

ಸುಬ್ರಹ್ಮಣ್ಯ: ಮಕ್ಕಳು ಸಲ್ಲಿಸುವ ಗೌರವ ಶಿಕ್ಷಕರಿಗೆ ಪರಮಾನ್ನ. ವಿದ್ಯಾರ್ಥಿಗಳು ಗುರುಗಳಿಗೆ ನೀಡುವ ಗೌರವ ಮತ್ತು ಪ್ರೀತಿ ಶಿಕ್ಷಕರ ಬದುಕಿನಲ್ಲಿ ಅತ್ಯಂತ ಹೆಚ್ಚು ಆನಂದ ನೀಡುವ ಕ್ಷಣ ಎಂದು ಎಸ್.ಎಸ್.ಪಿ.ಯು. ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿ ನಂದಾ ಹರೀಶ್ ಹೇಳಿದರು.
ಸುಬ್ರಹ್ಮಣ್ಯ ಎಸ್.ಎಸ್. ಪಿ.ಯು. ಕಾಲೇಜಿನ ಪ್ರೌಢಶಾಲಾ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿರಿಯ ಸಹಶಿಕ್ಷಕ ಎಂ.ಕೃಷ್ಣ ಭಟ್, ದೈಹಿಕ ಶಿಕ್ಷಣ ಶಿಕ್ಷಕಿ ಸ್ಮಿತಾ, ಶಿಕ್ಷಕರಾದ ಸುರೇಶ್, ಸತೀಶ್, ಚೇತಾಕ್ಷಿ, ನಳಿನಿ, ಸ್ವಾತಿ ಮೋಕ್ಷಾ, ಸಚ್ಚಿದಾನಂದ, ಸಿಬ್ಬಂದಿಗಳಾದ ಹರೀಶ್, ಹೇಮಾವತಿ, ರಶ್ಮಿ, ಸ್ಮಿತಾ ಹೊಸೋಳಿಕೆ ಮೊದಲಾದವರಿದ್ದರು. ಶಿಕ್ಷಕರಿಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು.