ಪರ್ತ್​​ನಲ್ಲಿ ಆಸ್ಟ್ರೇಲಿಯಾ-ಇಂಗ್ಲೆಂಡ್​ ಮ್ಯಾಚ್​ ನೋಡಿ ಎಂಜಾಯ್ ಮಾಡಿದ ಟೀಂ ಇಂಡಿಯಾ ಆಟಗಾರರು...

RAshwin
Published on

ನವ ದೆಹಲಿ: ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಟಿ-20 ವಿಶ್ವಕಪ್​ ಆಡಲು ಈಗಾಗಲೇ ಟೀಮ್​ ಇಂಡಿಯಾ ಆಟಗಾರರು ಆಸ್ಟ್ರೇಲಿಯಾ ತಲುಪಿದ್ದಾರೆ. ಜತೆಗೆ ಅಭ್ಯಾಸವನ್ನೂ ಆರಂಭಿಸಿದ್ದಾರೆ. ಅಭ್ಯಾಸದ ಬಿಡುವಿನ ವೇಳೆ ಭಾರತೀಯ ಆಟಗಾರರು ಪರ್ತ್​ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ - ಇಂಗ್ಲೆಂಡ್​​ ನಡುವಿನ ಮೊದಲ ಟಿ-20 ಪಂದ್ಯವನ್ನು ಮೈದಾನಕ್ಕೆ ತೆರಳಿ ವೀಕ್ಷಿಸಿದ್ದಾರೆ.

ಮುಂದಿನ ವಾರದಿಂದ ಪರ್ಥ್​​ನಲ್ಲಿ ಭಾರತ ತಂಡ ಪಶ್ಚಿಮ ಆಸ್ಟ್ರೇಲಿಯ ತಂಡದ ಜತೆಗೆ ಅಭ್ಯಾಸ ಪಂದ್ಯ ಆಡಲಿದೆ. ಇದಕ್ಕೂ ಮೊದಲು ತಂಡದ ಆಟಗಾರರಾದ ದಿನೇಶ್​ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ಯಜುವೇಂದ್ರ ಚಹಲ್, ಹರ್ಷಲ್ ಪಟೇಲ್ ಪರ್ತ್​ ಮೈದಾನಕ್ಕೆ ತೆರಳಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟಿ-20 ಪಂದ್ಯ ವೀಕ್ಷಿಸಿದ್ದಾರೆ. ಈ ವೇಳೆ ಸ್ಪಿನ್ ಬೌಲರ್ ಅಶ್ವಿನ್ ಸೆಲ್ಫಿ ತೆಗೆದಿದ್ದಾರೆ. ಇದೀಗ ಈ ಫೋಟೋ ವೈರಲ್ ಆಗುತ್ತಿದೆ.

ಟಿ-20 ವಿಶ್ವಕಪ್​ ಗಮನದಲ್ಲಿಟ್ಟುಕೊಂಡು ಭಾರತ ತಂಡ ಕಠಿಣ ಅಭ್ಯಾಸವನ್ನು ಆರಂಭಿಸಿದೆ. ಸ್ಟಾರ್​ ಬ್ಯಾಟ್ಸ್​ಮನ್​​ಗಳಾದ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್ ರಾಹುಲ್ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ಬಿಸಿಸಿಐ ಈಗಾಗಲೇ ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net