ಬಾಲಿವುಡ್​ನ ಹಿರಿಯ ನಟಿ ಸ್ಮೃತಿ ಬಿಸ್ವಾಸ್​ ನಿಧನ

Smriti Biswas
Published on

ನಾಶಿಕ್​: ಹಿಂದಿ, ಮರಾಠಿ, ಬೆಂಗಾಲಿ ಚಲನಚಿತ್ರಗಳಲ್ಲಿ ನಟಿಸಿ ಹೆಚ್ಚು ಖ್ಯಾತಿ ಪಡೆದಿದ್ದ ಹಿರಿಯ ನಟಿ ಸ್ಮೃತಿ ಬಿಸ್ವಾಸ್​ ನಿಧನರಾಗಿದ್ದಾರೆ. ಮೃತರಿಗೆ 100 ವರ್ಷ ವಯಸ್ಸಾಗಿತ್ತು ಎಂದು ತಿಳಿದು ಬಂದಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬುಧವಾರ (ಜುಲೈ 03) ಇಹಲೋಕ ತ್ಯಜಿಸಿದ್ದಾರೆ ಎಂದು ಕಟುಂಬಸ್ಥರು ತಿಳಿಸಿದ್ದಾರೆ.

ಬಾಲ ಕಲಾವಿದೆಯಾಗಿ ವೃತ್ತಿ ಜೀವನ ಆರಂಭಿಸಿದ ಸ್ಮೃತಿ ಬಿಸ್ವಾಸ್​ ಅವರು ಗುರುದತ್, ವಿ ಶಾಂತಾರಾಮ್, ಮೃಣಾಲ್ ಸೇನ್, ಬಿಮಲ್ ರಾಯ್, ಬಿಆರ್ ಚೋಪ್ರಾ ಮತ್ತು ರಾಜ್ ಕಪೂರ್ ಅವರ ಸಿನಿಮಾಗಳಲ್ಲಿ ನಟಿಸಿ ಹೆಚ್ಚು ಖ್ಯಾತಿ ಪಡೆದಿದ್ದರು.

ಸ್ಮೃತೊ ಅವರಿಗೆ ರಾಜೀವ್​ ಮತ್ತು ಸತ್ಯಜಿತ್​ ಎಂಬ ಇಬ್ಬರು ಮಕ್ಕಳಿದ್ದು, ಈ ವರ್ಷ ಫೆಬ್ರವರಿ 17ರಂದು 100ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದರು. ಇವರು ನಿರ್ದೇಶಕ ಎಸ್​.ಡಿ. ನಾರಂಗ್​ ಅವರನ್ನು ಮದುವೆಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net