ಎಂಟನೆ ತರಗತಿಯ ಬಾಲಕಿಗೆ ಲವ್ ಲೆಟರ್ ಬರೆದ ಶಿಕ್ಷಕ; ಓದಿದ ಮೇಲೆ ಹರಿದು ಹಾಕಲೂ ಹೇಳಿದ..!

love letter
Published on

ಉತ್ತರಪ್ರದೇಶ: ಶಿಕ್ಷಕರನ್ನು ತಂದೆ/ತಾಯಿಗೆ ಸಮಾನ ಎಂದು ಹೇಳಲಾಗುತ್ತೆ. ಈಗಿನ ಕಾಲದಲ್ಲಿ, ಉನ್ನತ ಶಿಕ್ಷಣದಲ್ಲಿ ತೊಡಗಿರುವ ವಿದ್ಯಾರ್ಥಿಗಳನ್ನೂ ಮದುವೆಯಾದ ಶಿಕ್ಷಕರು ಇದ್ದಾರೆ. ವಯಸ್ಸಿನಲ್ಲಿ ಹೆಚ್ಚೇನು ಅಂತರ ಇಲ್ಲದೇ ಇದ್ದರೆ ಅದನ್ನು ಸಮಾಜ ಒಪ್ಪಿದ್ದೂ ಇದೆ. ಆದರೆ ಇಲ್ಲೊಬ್ಬ ಭೂಪ, ಸಣ್ಣ ಬಾಲಕಿಗೆ ಪ್ರೇಮ ಪತ್ರ ಬರೆದಿದ್ದು ಆಕೆಯನ್ನು ಮದುವೆಯಾಗಲು ಇಚ್ಛಿಸಿದ್ದಾನೆ.

ಉತ್ತರಪ್ರದೇಶದ ಕನ್ನೌಜ್ ಜಿಲ್ಲೆಯ ಶಾಲಾ ಶಿಕ್ಷಕನೊಬ್ಬ ಅಪ್ರಾಪ್ತ ವಿದ್ಯಾರ್ಥಿನಿಗೆ ಪ್ರೇಮ ಪತ್ರ ನೀಡಿದ್ದು ಅದರಲ್ಲಿ ಆಕೆಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ. 12 ಸಾಲುಗಳ ಈ ಪತ್ರದಲ್ಲಿ ಶಿಕ್ಷಕ ಕೊನೆಗೆ, ಬಾಲಕಿಗೆ ಪತ್ರವನ್ನು ಓದಿದ ನಂತರ ಅದನ್ನು ಹರಿದುಹಾಕಲು ಕೂಡ ಸೂಚಿಸಿದ್ದಾನೆ! ವಿದ್ಯಾರ್ಥಿನಿ ತನ್ನ ಪೋಷಕರಿಗೆ ಈ ಬಗ್ಗೆ ದೂರು ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಕನ್ನೌಜ್ ಜಿಲ್ಲೆಯ ಸದರ್ ಕೊತ್ವಾಲಿ ಗ್ರಾಮದಲ್ಲಿ ನಡೆದಿದೆ.

ಈ ಶಿಕ್ಷಕನು ತಾನು ವಿದ್ಯಾರ್ಥಿಯನ್ನು ಮದುವೆಯಾಗಲು ಬಯಸುತ್ತೇನೆ ಎಂದು ಹೇಳುತ್ತಿದ್ದಾನೆ.

ಪ್ರೇಮ ಪತ್ರದಲ್ಲಿ ಶಿಕ್ಷಕನು ತಾನು ಅವಳನ್ನು ತುಂಬಾ ಪ್ರೀತಿಸುತ್ತಿದ್ದು ರಜೆಯ ಸಮಯದಲ್ಲಿ ಆಕೆಯನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಬರೆದಿದ್ದಾನೆ ಎಂದು ಆರೋಪಿಸಲಾಗಿದೆ. ಅದಲ್ಲದೇ, ಆ ಬಾಲಕಿಯ ಬಳಿ ಈ ಶಿಕ್ಷಕ ಯಾವಾಗೆಲ್ಲ ಸಾಧ್ಯವೋ ಆಗೆಲ್ಲ ಕರೆ ಮಾಡುವಂತೆ ಬೇಡಿಕೊಂಡಿದ್ದಾನೆ.

ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಅವನು ರಜೆಗೆ ಮೊದಲು ತನ್ನನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದ. ಈ ಶಿಕ್ಷಕ ಬಾಲಕಿಯನ್ನು ಮದುವೆಯಾಗಲು ಬಯಸುತ್ತಾನೆ ಎಂದು ಕೂಡ ಹೇಳಿದ್ದಾನೆ. ಎಂದು ತಿಳಿದುಬಂದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net