ಕೋರ್ಟಿಗೆ ಮಕ್ಕಳನ್ನು ಕರೆತಂದ ಸುಪ್ರೀಂ ಜಡ್ಜ್ ಜಸ್ಟೀಸ್ ಚಂದ್ರಚೂಡ್..!

dy chandrachood
Published on

ನವದೆಹಲಿ: ಶುಕ್ರವಾರ ಬೆಳಿಗ್ಗೆ ಸುಪ್ರೀಂಕೋರ್ಟಿನ ಕಾರಿಡಾರುಗಳಲ್ಲಿ ಓಡಾಡುತ್ತಿದ್ದ ವಕೀಲರಿಗೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳೊಂದಿಗೆ ಬಂದು ಸರ್ಪ್ರೈಸ್ ನೀಡಿದರು.

ಬೆಳಿಗ್ಗೆ 10.30ರ ಸುಮಾರಿಗೆ ನ್ಯಾಯಾಲಯದ ಆವರಣವನ್ನು ತಲುಪಿದ ನ್ಯಾಯಮೂರ್ತಿ ಚಂದ್ರಚೂಡ್ ಅವರು ತಮ್ಮ ಹೆಣ್ಣುಮಕ್ಕಳನ್ನು ಸಂದರ್ಶಕರ ಗ್ಯಾಲರಿಯ ಮೂಲಕ ತಮ್ಮ ನ್ಯಾಯಾಲಯದ ಕೊಠಡಿಗೆ (ಮೊದಲ ನ್ಯಾಯಾಲಯ) ಕರೆದೊಯ್ದು ತಮ್ಮ ಕೆಲಸದ ಜಾಗವನ್ನು ತೋರಿಸಿದರು. ಈ ಸಂದರ್ಭ ಅವರು, ತಮ್ಮ ಮಕ್ಕಳಿಗೆ "ನೋಡಿ, ನಾನು ಇಲ್ಲಿಯೇ ಕುಳಿತುಕೊಳ್ಳುತ್ತೇನೆ" ಎಂದು ಹೇಳಿರುವುದು ವರದಿಯಾಗಿದೆ.

ಸಿಜೆಐ ತಮ್ಮ ಕೆಲಸದ ಸ್ಥಳದ ಬಗ್ಗೆ ವಿವರಿಸುವಾಗ ತಮ್ಮ ಹೆಣ್ಣುಮಕ್ಕಳನ್ನು ನ್ಯಾಯಾಲಯದ ಇನ್ನೊಂದು ಭಾಗಕ್ಕೆ ಕರೆದೊಯ್ದು ನ್ಯಾಯಾಧೀಶರು ಕುಳಿತುಕೊಳ್ಳುವ ಸ್ಥಳ ಮತ್ತು ವಕೀಲರು ತಮ್ಮ ಪ್ರಕರಣಗಳನ್ನು ವಾದಿಸುವ ಸ್ಥಳವನ್ನು ಅವರಿಗೆ ತೋರಿಸಿದ್ದಾರೆ.

ನ್ಯಾಯಮೂರ್ತಿ ಚಂದ್ರಚೂಡ್ ಅವರ ಇಬ್ಬರು ವಿಕಲಚೇತನ ಮಕ್ಕಳು ತಮ್ಮ ಕೆಲಸದ ಸ್ಥಳವನ್ನು ನೋಡುವ ಬಯಕೆಯನ್ನು ವ್ಯಕ್ತಪಡಿಸಿದ ನಂತರ ಅವರನ್ನು ನ್ಯಾಯಾಲಯಕ್ಕೆ ಕರೆತಂದರು ಎಂದು ಅವರು ಮಾಹಿತಿ ನೀಡಿದ್ದಾರೆ.

ಅಂದ ಹಾಗೆ ಇವರು ನ್ಯಾಯಮೂರ್ತಿ ಚಂದ್ರಚೂಡರ ಸ್ವಂತ ಮಕ್ಕಳಲ್ಲ. ಅವರಿಬ್ಬರೂ ಚಂದ್ರಚೂಡರ ಆರೈಕೆಯಲ್ಲಿ ಇರುವ ವಿಕಲಚೇತನ ಮಕ್ಕಳು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net