

ನವದೆಹಲಿ: ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಕೋಚ್ ಆಗಿ ಉತ್ತಮ ಯಶಸ್ಸು ಕಂಡಿರುವ ಮಾಜಿ ಆಶಿಶ್ ನೆಹ್ರಾ, ಭಾರತ ಟಿ20 ತಂಡಕ್ಕೆ ತರಬೇತುದಾರರಾಗಲು ಬಿಸಿಸಿಐ ನೀಡಿದ್ದ ಆಫರ್ಅನ್ನು ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ.
ಎಲ್ಲ 3 ಪ್ರಕಾರದ ತಂಡಕ್ಕೆ ಕೋಚ್ ಆಗಿ ದ್ರಾವಿಡ್ ಅವಧಿ ವಿಸ್ತರಿಸುವ ಮುನ್ನ ಬಿಸಿಸಿಐ, ಟಿ20 ತಂಡದ ಹೊಣೆಯನ್ನು ನೆಹ್ರಾಗೆ ನೀಡಲು ಬಯಸಿತ್ತು. ಟಿ20 ವಿಶ್ವಕಪ್ಗೆ ಮುನ್ನ ನೆಹ್ರಾಗೆ ತಂಡದ ತರಬೇತಿಯನ್ನು ವಹಿಸುವುದು ಯೋಜನೆಯಾಗಿತ್ತು. ಆದರೆ ಬಿಸಿಸಿಐ ನೀಡಿದ ಆರ್ಅನ್ನು ನೆಹ್ರಾ ಒಪ್ಪಿಕೊಳ್ಳಲಿಲ್ಲ. 44 ವರ್ಷದ ನೆಹ್ರಾ 2025ರವರೆಗೆ ಗುಜರಾತ್ ತಂಡದ ಕೋಚ್ ಆಗಿ ಒಪ್ಪಂದ ಹೊಂದಿದ್ದು, ಅಲ್ಲಿಯವರೆಗೆ ರಾಷ್ಟ್ರೀಯ ತಂಡ ಸಹಿತ ಬೇರಾವುದೇ ಆಫರ್ ಒಪ್ಪಿಕೊಳ್ಳಲು ಸಿದ್ಧರಿಲ್ಲ ಎನ್ನಲಾಗಿದೆ.
ಸದ್ಯ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಯಸಿರುವ ನೆಹ್ರಾ, ಎರಡೂವರೆ ತಿಂಗಳ ಅವಧಿಯಲ್ಲಿ ಮಾತ್ರ ಕಾರ್ಯನಿರ್ವಹಿಸಬಹುದಾದ ಐಪಿಎಲ್ ಒಪ್ಪಂದಕ್ಕೆ ತೃಪ್ತಿಹೊಂದಿದ್ದಾರೆ ಎನ್ನಲಾಗಿದೆ. ಆದರೆ ಭವಿಷ್ಯದಲ್ಲಿ ಅವರು ಭಾರತ ಸೀಮಿತ ಓವರ್ ತಂಡದ ಕೋಚ್ ಆಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.