ಕಡೆಗೂ ಹೊರಬಿತ್ತು ಬಾಲಿವುಡ್ ಹಾಟ್​ ಬೆಡಗಿ​ ಟ್ಯಾಟೂ ರಹಸ್ಯ! ದಿಶಾ ಪಟಾನಿ ಲುಕ್​ಗೆ ಫ್ಯಾನ್ಸ್ ಫಿದಾ

ವಿಜಯವಾಣಿ - 2024-07-04T150146.616
Published on

ಮುಂಬೈ: ಬಾಲಿವುಡ್ ಬ್ಯೂಟಿ, ಹಾಟ್​ ಬೆಡಗಿ ದಿಶಾ ಪಟಾನಿ ಇತ್ತೀಚೆಗೆ 'ಡಾರ್ಲಿಂಗ್' ಪ್ರಭಾಸ್ ಅಭಿನಯದ ಸೈನ್ಸ್​​-ಫಿಕ್ಷನ್​ ಕಲ್ಕಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಎಂದಿನಂತೆ ಅಭಿಮಾನಿಗಳನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮಧ್ಯೆ ನಟಿಯ ಹೊಸ ಟ್ಯಾಟೂ ಪಡ್ಡೆಹುಡುಗರ ನಿದ್ದೆಗೆಡಿಸಿದ್ದು. ಅದನ್ನು ಹಾಕಿಸಿಕೊಂಡಿರುವ ಉದ್ದೇಶವೇನು? ಅದರ ಅರ್ಥವೇನು? ಎಂಬ ಸರಣಿ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಕಳೆದ ಎರಡು ದಿನಗಳಿಂದ ನಟಿಯ ಸಿನಿಮಾ ಬಗ್ಗೆಗಿನ ಮಾತಿಗಿಂತ ಆಕೆಯ ಟ್ಯಾಟೂ ಕುರಿತಾಗಿಯೇ ವದಂತಿಗಳು ಹರಿದಾಡಿವೆ. ತನ್ನ ಎಡಗೈ ಮೇಲೆ ಪಿಡಿ ಎಂಬ ಅಚ್ಚೆ ಹಾಕಿಸಿಕೊಂಡಿರುವ ದಿಶಾ ಪಟಾನಿ, ಅದರ ಅರ್ಥವೇನು ಎಂಬುದನ್ನು ಇಲ್ಲಿಯವರೆಗೂ ರಿವೀಲ್ ಮಾಡಿಲ್ಲ. ಆದ್ರೆ, ಟ್ಯಾಟೂ ಕಾಣಿಸುವಂತೆ ಫೋಟೋ ಪೋಸ್ಟ್​ ಮಾಡಿ, ಅದರ ಬಗ್ಗೆ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.

ಕಲ್ಕಿ​ ಸಿನಿಮಾದಲ್ಲಿ ದಿಶಾ ನಟಿಸಿದ್ದೇ ತಡ ಪ್ರಭಾಸ್‌ಗೂ ಪಟಾನಿಗೂ ಪ್ರೀತಿಯ ಸಂಬಂಧ ಇರಬಹುದು ಎಂಬ ಕಪಲೋಕಲ್ಪಿತ ಟಾಕ್​ಗಳನ್ನು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ಟ್ಯಾಟೂ ಪ್ರಕಾರ, 'ಪಿಡಿ' ಎಂದರೆ 'ಪ್ರಭಾಸ್ ಡಾರ್ಲಿಂಗ್' ಎಂದು ಅಭಿಮಾನಿಗಳು ಡಿಕೋಡ್ ಮಾಡಿದ್ದಾರೆ. ಈ ಬೆನ್ನಲ್ಲೇ ಮೌನಕ್ಕೆ ಜಾರಿದ ದಿಶಾ ಇಂದು ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ಹೊಸ ವೀಡಿಯೊ ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಹೊಸ ಶಾಕ್ ನೀಡಿದ್ದಾರೆ.

ವಿಡಿಯೋ ಪ್ರಕಾರ, ಅಮೆಜಾನ್ ಪ್ರೈಮ್ ಡೇ 2024ರ ಪ್ರಚಾರಕ್ಕಾಗಿ ತಾತ್ಕಾಲಿಕ ಟ್ಯಾಟೂವನ್ನು ಧರಿಸಿದ್ದೆ ಎಂದಿರುವ ದಿಶಾ, ವಾಸ್ತವವಾಗಿ 'ಪಿಡಿ' ಎಂದರೆ 'ಪ್ರೈಮ್ ಡೇ' ಎಂಬರ್ಥ ಎಂದಿದ್ದಾರೆ. ಈ ಮೂಲಕ ಅನಗತ್ಯವಾಗಿ ಪ್ರಭಾಸ್​ರನ್ನು ಮಧ್ಯಕ್ಕೆ ಎಳೆದು ತಂದ ಅಭಿಮಾನಿಗಳು ಹಬ್ಬಿಸಿದ ವದಂತಿಗಳಿಗೆ ಇದೀಗ ಅಂತ್ಯ ಹಾಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net