

ಬೆಳ್ತಂಗಡಿ: ಉಜಿರೆ ಶ್ರೀ ಧ.ಮಂ.ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಂಗೀತ-ವೃತ್ತಿ-ವ್ಯಕ್ತಿತ್ವ ಎಂಬ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಬೆಂಗಳೂರು ಕಲಾ ಸೌರಭ ಅಕಾಡೆಮಿ ಅಧ್ಯಕ್ಷ ವಿದ್ವಾನ್ ದತ್ತಾತ್ರಿ ಮಾತನಾಡಿ, ಸಂಗೀತ ಎಂಬುದು ಕಬ್ಬಿಣದ ಕಡಲೆಯಲ್ಲ. ಮನಸ್ಸಿಗೆ ಸಂತೋಷ ಹಾಗೂ ಆತ್ಮಕ್ಕೆ ಸಮಾಧಾನ ನೀಡುವ ಸಾಧನ. ಸಂಗೀತ ಕಲಿತರೆ ಸಾಕು ನಾವು ದೇವರನ್ನು ಸಮೀಪಿಸುತ್ತೇವೆ. ಸಂಗೀತ ಜೀವನ ಕೊಡುತ್ತದೆ. ಮನುಷ್ಯನ ನೋವು ನಲಿವಿನಲ್ಲಿ ಜತೆಯಾಗಿರುತ್ತದೆ ಎಂದರು.
ಬೆಂಗಳೂರು ರಾಜಶ್ರೀ ಜೀವನ ಕೌಶಲ ತರಬೇತಿ ಕೇಂದ್ರದ ಅಧ್ಯಕ್ಷ ಡಾ.ರಾಜೇಶ್ ನಾಯಕ್ ಮಾತನಾಡಿ, ನಮ್ಮ ಜ್ಞಾನ ನಾವೆಷ್ಟು ಕಲಿಸುತ್ತೇವೆ ಎನ್ನುವುದರ ಮೇಲೆ ಅವಲಂಬಿತವಾಗಿದೆ. ಸಂಗೀತವು ಒತ್ತಡ ನಿವಾರಣೆಯಲ್ಲಿ ಸಹಕರಿಸುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಸಂತೋಷ್ ಸಲ್ಡಾನ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮದು ಗುರುಪರಂಪರೆ ಹೊಂದಿರುವ ರಾಷ್ಟ್ರ. ಸಂಗೀತವನ್ನು ವೃತ್ತಿಯಲ್ಲಿ ಅಳವಡಿಸಿದಾಗ ವ್ಯಕ್ತಿತ್ವ ಮತ್ತು ಬೋಧನೆಯು ಸಮತೋಲನಗೊಳ್ಳುತ್ತದೆ ಎಂದರು.
ಅರುಣ್‌ರಾವ್ ನಂದಾವರ ಕೌಳಿಗೆ, ಉಪನ್ಯಾಸಕರಾದ ವಿದ್ಯಾಶ್ರೀ ಪಿ, ತಿರುಮಲೇಶ್ ರಾವ್ ಎನ್.ಕೆ, ಹರೀಶ್ ಕುಮಾರ್, ಅನುಷಾ ಡಿ.ಜೆ, ಚೈತ್ರಾ ಹಾಗೂ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಉಪನ್ಯಾಸಕ ತಿರುಮಲೇಶ್ ರಾವ್ ಎನ್.ಕೆ. ಅತಿಥಿ ಪರಿಚಯಿಸಿದರು. ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿ ಮಹಾಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.