

ಬದಿಯಡ್ಕ: ಶಿಕ್ಷಕರ ದಿನಾಚರಣೆ ಅಂಗವಾಗಿ ಅಂಬೇಡ್ಕರ್ ವಿಚಾರ ವೇದಿಕೆ ವತಿಯಿಂದ ನಿವೃತ್ತ ಮುಖ್ಯಶಿಕ್ಷಕಿ ಸುನಂದ ಕುಂಬಳೆ, ಶಿರಿಬಾಗಿಲು ಜಿಡಬ್ಲುಎಲ್‌ಪಿ ಶಾಲೆ ಮುಖ್ಯ ಶಿಕ್ಷಕಿ ಶಶಿಕಲಾ ಸೂರಂಬೈಲು ಮತ್ತು ಚಾಯೋತ್ ಜಿ.ಎಚ್.ಎಸ್.ಎಸ್. ಶಾಲಾ ಉಪನ್ಯಾಸಕಿ ಆಶಾ ಕಿರಣ್ ದರ್ಬೆತ್ತಡ್ಕ ಅವರನ್ನು ಗೌರವಿಸಲಾಯಿತು.
ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಅಂಬೇಡ್ಕರ್ ವಿಚಾರ ವೇದಿಕೆ ಸ್ಥಾಪಕ ಸದಸ್ಯ ನಾರಾಯಣ ಬಾರಡ್ಕ, ನಿವೃತ್ತ ಗ್ರಾಮಾಧಿಕಾರಿ ಕೃಷ್ಣ ದರ್ಬೆತ್ತಡ್ಕ, ಬದಿಯಡ್ಕ ಗ್ರಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಗಂಗಾಧರ ಗೋಳಿಯಡ್ಕ, ನಿವೃತ್ತ ಸಬ್ ರಿಜಿಸ್ಟ್ರಾರ್ ರಾಮ ಸೂರಂಬೈಲು, ವಿಚಾರ ವೇದಿಕೆ ಅಧ್ಯಕ್ಷ ರಾಮ ಪಟ್ಟಾಜೆ, ಕಾರ್ಯದರ್ಶಿ ಸುಂದರ ಬಾರಡ್ಕ, ಸಂದೇಶ್ ಕುಂಬಳೆ, ಅಶ್ವಿನ್ ಕುಂಬಳೆ, ಗೋಪಾಲಕೃಷ್ಣ ದರ್ಬೆತ್ತಡ್ಕ, ಉಷಾಕಿರಣ ದರ್ಬೆತ್ತಡ್ಕ, ನೆಹಾರಿಕ ದರ್ಬೆತ್ತಡ್ಕ ಮೊದಲಾದವರು ಇದ್ದರು.