

ಮಂಗಳೂರು: ಬ್ರಾಹ್ಮಿ ಲಿಪಿ ಮೂಲದ ತುಳು-ತಿಗಳಾರಿ ಹೆಸರಿನಲ್ಲಿ ಯೂನಿಕೋಡ್‌ಗೆ ಕ್ಯಾಲಿಫೋರ್ನಿಯಾದ ಯುನಿಕೋಡ್ ಕನ್ಸೋರ್ಟಿಯಿಂದ ಅನುಮೋದನೆ ದೊರಕಿದೆ. ಈ ಅನುಮೋದನೆ ದೊರೆತಿರುವುದು ಉತ್ತರ ಕನ್ನಡದ ತುಳು ತಿಗಳಾರಿ ಲಿಪಿಗೆ. ಆದರೆ ತುಳು ಲಿಪಿಗೂ ಇದಕ್ಕೂ 25 ಶೇಕಡ ವ್ಯತ್ಯಾಸವಿರುವುದರಿಂದ ತುಳು ಲಿಪಿ ಯುನಿಕೋಡ್ ಸೇರ್ಪಡೆಗೆ ಇನ್ನಷ್ಟು ತಾಂತ್ರಿಕ ಕಾರ್ಯ ಬಾಕಿಯಿದೆ.
ಇತ್ತೀಚೆಗೆ ಗೂಗಲ್ ಟ್ರಾನ್ಸ್‌ಲೇಟರ್‌ನಲ್ಲಿ ತುಳು ಭಾಷೆಯನ್ನು ಸೇರ್ಪಡೆಗೊಳಿಸಿದ ನಂತರ ಇದೀಗ ತುಳು ತುಳು ತಿಗಳಾರಿ ಲಿಪಿ ಯೂನಿಕೋಡ್‌ನಲ್ಲಿ ಲಭ್ಯವಾಗುತ್ತಿದೆ. ರಾಜ್ಯದ ಅಧಿಕೃತ ಭಾಷೆಯ ಸ್ಥಾನಮಾನ ಹಾಗೂ ಸಂವಿಧಾನದ 8ನೇ ಪರಿಚ್ಛೇದದಡಿ ತುಳು ಭಾಷೆ ಸೇರುವ ಅವಕಾಶವನ್ನು ಸರ್ಕಾರ ಕಲ್ಪಿಸದಿದ್ದರೂ ತುಳು ತುಳು ತಿಗಳಾರಿ ಲಿಪಿ ಈಗ ಯೂನಿಕೋಡ್‌ಗೆ ಸೇರ್ಪಡೆಗೆ ಕ್ಷಣಗಣಣೆ ಆರಂಭವಾಗಿದೆ. ಈ ಮಧ್ಯೆ ತುಳು ಲಿಪಿಯನ್ನು ಯುನಿಕೋಡ್‌ಗೆ ಸೇರ್ಪಡಿಸುವ ಕಾರ್ಯ ಶೇಕಡಾ 80 ರಷ್ಟು ಮಾತ್ರ ಪೂರ್ಣಗೊಂಡಿದೆ. ಮುಂದಿನ ಒಂದೆರಡು ವರ್ಷದಲ್ಲಿ ಪೂರ್ಣಪ್ರಮಾಣದಲ್ಲಿ ತುಳು ಲಿಪಿ ಯೂನಿಕೋಡ್‌ಗೆ ಸೇರ್ಪಡೆಗೊಳ್ಳುವ ಸಾಧ್ಯತೆ ಹೆಚ್ಚಿದೆ.
*ಯೂನಿಕೋಡ್‌ಗೆ ತುಳು ತಿಗಳಾರಿ
2017ರಲ್ಲಿ ತುಳುಲಿಪಿಯನ್ನು ಯುನಿಕೋಡ್‌ಗೆ ಸೇರ್ಪಡಿಸುವ ಕಾರ್ಯ ಆರಂಭಗೊಂಡಿತ್ತು. ಈಮೊದಲು ಅಂದರೆ 2007ರಲ್ಲಿ ಬ್ರಾಹ್ಮಿ ಲಿಪಿ ಮೂಲದಿಂದ ಪ್ರಚಲಿತವಿದ್ದ ಉತ್ತರ ಕನ್ನಡ ಭಾಗದಲ್ಲಿ ಪ್ರಚಲಿತವಿದ್ದ ಇನ್ನೊಂದು ಲಿಪಿ ತಿಗಳಾರಿ ಲಿಪಿಯನ್ನು ಯುನಿಕೋಡ್ ಗೆ ಸೇರ್ಪಡಿಸಲು ಉಡುಪಿ ಮೂಲದ ಲಿಪಿಶಾಸ್ತ್ರಜ್ಞರಾದ ವೈಷ್ಣವಿಮೂರ್ತಿ ಮತ್ತು ವಿನೋದ್ ರಾಜ್ ಅವರು ಆರಂಭಿಸಿದ ಕಾರ್ಯಕ್ಕೆ ಯುನಿಕೋಡ್ ಕನ್ಸೊರ್ಟಿಯಮ್ ಕ್ಯಾಲಿಫೋರ್ನಿಯ ದಿಂದ ಒಪ್ಪಿಗೆ ನೀಡಿದ್ದು, ಈ ಲಿಪಿಯನ್ನು ತುಳು-ತಿಗಳಾರಿ ಲಿಪಿ ಎನ್ನಲಾಗುತ್ತಿದೆ. ಪ್ರಸ್ತುತ ಬಳಕೆಯಲ್ಲಿರುವ ತುಳು ಲಿಪಿಗೂ, ತುಳು ತಿಗಳಾರಿ ಲಿಪಿಗೂ ಸುಮಾರು 25 ಶೇಕಡಾ ವ್ಯತ್ಯಾಸ ಇದೆ. ಕನ್ನಡ ಮತ್ತು ತೆಲುಗು ಲಿಪಿಗಳ ಮಧ್ಯೆ ಸಾಮ್ಯತೆಯಿದ್ದಂತೆಯೇ ತುಳು ಮತ್ತು ತುಳು-ತಿಗಳಾರಿ ಲಿಪಿಗಳಿಗೂ ಸಾಮ್ಯತೆ ಇದೆ.
-------------------
ತುಳು ಲಿಪಿ ಸೇರ್ಪಡೆಗೆ ಕ್ಷಣಗಣಣೆ
2017ರಲ್ಲಿ ಯು ಬಿ ಪವನಜ ಅವರು ಯುನಿಕೋಡಿಗೆ ತುಳು ಲಿಪಿ ಸೇರ್ಪಡೆಗೆ ಪ್ರಸ್ತಾವನೆ ಸಲ್ಲಿಸಿದ್ದರು. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಇ ಗರ್ವನೆನ್ಸ್ ಕಾರ್ಯದರ್ಶಿಯಾಗಿದ್ದ ಬೇಲೂರು ಸುದರ್ಶನ ಅವರ ಸಹಕಾರವನ್ನು ಪಡೆದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಸರ್ವ ಸದಸ್ಯರ ಸಹಕಾರದಿಂದ ಕೆಲವು ತಾಂತ್ರಿಕ ಕಾರ್ಯಮಾಡಲಾಗಿತ್ತು. ಆದರೆ ಡಾ. ಪವನಜೆ ಅವರು ತನ್ನ ವೈಯುಕ್ತಿಕ ಕಾರಣದಿಂದ ಯೂನಿಕೋಡ್ ಕಾರ್ಯ ಪೂರ್ಣಗೊಳಿಸಿಲ್ಲ. ಇದರಿಂದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಯಿಂದಲೇ ಅಕಾಡಮಿ ಸದಸ್ಯ ಸಂಚಾಲಕ ಡಾ. ಆಕಾಶ್ ರಾಜ್ ಜೈನ್ ಇವರಿಗೆ ಯೂನಿಕೋಡ್ ನ ಜವಾಬ್ದಾರಿ ನೀಡಲಾಯಿತು. ನಂತರ ಯೂನಿಕೋಡ್‌ಗೆ ತುಳು ಲಿಪಿ ಸೇರ್ಪಡೆಗೆ ವೇಗ ಪಡೆಯಿತು. ವಿವಿಧ ಸಂಘಟನೆ, ಅಕಾಡಮಿ, ಸಾಹಿತಿಗಳನ್ನೊಳಗೊಂಡ ಸಮಗ್ರ ದಾಖಲೆಗಳನ್ನು ಯುನಿಕೋಡ್ ಕನ್ಸೋಟಿಯಂಗೆ ಒದಗಿಸಲಾಗಿತ್ತು. ಹೆಚ್ಚುವರಿ ಲಿಪಿಯನ್ನು ಬೆಳ್ಳೂರು ಅವರ ಸಹಕಾರದಿಂದ ರಚಿಸಿ ಶೇ.80 ರಷ್ಟು ಕಾರ್ಯ ಮುಗಿದು ಪೂರ್ಣ ಪ್ರಮಾಣದ ತುಳು ಲಿಪಿ ಸೇರ್ಪಡೆಗೆ ಕ್ಷಣಗಣಣೆ ಆರಂಭಗೊಂಡಿದೆ. ತುಳು ಲಿಪಿ ಯುನಿಕೋಡ್ ಸೇರ್ಪಡೆ ಪೂರ್ಣಗೊಂಡರೆ ಮುಂದಿನ ದಿನಗಳಲ್ಲಿ ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್, ಟೆಕ್ಸ್ಟ್ ಟು ಸ್ಪೀಚ್, ಸ್ಪೀಚ್ ಟು ಟೆಕ್ಸ್ಟ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್(ಎಐ) ಇವೆಲ್ಲವನ್ನೂ ಮಾಡಲು ಸಾಧ್ಯ.
----ಬಾಕ್ಸ್----
ಮೊಬೈಲ್ ಜಾಲತಾಣದಲ್ಲಿ ತುಳು ತಿಗಳಾರಿ
ಇದೀಗ ಯುನಿಕೋಡ್-16ರ ಆವೃತ್ತಿಯಲ್ಲಿ ತುಳು ತಿಗಳಾರಿ ಲಿಪಿ ಸೇರ್ಪಡೆಯಾಗಿದ್ದು, ಎಲ್ಲ ರೀತಿಯ ಡಿಜಿಟಲ್ ವೇದಿಕೆಗಳಲ್ಲಿ ಈ ಲಿಪಿ ಲಭ್ಯವಾಗಲಿದೆ. 80 ಅಕ್ಷರ- ಸಂಕೇತಗಳನ್ನು ಒಳಗೊಂಡ ಕೋಡಿಂಗ್ ಕೀಲಿಮಣೆಯಲ್ಲಿ ಇರಲಿದೆ. ಆ ಮೂಲಕ ತುಳು ತಿಂಗಳಾರಿ ಲಿಪಿಯಲ್ಲೇ ವೆಬ್‌ಸೈಟ್, ಮೊಬೈಲ್ ಜಾಲತಾಣದಲ್ಲಿ ಬಳಕೆ, ಮೆಸೇಜಿಂಗ್ ಆ್ಯಪ್ಸ್‌ಗಳಲ್ಲಿ ಬಳಕೆ ಸಾಧ್ಯವಾಗಲಿದೆ. ಯುನಿಕೋಡ್ ಸೇರ್ಪಡೆಯಾಗಿರುವುದು ತುಳು ಭಾಷಿಕರ ಮಟ್ಟಿಗೆ ಒಂದು ದೊಡ್ಡ ಮೈಲಿಗಲ್ಲು. ಆದರೆ ಹೆಚ್ಚಿನವರಿಗೆ ತುಳು ಲಿಪಿ ತಿಳಿಯದೇ ಇರುವುದರಿಂದ ಇದರ ಬಳಕೆಯ ವ್ಯಾಪ್ತಿಯೂ ಲಿಪಿಯನ್ನು ತಿಳಿದವರಿಗಷ್ಟೇ ಸೀಮಿತವಾಗಿರಲಿದೆ. ಜಗತ್ತಿನ ಹೆಚ್ಚಿನ ಪ್ರಮುಖ ಭಾಷೆಗಳ ಯುನಿಕೋಡ್ ಫಾಂಟ್ ಲಭ್ಯವಿದ್ದು, ಅದರಲ್ಲಿ ತುಳು ಭಾಷೆಯದ್ದೂ ಸೇರಿಕೊಂಡಿದೆ ಎನ್ನುವುದು ತುಳುವರಿಗೊಂದು ಹೆಗ್ಗಳಿಕೆ.
-------------------
ತುಳು ಅಕಾಡೆಮಿ ಯುನಿಕೋಡ್ ಕೇಳಿದ್ದು ಈಗಿರುವ ತುಳು ಭಾಷೆಗೆ, ವೈಷ್ಣವಿ ಮೂರ್ತಿ (ತುಳು ತಿಗಳಾರಿ) ಕೇಳಿದ್ದು ತಾಳೆಗರಿ ಸಂಸ್ಕೃತ ಸಾಹಿತ್ಯಕ್ಕೆ. ಯುನಿಕೋಡ್‌ಗೆ ತುಳು ಲಿಪಿ ಸೇರ್ಪಡೆ ಕಾರ್ಯ ಶೇ.80ರಷ್ಟು ಪೂರ್ಣಗೊಂಡು ತಾಂತ್ರಿಕ ಕಾರ್ಯ ಬಾಕಿಯಿದೆ.
ದಯಾನಂದ ಜಿ ಕತ್ತಲ್ ಸಾರ್, ನಿಕಟಪೂರ್ವ ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ
--------------------
ತುಳು ಅಕಾಡೆಮಿ ಕಳುಹಿಸಿದ ಅಕ್ಷರಗಳ ಪಟ್ಟಿಗೂ ಈಗ ತುಳು-ತಿಗಲಾರಿ ಹೆಸರಿನಲ್ಲಿ ಯೂನಿಕೋಡ್‌ನವರು ಅಂತಿಮಗೊಳಿಸಿದ ಪಟ್ಟಿಗೂ ಸಣ್ಣ ಪುಟ್ಟ ವ್ಯತ್ಯಾಸಗಳಿವೆ. ಪ್ರಸ್ತುತ ತುಳು ಲಿಪಿ ಯುನಿಕೋಡ್ ಸೇರ್ಪಡೆ ಸಂಪೂರ್ಣಗೊಳಿಸಲು ಇನ್ನೂ ಸ್ವಲ್ಪ ಕಾರ್ಯ ಬಾಕಿಯಿದೆ. ತುಳು ಲಿಪಿ ಸೇರ್ಪಡೆಗೆ ಕಾರ್ಯ ಪೂರ್ಣಗೊಳಿಸಲು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಿರಂತರ ಪ್ರಯತ್ನ ನಡೆಸುತ್ತಿದೆ.
ತಾರಾನಾಥ್ ಗಟ್ಟಿ ಕಾಪಿಕಾಡ್, ತುಳು ಸಾಹಿತ್ಯಅಕಾಡೆಮಿ ಅಧ್ಯಕ್ಷ