More

  ಮೈಸೂರಿನಲ್ಲಿ ಪುತ್ರನ ಆಟ ವೀಕ್ಷಿಸಿದ ರಾಹುಲ್ ದ್ರಾವಿಡ್​; ಸರಳತೆಗೆ ಮೆಚ್ಚುಗೆ, ಚಿತ್ರ ವೈರಲ್​…

  ಬೆಂಗಳೂರು: ಟೀಮ್​ ಇಂಡಿಯಾದ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಮತ್ತು ಡಾ. ವಿಜೇತ ದಂಪತಿ ಶುಕ್ರವಾರ ಮೈಸೂರಿನಲ್ಲಿ ಪುತ್ರ ಸಮಿತ್​ ದ್ರಾವಿಡ್​ ಆಟಕ್ಕೆ ಸಾಕ್ಷಿಯಾದರು.

  ಅರಮನೆನಗರಿಯಲ್ಲಿರುವ ಮಾನಸಗಂಗೋತ್ರಿಯ ಒಡೆಯರ್​ ಮೈದಾನದಲ್ಲಿ ನಡೆಯುತ್ತಿರುವ 19 ವಯೋಮಿತಿಯ ಕೂಚ್​ ಬಿಹಾರ್​ ಟ್ರೋಫಿ ಚತುರ್ದಿನ ಕ್ರಿಕೆಟ್​ ಟೂರ್ನಿಯ ಪಂದ್ಯದಲ್ಲಿ ಉತ್ತರಾಖಂಡ ಎದುರು ಸಮಿತ್​ ಆತಿಥೇಯ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದು, ಮೊದಲ ದಿನದಾಟದಲ್ಲಿ 5 ಓವರ್​ ಬೌಲಿಂಗ್​ ಮಾಡಿ 11 ರನ್​ ಬಿಟ್ಟುಕೊಟ್ಟರು.

  ರಾಷ್ಟ್ರೀಯ ತಂಡದ ಕೋಚ್​ ಎಂಬ ಅಹಂ ಇಲ್ಲದೆ ಓರ್ವ ಸಾಮಾನ್ಯ ಅಪ್ಪನಾಗಿ ದ್ರಾವಿಡ್​ ಮಗನ ಆಟವನ್ನು ಆನಂದಿಸಿದರು. ಅವರು ಸರಳವಾಗಿ ಮೆಟ್ಟಿಲ ಮೇಲೆ ಕುಳಿತು ಪಂದ್ಯ ವೀಕ್ಷಿಸುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅವರ ಸರಳತೆಗೆ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿದೆ.

  ಭಾರತ ಟಿ20 ತಂಡದ ಕೋಚ್​ ಹುದ್ದೆ ಆಫರ್​ ನಿರಾಕರಿಸಿದ ನೆಹ್ರಾ! ಕಾರಣವೇನು ಗೊತ್ತೇ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts