ಟೀ ಜೊತೆ ಬಿಸ್ಕತ್ ಸೇವಿಸುತ್ತಿದ್ದೀರಾ? ಹಾಗಿದ್ರೆ, ಇಂದೇ ಈ ಅಭ್ಯಾಸ ಬಿಟ್ಟುಬಿಡಿ! ಇಲ್ಲಿವೆ ನಿಮಗೆ ತಿಳಿಯದ ಸಂಗತಿಗಳು | ​Tea

ವಿಜಯವಾಣಿ (20)
Published on

Tea And Biscuits: ನಮ್ಮಲ್ಲಿ ಹಲವರಿಗೆ ಬೆಳಗ್ಗೆ ಮತ್ತು ಸಂಜೆ ಹೊತ್ತಿಗೆ ಬಿಸಿ ಬಿಸಿ ಚಹಾ ಕುಡಿಯುವುದರ ಜೊತೆಗೆ ರುಚಿಕರ ಬಿಸ್ಕತ್ತು ತಿನ್ನುವ ಅಭ್ಯಾಸವಿದೆ. ವಾಸ್ತವವಾಗಿ, ಇವರೆಡರ ಕಾಂಬಿನೇಷನ್​ ಉತ್ತಮ ರುಚಿಯನ್ನು ನೀಡುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡ ವಯಸ್ಸಿನವರು ಇಂದಿಗೂ ಟೀ ಮತ್ತು ಬಿಸ್ಕತ್ತುಗಳ ಸೇವನೆಯನ್ನು ಬಹಳ ಇಷ್ಟಪಡುತ್ತಾರೆ. ಅಸಲಿಗೆ ಇದರಿಂದ ದೇಹಕ್ಕೆ ಏನ್ನೆಲ್ಲ ಸಮಸ್ಯೆಗಳು ಕಾಡುತ್ತದೆ? ಯಾವ ಕಾಯಿಲೆಗಳು ಕಾಡಬಹುದು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ಗಮನಿಸಿ.

ಅನೇಕರಿಗೆ ಟೀ ಜೊತೆಗೆ ಬಿಸ್ಕತ್ತು ತಿನ್ನುವುದು ಎಷ್ಟು ಅಪಾಯ ಎಂಬುದರ ಬಗ್ಗೆ ಇಂದಿಗೂ ಸಾಕಷ್ಟು ಗೊಂದಲವಿದೆ. ಬಿಸ್ಕತ್ತು ಮತ್ತು ಚಹಾ ಸಕ್ಕರೆಯಿಂದ ಕೂಡಿರುವ ಹಿನ್ನಲೆ ನಮ್ಮ ದೇಹದ ಮೇಲೆ ಹಲವಾರು ಪರಿಣಾಮಗಳು ಬೀಳುವ ಸಾಧ್ಯತೆಗಳಿವೆ.

ಬಿಸ್ಕತ್ತಿನಲ್ಲಿರುವ ಪದಾರ್ಥಗಳೇನು?

  • ಮೈದಾ: ಫೈಬರ್ ಇಲ್ಲದ ಕಾರ್ಬೋಹೈಡ್ರೇಟ್ ಇದಾಗಿದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ತಕ್ಷಣವೇ ಹೆಚ್ಚಿಸುತ್ತದೆ.
  • ಸಕ್ಕರೆ: ಇದು ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಇದು ಮಧುಮೇಹದ ಅಪಾಯವನ್ನು ಏರಿಸುತ್ತದೆ.
  • ಟ್ರಾನ್ಸ್ ಫ್ಯಾಟ್/ಮಾರ್ಗರೀನ್: ಇದು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಹೃದಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ರಾಸಾಯನಿಕಯುಕ್ತ ಕ್ರೀಮ್‌ಗಳು ದೇಹವನ್ನು ಅಸ್ವಸ್ಥಗೊಳಿಸುತ್ತದೆ.

ಏನ್ನೆಲ್ಲ ಅನಾನುಕೂಲ?

1. ರಕ್ತದಲ್ಲಿನ ಸಕ್ಕರೆ ಏರಿಳಿತ: ಚಹಾದೊಂದಿಗೆ ಬಿಸ್ಕತ್ತು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯಲ್ಲಿ ತಕ್ಷಣದ ಏರಿಕೆಗೆ ಕಾರಣವಾಗಬಹುದು. ಇದಾದ ಕೆಲ ಸಮಯದ ಬಳಿಕ ಅದು ಮತ್ತೆ ಇಳಿಕೆ ಕಾಣುತ್ತದೆ. ಹೀಗಾಗಿ ಆಯಾಸ ಮತ್ತು ಹಸಿವು ಹೆಚ್ಚಾಗುತ್ತದೆ. ಇದು ಟೈಪ್ 1 ಮಧುಮೇಹದ ಪ್ರಮುಖ ಲಕ್ಷಣವಾಗಿಯೂ ಕಾಣಿಸಿಕೊಳ್ಳಬಹುದು.

2. ದೇಹಕ್ಕೆ ಖಾಲಿ ಕ್ಯಾಲೋರಿಗಳು: ಬಿಸ್ಕತ್ತುಗಳು ದೇಹಕ್ಕೆ ಅಗತ್ಯವಿರುವ ಯಾವುದೇ ಪೋಷಕಾಂಶಗಳನ್ನು ಹೊಂದಿರುವುದಿಲ್ಲ, ಉದಾ: ಫೈಬರ್ ಮತ್ತು ವಿಟಮಿನ್‌ಗಳು. ಅವು ಅನಗತ್ಯ ಕ್ಯಾಲೋರಿಗಳನ್ನು ಮಾತ್ರ ಒದಗಿಸುತ್ತವೆ.

3. ತೂಕ ಹೆಚ್ಚಳ: ದಿನಕ್ಕೆ 2ರಿಂದ 3 ಬಿಸ್ಕತ್ತುಗಳನ್ನು ಚಹಾದೊಂದಿಗೆ ತಿನ್ನುವುದರಿಂದ ದೇಹಕ್ಕೆ ಕೆಲವು ನೂರು ಹೆಚ್ಚುವರಿ ಕ್ಯಾಲೋರಿಗಳು ಸೇರುತ್ತವೆ. ಇದು ದೇಹಕ ತೂಕ ಇನ್ನಷ್ಟು ಹೆಚ್ಚಾಗಲು ಕಾರಣವಾಗಬಹುದು.

4. ಹಲ್ಲಿನ ಸಮಸ್ಯೆಗಳು: ಸಕ್ಕರೆ ಬಿಸ್ಕತ್ತುಗಳು ಜಿಗುಟಾಗಿರುತ್ತವೆ. ಇವುಗಳಲ್ಲಿ ಹೆಚ್ಚಿನದನ್ನು ಸೇವಿಸುವುದರಿಂದ ಹಲ್ಲುಗಳಿಗೆ ಅಂಟಿಕೊಳ್ಳುವ ಸಾಧ್ಯತೆ ಹೆಚ್ಚು. ಇದು ದಂತದ ಕುಳಿಗಳಿಗೆ ಕಾರಣವಾಗಬಹುದು.

ಬಿಸ್ಕತ್​ ಬದಲಿಗೆ ಬೇರೇನು?

  • ಬಾದಾಮಿ ಮತ್ತು ವಾಲ್ನಟ್ಸ್: ಬಿಸ್ಕತ್​ ಬದಲಿಗೆ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬನ್ನು ಹೊಂದಿರುವ ಬಾದಾಮಿ ಮತ್ತು ವಾಲ್ನಟ್ಸ್​ ಸೇವಿಸುವುದು ಒಳ್ಳೆಯದು.
  • ತುರಿದ ತೆಂಗಿನಕಾಯಿ ಮತ್ತು ಒಂದು ಚಿಟಿಕೆ ಜೇನುತುಪ್ಪ: ಇದು ನೈಸರ್ಗಿಕ ಸಿಹಿಕಾರಕ, ಮತ್ತು ಶಕ್ತಿಯುತ. ಸೇಬು ಅಥವಾ ಪಪ್ಪಾಯಿ: ಇವುಗಳಲ್ಲಿ ಹೆಚ್ಚಿನ ಫೈಬರ್ ಅಂಶವಿದ್ದು, ಇದು ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರವಾಗಿರಿಸುತ್ತದೆ.

ಬಿಸ್ಕತ್​ ತಿನ್ನುವುದರಿಂದ ತಕ್ಷಣಕ್ಕೆ ಯಾವುದೇ ಆನಾರೋಗ್ಯ ಸಮಸ್ಯೆಗಳು ಕಾಡುವುದಿಲ್ಲ. ಆದರೆ, ದಿನನಿತ್ಯ ಇದರ ಸೇವನೆಯನ್ನು ರೂಢಿಸಿಕೊಂಡರೆ, ಅದು ದೀರ್ಘಾವಧಿಯಲ್ಲಿ ಹೃದಯ, ಮಧುಮೇಹ ಮತ್ತು ತೂಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಚಹಾ ಕುಡಿಯುವಾಗ ಬಿಸ್ಕತ್​ ತಿನ್ನುವುದು ಅನುಕೂಲಕರವೆಂದು ತೋರಿದರೂ, ಅದು ಮಂದಗತಿಯಲ್ಲಿ ನಿಮ್ಮ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತದೆ. ಮೈದಾ ಹಿಟ್ಟು, ಸಕ್ಕರೆಯಿಂದ ಮಾಡಲಾದ ಬಿಸ್ಕತ್ತುಗಳ ಬದಲಿಗೆ, ಮನೆಯಲ್ಲಿ ತಯಾರಿಸಿದ, ಆರೋಗ್ಯಕರ ಮತ್ತು ಪೌಷ್ಟಿಕ ತಿಂಡಿಗಳನ್ನು ಸೇವಿಸುವುದು ಉತ್ತಮ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net