ಶಾರದಾ ಪಿಯು ಕಾಲೇಜಿನಲ್ಲಿ ಬ್ಯಾಡ್ಮಿಂಟನ್ ಪಂದ್ಯಾಟ

New Project (6)
Published on

ಉಳ್ಳಾಲ: ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಮತ್ತು ತಲಪಾಡಿ ದೇವಿನಗರ ಶಾರದಾ ಪಿಯು ಕಾಲೇಜಿನ ಸಹಯೋಗದಲ್ಲಿ ಶಾರದಾ ವಿದ್ಯಾನಿಕೇತನ ಸಂಸ್ಥೆಯ ಹರಿದಾಸ ಸಭಾಂಗಣದಲ್ಲಿ ಉಳ್ಳಾಲ ತಾಲೂಕುಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟ ನಡೆದಿದ್ದು, ಬಾಲಕರ 10 ತಂಡಗಳು ಮತ್ತು ಬಾಲಕಿಯರ 6 ತಂಡಗಳು ಭಾಗವಹಿಸಿದ್ದವು.

ಬಾಲಕರ ವಿಭಾಗದಲ್ಲಿ ಕೋಟೆಕಾರ್ ಪರಿಜ್ಞಾನ ಕಾಲೇಜು ಪ್ರಥಮ, ಬ್ಯಾರೀಸ್ ಪದವಿಪೂರ್ವ ಕಾಲೇಜು ದ್ವಿತೀಯ ಸ್ಥಾನ ಪಡೆದವು. ಬಾಲಕಿಯರ ವಿಭಾಗದಲ್ಲಿ ಶಾರದಾ ವಿದ್ಯಾನಿಕೇತನ ಪಿಯು ಕಾಲೇಜು ಪ್ರಥಮ, ಕೋಟೆಕಾರ್ ಪರಿಜ್ಞಾನ ಪದವಿಪೂರ್ವ ಕಾಲೇಜು ದ್ವಿತೀಯ ಸ್ಥಾನ ಪಡೆದವು.

ಸಂಸ್ಥೆಯ ನಿರ್ದೇಶಕ ಸಮೀರ್ ಪುರಾಣಿಕ್ ಪಂದ್ಯಾಟ ಉದ್ಘಾಟಿಸಿದರು. ಶಾರದಾ ವಿದ್ಯಾನಿಕೇತನ ಕಾಲೇಜಿನ ಪ್ರಾಂಶುಪಾಲ ವಿನಾಯಕ್ ಬಿ.ಜಿ. ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ತಾಲೂಕು ಕ್ರೀಡಾ ಸಂಯೋಜಕ ಮಹಮ್ಮದ್ ಅಶ್ರಫ್, ಶಾರದಾ ಸಂಸ್ಥೆಯ ಆಡಳಿತಾಧಿಕಾರಿ ಪ್ರಫುಲ್ ಕುಮಾರ್, ದೈಹಿಕ ಶಿಕ್ಷಣ ಉಪನ್ಯಾಸಕ ಗಣೇಶ್ ಉಪಸ್ಥಿತರಿದ್ದರು. ಉಪನ್ಯಾಸಕ ಶುಭಕರ್ ಕೆ. ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net