

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ವಿದ್ಯಾರ್ಥಿಗಳ ಬದುಕಿನಲ್ಲಿ ಅಂಧಕಾರ ಹೋಗಲಾಡಿಸಿ ಜ್ಞಾನದ ಬೆಳಕು ತುಂಬುವ ಪ್ರತೀ ಶಿಕ್ಷಕರೂ ದೇವರ ಸಮಾನ ಎಂದು ಉಜಿರೆಯ ಎಸ್‌ಡಿಎಂ ಕಾಲೇಜು ಆಡಳಿತ ಕುಲಸಚಿವ ಡಾ.ಶ್ರೀಧರ ಎನ್.ಭಟ್ಟ ಹೇಳಿದರು.
ಶಿಕ್ಷಕರ ದಿನಾಚರಣೆ ಪ್ರಯುಕ್ತ ಉಜಿರೆಯ ಎಸ್‌ಡಿಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿಸಿದ್ದ ‘ಗುರುಸ್ಮತಿ 2025’ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಂಶುಪಾಲ ಡಾ.ವಿಶ್ವನಾಥ ಪಿ. ಅಧ್ಯಕ್ಷತೆ ವಹಿಸಿದ್ದರು. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು. ವಿದ್ಯಾರ್ಥಿನಿ ಅನ್ವಿತಾ ಸೇರಾ ಅನಿಸಿಕೆ ಹಂಚಿಕೊಂಡರು. ಉಪಪ್ರಾಂಶುಪಾಲೆ ಕೆ.ಪಿ. ನಂದಕುಮಾರಿ, ಪರೀಕ್ಷಾಂಗ ಕುಲಸಚಿವ ಗಣೇಶ್ ನಾಯಕ್, ಸ್ನಾತಕೋತ್ತರ ವಿಭಾಗ ಡೀನ್ ಸೌಮ್ಯಾ ಬಿ.ಪಿ, ವಾಣಿಜ್ಯ ವಿಭಾಗ ಡೀನ್ ಶಕುಂತಲಾ, ಬೋಧಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸೌಖ್ಯಾ ಜೈನ್ ಸ್ವಾಗತಿಸಿದರು. ಸ್ಪಂದನಾ ವಂದಿಸಿದರು. ಶ್ವೇತಾ ಕೆ.ಜಿ ಮತ್ತು ಸಮ್ಯಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು.
ಶಿಕ್ಷಕರು ತಮಗೆ ದೊರೆತ ಅಮೂಲ್ಯವಾದ ಗುರುಸ್ಥಾನವನ್ನು ಉಳಿಸಿಕೊಳ್ಳುವತ್ತ ಚಿತ್ತರಾಗಿರಬೇಕು. ಅಂತಹ ಗುರುಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸದ್‌ವಿಚಾರ ಹಾಗೂ ಸಂಸ್ಕೃತಿಗಳನ್ನು ತಿಳಿದುಕೊಂಡು ಮುನ್ನಡೆಯಬೇಕು. ಡಾ.ವಿಶ್ವನಾಥ ಪಿ. ಪ್ರಾಂಶುಪಾಲ