ಸಮಾಜಕ್ಕೆ ಮಾದರಿಯಾಗಿರಬೇಕು ಶಿಕ್ಷಕರು

Bel_Teachers
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಜೆಸಿಐ ಬೆಳ್ತಂಗಡಿಯ ಜೆಸಿ ಸಪ್ತಾಹದ ಉದ್ಘಾಟನೆ ಹಾಗೂ ಶಿಕ್ಷಕರ ದಿನಾಚರಣೆ ಮತ್ತು ಗೌರವಾರ್ಪಣೆ ಕಾರ್ಯಕ್ರಮ ಜೆಸಿ ಭವನದಲ್ಲಿ ನಡೆಯಿತು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು (ರೆಸಿಡೆನ್ಸಿಯಲ್)ನ ನಿವೃತ್ತ ಪ್ರಾಂಶುಪಾಲ ಡಾ.ಕೃಷ್ಣಮೂರ್ತಿ ಟಿ.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಆದರ್ಶ ಹಾಗೂ ಮೌಲ್ಯಯುತ ಶಿಕ್ಷಣವನ್ನು ನೀಡಿ ಸಮಾಜಕ್ಕೆ ಮಾದರಿಯಾಗಿರಬೇಕು ಎಂದರು.

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ರಂಜಿತ್ ಎಚ್.ಡಿ.ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಘಟಕದ ಪೂರ್ವ ಅಧ್ಯಕ್ಷ ಕೃಷ್ಣಮೂರ್ತಿ ಟಿ., ಜೆಸಿರೇಟ್ ಪೂರ್ವ ಅಧ್ಯಕ್ಷ ನಿವೃತ್ತ ಶಿಕ್ಷಕಿ ಉಮಾ ರಾವ್, ಕೊರಂಜದ ಸರ್ಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆ ಶಿಕ್ಷಕಿ ಅನುರಾಧ ಸುಭಾಷ್ ಚಂದ್ರ, ನಾವೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಶುಭಾ ಎಂ., ವಾಣಿ ಇಂಗ್ಲಿಷ್ ಮೀಡಿಯಂ ಶಾಲೆ ಶಿಕ್ಷಕಿ ನಮಿತಾ ನಿರ್ಮಲ್, ಇಂದಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ದೀಪ ಕಿರಣ್, ಪ್ರಸನ್ನ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕಿ ಹೇಮಾವತಿ ಕೆ.ಅವರನ್ನು ಗೌರವಿಸಲಾಯಿತು.

ಘಟಕದ ನಿಕಟಪೂರ್ವಾಧ್ಯಕ್ಷೆ ವಾಣಿ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕ ಶಂಕರರಾವ್, ಉಪಾಧ್ಯಕ್ಷ ಸುಧೀರ್ ಕೆ.ಎನ್., ಮಾಜಿ ಕಾರ್ಯದರ್ಶಿ ಗುರುದೇವ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕ ಗಣೇಶ್ ಶಿರ್ಲಾಲ್, ಧರ್ಮಸ್ಥಳ ಸರ್ಕಾರಿ ಮಂಡ್ರುಪಾಡಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಚಿತ್ರಪ್ರಭ, ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕಿ ದೀಕ್ಷ ಗಣೇಶ್ ಹಾಗೂ ಕಕ್ಕಿಂಜೆ ಕಾರುಣ್ಯ ಆಂಗ್ಕ ಮಾಧ್ಯಮ ಶಾಲೆ ಶಿಕ್ಷಕಿ ಸ್ವಾತಿ ಹಾಗೂ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಇಂಜಿನಿಯರಿಂಗ್ ಕಾಲೇಜು ಉಪನ್ಯಾಸಕ ರಂಜಿತ್ ಎಚ್.ಡಿ.ಅವರನ್ನು ಗೌರವಿಸಲಾಯಿತು.
ಪೂರ್ವ ಅಧ್ಯಕ್ಷ ಪ್ರಶಾಂತ್ ಲಾಯಿಲ ಆಹ್ವಾನಿಸಿದರು, ದೀಪ್ತಿ ಕುಲಾಲ್ ಜೇಸಿವಾಣಿ ವಾಚಿಸಿದರು. ಹೇಮಾವತಿ ಕೆ.ಉದ್ಘಾಟಕರ ಪರಿಚಯ ಮಾಡಿದರು. ಉಪಾಧ್ಯಕ್ಷ ಆಶಾ ಪ್ರಶಾಂತ್ ಶಿಕ್ಷಕರ ಪರಿಚಯ ನಡೆಸಿಕೊಟ್ಟರು. ಕಾರ್ಯದರ್ಶಿ ಅನುದೀಪ್ ಜೈನ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net