ಜನವರಿಯಲ್ಲಿ ಟಾಟಾ ವಾಹನ ಬೆಲೆ ಏರಿಕೆ!

TATA
Published on

ನವದೆಹಲಿ: 2024 ಜನವರಿ 1ರಿಂದ ಜಾರಿಗೆ ಬರುವಂತೆ ತನ್ನ ವಾಣಿಜ್ಯ ವಾಹನಗಳ ಬೆಲೆಗಳನ್ನು ಶೇಕಡ 3ರ ವರೆಗೆ ಏರಿಸುವುದಾಗಿ ಟಾಟಾ ಮೋರ್ಟಸ್​ ತಿಳಿಸಿದೆ.

ಹಿಂದಿನ ಉತ್ಪಾದನಾ ವೆಚ್ಚಗಳ ಪರಿಣಾಮವನ್ನು ಸರಿದೂಗಿಸಿಕೊಳ್ಳಲು ಎಲ್ಲ ರೇಂಜ್​ನ ವಾಣಿಜ್ಯ ವಾಹನಗಳ ಬೆಲೆಗಳನ್ನು ಹೆಚ್ಚಿಸಲಾಗುವುದೆಂದು ರೆಗ್ಯುಲೇಟರಿ ಫೈಲಿಂಗ್​ನಲ್ಲಿ ಕಂಪನಿ ತಿಳಿಸಿದೆ.

5.6 ಲಕ್ಷ ರೂಪಾಯಿಯಿಂದ ಆರಂಭಿಸಿ 25.94 ಲಕ್ಷ ರೂ. ವರೆಗಿನ ಹ್ಯಾಚ್​ಬ್ಯಾಕ್​ನಿಂದ ಶುರುವಾಗಿ ಪ್ರೀಮಿಯಂ ಎಸ್​ಯುವಿ ವರೆಗಿನ ಪ್ರಯಾಣಿಕ ವಾಹನಗಳನ್ನು ಟಾಟಾ ಮೋರ್ಟಸ್​ ಮಾರಾಟ ಮಾಡುತ್ತದೆ. ಮಾರುತಿ ಸುಜುಕಿ, ಮಹೀಂದ್ರಾ ಆ್ಯಂಡ್​ ಮಹೀಂದ್ರಾ, ಹೋಂಡಾ ಮತ್ತು ಆಡಿ ಮುಂತಾದ ವಾಹನ ಕಂಪನಿಗಳು ಕೂಡ ಈಗಾಗಲೇ ತಮ್ಮ ಉತ್ಪನ್ನಗಳ ದರ ಏರಿಕೆಯನ್ನು ಪ್ರಕಟಿಸಿದ್ದು ಟಾಟಾ ಅದರ ಸಾಲಿಗೆ ಸೇರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net