

ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಕೇಂದ್ರೀಯ ಶೈಕ್ಷಣಿಕ ತಂತ್ರಜ್ಞಾನ ಸಂಸ್ಥೆ ಎನ್ಸಿಇಆರ್ಟಿಗಳ ಸಹಯೋಗದೊಂದಿಗೆ ಮೂರು ದಿವಸಗಳ ಶಿಕ್ಷಕರ ತರಬೇತಿ ನೀಲಗಿರಿ ಅತಿಥಿಗೃಹದಲ್ಲಿ ನಡೆಯಿತು.
ಕುಲಪತಿ ಪ್ರೊ.ಸಿದ್ದು ಪಿ.ಅಲ್ಗೂರ್ ಸಮಾರಂಭ ಉದ್ಘಾಟಿಸಿದರು. ಸಿಐಇಟಿ ಪ್ರಾಧ್ಯಾಪಕ ಡಾ.ಶಿರೀಶ್ ಪಾಲ್ ಸಿಂಗ್ ಮುಖ್ಯ ಭಾಷಣ ಮಾಡಿದರು. ಸಮಗ್ರ ಶಿಕ್ಷಕ ಶಿಕ್ಷಣ ವಿಭಾಗ ಮುಖ್ಯಸ್ಥ ಪ್ರೊ.ಮುಹಮ್ಮದುನ್ನಿ ಎಲಿಯಾಸ್ ಮುಸ್ತಫಾ, ಪ್ರೊ.ಅಮೃ ಜಿ.ಕುಮಾರ್ ಉಪಸ್ಥಿತರಿದ್ದರು.
ಶಿಕ್ಷಣ ಇಲಾಖೆ ಅಧ್ಯಕ್ಷ ಪ್ರೊ.ವಿ.ಪಿ.ಜೋಶಿತ್ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕಿ ಡಾ.ಮೇರಿ ವಿನೀತಾ ಥಾಮಸ್ ವಂದಿಸಿದರು. ಶಾಲಾ ಮತ್ತು ಕಾಲೇಜು ಶಿಕ್ಷಕರು ಮತ್ತು ಸಂಶೋಧಕರು ಭಾಗವಹಿಸಿದ್ದ ಈ ಕಾರ್ಯಕ್ರಮ ಸೆ.19ರಂದು ಸಮಾರೋಪಗೊಳ್ಳಲಿದೆ. ಹೊಸ ತಂತ್ರಜ್ಞಾನಗಳನ್ನು ಬಳಸಿ ಬೋಧನೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ತರಬೇತಿ ನೀಡುವುದು ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ.