

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ತಾಯಿ ನಮಗೆ ಜನ್ಮ ಕೊಟ್ಟರೆ ತಂದೆ ಬದುಕು ರೂಪಿಸುತ್ತಾರೆ. ಶಿಕ್ಷಕರು ಅಕ್ಷರ ಜ್ಞಾನ ನೀಡಿ ಮುಂದಿನ ಬದುಕಿಗೆ ದಾರಿ ತೋರಿಸುತ್ತಾರೆ. ಈ ಮೂವರನ್ನು ನಮ್ಮ ಜೀವನದುದ್ದಕ್ಕೆ ಎಂದಿಗೂ ಮರೆಯಬಾರದು ಎಂದು ಸಯ್ಯದ್ ಮದನಿ ದರ್ಗಾದ ವಾಜಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ತ್ವಾಹ ಕಿವಿವಾತು ಹೇಳಿದರು.
ಸಯ್ಯದ್ ಮದನಿ ಚಾರಿಟೆಬಲ್ ಟ್ರಸ್ಟ್ ಅಧೀನದ ಹಳೆಕೋಟೆ ಸಯ್ಯದ್ ಮದನಿ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಶಿಕ್ಷಕರ ದಿನ ಪ್ರಯುಕ್ತ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ವಾತನಾಡಿದರು.
ಸಯ್ಯದ್ ಮದನಿ ಚಾರಿಟೆಬಲ್ ಟ್ರಸ್ಟ್ ಉಪಾಧ್ಯಕ್ಷ ಫಾರೂಕ್ ಯು.ಎಚ್. ವಾತನಾಡಿದರು.ಕೇಂದ್ರ ಜುವಾ ಮಸೀದಿಯ ಉಪಾಧ್ಯಕ್ಷ ಯು.ಎಚ್. ಹಸೈನಾರ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಂಚಾಲಕ ಇಸ್ಮಾಯಿಲ್ ಹಾಜಬ್ಬ, ಶಾಲಾಭಿವದ್ಧಿ ಸಮಿತಿ ಉಪಾಧ್ಯಕ್ಷ ಯು.ಎಚ್.ಇಬ್ರಾಹಿಂ, ಕೋಶಾಧಿಕಾರಿ ಫಾರೂಕ್ ಶುಭಹಾರೈಸಿದರು.
ಕಾರ್ಯದರ್ಶಿ ಅಲ್ತಾಫ್ ಯು.ಎಚ್., ಕೇಂದ್ರ ಜುವಾ ಮಸೀದಿಯ ಸದಸ್ಯ ಅಶ್ರಫ್ ಯು.ಡಿ., ಗುತ್ತಿಗೆದಾರ ಯು.ಎಚ್.ಮಹಮ್ಮದ್, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಮೋಹನ್ ಕುವಾರ್, ಶಿಕ್ಷಕಿ ವಿನಯ, ಶಶಿಕಲಾ ಶೆಟ್ಟಿ, ಚಾರಿಟೆಬಲ್ ಟ್ರಸ್ಟ್ ಅಧೀನದಲ್ಲಿರುವ ವಿವಿಧ ಶಾಲೆ, ಕಾಲೇಜುಗಳ ಮುಖ್ಯಶಿಕ್ಷಕರು, ಪ್ರಾಂಶುಪಾಲರು ಉಪಸ್ಥಿತರಿದ್ದರು.
ಕೆಎಂಕೆ ಮಂಜನಾಡಿ ಸ್ವಾಗತಿಸಿದರು. ಅರ್ಫಿನ್ ಮತ್ತು ಸಫಾ ನಿರೂಪಿಸಿದರು. ಶಿಕ್ಷಕಿ ಶಕೀಲಾ ವಂದಿಸಿದರು.