ವಿಜ್ಞಾನ ಮೇಳ ಪುನರವಲೋಕನಾ ಸಭೆ

New Project (13)
Published on

ಮಂಜೇಶ್ವರ: ಉಪ ಜಿಲ್ಲಾ ವಿಜ್ಞಾನ ಮೇಳದ ವಿವಿಧ ಸಮಿತಿಗಳ ಪುನರಾವಲೋಕನ ಸಭೆ ಕೊಡ್ಲಮೊಗರು ಶ್ರೀ ವಾಣಿವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು. ಸ್ಥಳೀಯ ವಾರ್ಡ್ ಸದಸ್ಯೆ ಆಶಾಲತಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ವೇದಿಕೆ ಅಧ್ಯಕ್ಷ ಶ್ಯಾಮ್ ಭಟ್ ಪ್ರಸ್ತಾವಿಸಿದರು. ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ವಿಜಯ ಕುಮಾರ್ ಸಭೆಯ ಕುರಿತು ಮಾತನಾಡಿದರು.

ಪಿ.ಇ.ಸಿ. ಕಾರ್ಯದರ್ಶಿ ಪ್ರತಿಭಾ, ಪಂಚಾಯಿತಿ ಸದಸ್ಯ ಶಿವಕುಮಾರ್, ಪಿಟಿಎ ಉಪಾಧ್ಯಕ್ಷ ಮೋಹನ್ ಮೊದಲಾದವರಿದ್ದರು.

ಶ್ರೀವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲಾ ಮುಖ್ಯ ಶಿಕ್ಷಕಿ ಕೃಷ್ಣವೇಣಿ ಸ್ವಾಗತಿಸಿದರು. ಕಿಶೋರ್ ಕುಮಾರ್ ನಿರೂಪಿಸಿದರು. ಮುಖ್ಯಶಿಕ್ಷಕ ಸುಬ್ರಹ್ಮಣ್ಯ ಭಟ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net