ಬಂಟ್ವಾಳದಲ್ಲಿ ಚಿತ್ರ ಬಿಡಿಸುವ ಸ್ಪರ್ಧೆ

New Project
Published on

ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾರ್ಸ್ ಅಸೋಸಿಯೇಶನ್ ಬಂಟ್ವಾಳ ವಲಯದ ವತಿಯಿಂದ ತಾಲೂಕಿನ 8ರಿಂದ 10ನೇ ತರಗತಿ ಮಕ್ಕಳಿಗೆ ಚೌತಿಯ ಸಂಭ್ರಮ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು.

ಸ್ಪರ್ಧೆಯಲ್ಲಿ ಸಿದ್ದಕಟ್ಟೆ ಸೇಂಟ್ ಪ್ಯಾಟ್ರಿಕ್ ಆಂಗ್ಲ ಮಾಧ್ಯಮ ಶಾಲೆ ಮನಸ್ವಿ ಪಿ.ಶೆಟ್ಟಿ ಪ್ರಥಮ, ಎಸ್‌ವಿಎಸ್ ಆಂಗ್ಲ ಮಾಧ್ಯಮ ಶಾಲೆ ಹಂಸಿನಿ ವಿ.ಎನ್. ದ್ವಿತೀಯ, ಎಸ್‌ವಿಎಸ್ ವಿದ್ಯಾಗಿರಿ ಆಂಗ್ಲ ಮಾಧ್ಯಮ ಶಾಲೆಯ ಸ್ಪಂದನಾ ಜೆ.ಶೆಟ್ಟಿ ತೃತೀಯ ಬಹುಮಾನ ಪಡೆದಿದ್ದಾರೆ.

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷ ಕಿಶೋರ್ ಕುಮಾರ್, ನಿಯೋಜಿತ ಅಧ್ಯಕ್ಷ ರಾಜೇಂದ್ರ ಕೆ., ಗೌರವಾಧ್ಯಕ್ಷ ಹರೀಶ್ ಕುಂದರ್, ಮಾಜಿ ಅಧ್ಯಕ್ಷರಾದ ಹರೀಶ್ ರಾವ್, ದಯಾನಂದ್ ಬಂಟ್ವಾಳ್, ಆನಂದ ಎನ್., ಸುಕುಮಾರ್, ಹರೀಶ್ ಪೆರ್ನೆ, ಕಾರ್ಯದರ್ಶಿಗಳಾದ ಪ್ರಶಾಂತ್, ರವಿ ಕಲ್ಪನೆ, ಸದಸ್ಯರಾದ ರೋಶನ್ ಕಲ್ಲಡ್ಕ, ರಾಜರತ್ನ, ದಿನೇಶ್ ಶೆಟ್ಟಿ, ಬಾಲಕೃಷ್ಣ, ಅಜಿತ್, ಮೋಹನ್, ವಿವೇಕ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net