಇತ್ತ ಯುವ ಆಟಗಾರರು ಇಂಗ್ಲೆಂಡ್ ನಡುವಿನ ಟಿ20 ಮ್ಯಾಚ್ನಲ್ಲಿ ಭಾಗಿಯಾದರೆ, ಅತ್ತ ಕಳಪೆ ಫಾರ್ಮ್ ಹೊಂದಿರುವ ಸ್ಟಾರ್ ಬ್ಯಾಟರ್ಗಳಾದ ರೋಹಿತ್ ಶರ್ಮ, ಶುಭಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್, ಪ್ರಸ್ತುತ ರಣಜಿ ಟ್ರೋಫಿಯಲ್ಲಿ ತಮ್ಮ ತಂಡಗಳ ಪರ ಕಣಕ್ಕಿಳಿದಿದ್ದಾರೆ.
ಇದನ್ನೂ ಓದಿ: ಚುನಾವಣಾ ಕೆಲಸದಲ್ಲಿ ಉತ್ತಮ ನಿರ್ವಹಣೆ: ಡಾ.ಕುಮಾರಗೆ ಅತ್ಯುತ್ತಮ ಚುನಾವಣಾಧಿಕಾರಿ ಪ್ರಶಸ್ತಿ
5 ರನ್
ಕೆಲವು ವರ್ಷಗಳ ನಂತರ ರಣಜಿಗೆ ಮರಳಿರುವ ಟೀಮ್ ಇಂಡಿಯಾ ಸ್ಟಾರ್ ಆಟಗಾರರಾದ ಗಿಲ್, ರೋಹಿತ್ ಮತ್ತು ಯಶಸ್ವಿ, ಇಲ್ಲಿಯೂ ತಮ್ಮ ಕಳಪೆ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಇತ್ತೀಚಿನ ಪ್ರದರ್ಶನಗಳನ್ನು ಪರಿಗಣಿಸಿ, ಬಿಗ್ ಫ್ಲಾಪ್ ಆಟಗಾರರ ಪಟ್ಟಿಗೆ ಸೇರಿರುವ ಬ್ಯಾಟರ್ಗಳು ಈಗ ರಣಜಿ ಟ್ರೋಫಿಯಲ್ಲಿಯೂ ಅಬ್ಬರಿಸದೆ ಇರುವುದು ಸದ್ಯ ಕ್ರಿಕೆಟ್ ಪ್ರಿಯರ ಬೇಸರಕ್ಕೆ ಕಾರಣವಾಗಿದೆ. 19 ಎಸೆತಗಳಲ್ಲಿ ರೋಹಿತ್, ಕೇವಲ 3 ರನ್ ಗಳಿಸಿ ಪೆವಿಲಿಯನ್ನತ್ತ ಮುಖ ಮಾಡಿದರೆ, ಜೈಸ್ವಾಲ್ 8 ಎಸೆತಗಳನ್ನು ಎದುರಿಸಿ 5 ರನ್ ಗಳಸಿದರು. ಇನ್ನು ಪ್ರೀಮಿಯರ್ ದೇಶೀಯ ಟೂರ್ನಿಯ ಆರನೇ ಸುತ್ತಿನಲ್ಲಿ ಗಿಲ್ 8 ಎಸೆತಗಳಲ್ಲಿ ಕೇವಲ 4 ರನ್ ಗಳಿಸಲಷ್ಟೇ ಶಕ್ತರಾದರು.
ಬ್ಯಾಟ್ ಬೀಸಲು ಪರದಾಟ
10 ವರ್ಷಗಳ ನಂತರ ತಮ್ಮ ಮೊದಲ ರಣಜಿ ಟ್ರೋಫಿಯಲ್ಲಿ ಭಾಗಿಯಾದ ರೋಹಿತ್ ಶರ್ಮ, ಮುಂಬೈ ಮತ್ತು ಜಮ್ಮು-ಕಾಶ್ಮೀರ ನಡುವಿನ ಪಂದ್ಯದಲ್ಲಿ ಫಾಸ್ಟ್ ಬೌಲರ್ಗಳನ್ನು ಎದುರಿಸಲು ವಿಫಲರಾದರು. ಮುಂಬೈ ಪರ ಮೈದಾನಕ್ಕಿಳಿದ ರೋಹಿತ್, ಔಕಿಬ್ ನಬಿ ಮತ್ತು ಉಮರ್ ನಜೀರ್ ಬೌಲಿಂಗ್ ದಾಳಿಯಲ್ಲಿ ಬ್ಯಾಟ್ ಬೀಸಲು ಪರದಾಡಿದರು. ನಜೀರ್ ಬೌಲಿಂಗ್ನಲ್ಲಿ ಸುಲಭ ಕ್ಯಾಚ್ ಕೊಟ್ಟ ರೋಹಿತ್, ಪೆವಿಲಿಯನ್ ಹಾದಿ ಹಿಡಿದರು. ಇನ್ನು ನಬಿ ಬೌಲಿಂಗ್ ದಾಳಿಗೆ ಸಿಲುಕಿದ ಜೈಸ್ವಾಲ್, ಹೆಚ್ಚು ಕಾಲ ಕ್ರೀಸ್ನಲ್ಲಿ ನಿಲ್ಲದೆ, ತಮ್ಮ ವಿಕೆಟ್ ಒಪ್ಪಿಸಿ, ಡ್ರೆಸ್ಸಿಂಗ್ ರೂಮ್ನತ್ತ ತೆರಳಿದರು.
ಕರ್ನಾಟಕದ ಮತ್ತು ಪಂಜಾಬ್ ನಡುವಿನ ಪಂದ್ಯದಲ್ಲಿ ಪಂಜಾಬ್ ಪರ ಆಡುತ್ತಿರುವ ಶುಭಮನ್ ಗಿಲ್, ಎರಡೂವರೆ ವರ್ಷಗಳಿಗೂ ಹೆಚ್ಚು ಸಮಯದ ಬಳಿಕ ತಮ್ಮ ಮೊದಲ ರಣಜಿ ಟ್ರೋಫಿ ಪಂದ್ಯದಲ್ಲಿ ಆಡಿದ್ದೇ ಆದರೂ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವುದು ಅವರ ಅಭಿಮಾನಿಗಳಲ್ಲಿ ಬೇಸರ ತಂದಿದೆ,(ಏಜೆನ್ಸೀಸ್).