ಬೆಂಗಳೂರಿನಲ್ಲಿ ರಣ ಬಿಸಿಲು; ತಾಪಕ್ಕೆ ಕರಗಿದ ʻಟಾಟಾ ಹ್ಯಾರಿಯರ್‌ʼಕಾರ್​ನ ಮುಂಭಾಗದ ಬಂಪರ್

Tata Harrier Front Fascia Melts
Published on

ಬೆಂಗಳೂರು: ಬೇಸಿಗೆಯ ರಣ ಬಿಸಿಲಿನಿಂದ ಬಚಾವ್ ಆಗಲು ರಾಜಧಾನಿ ಜನ, ತಂಪುಪಾನಿಯ ಮೊರೆ ಹೋಗುತ್ತಿದ್ದಾರೆ. ಈ ರಣ ಬಿಸಿಲಿನಿಂದ ಮಾನವರು, ಪ್ರಾಣಿ, ಪಕ್ಷಿಗಳಿಗೆ ಮಾತ್ರವಲ್ಲದೇ ಕೆಲವು ವಸ್ತುಗಳ ಮೇಲೆಯೂ ಬಿಸಿಲು ಪ್ರಭಾವ ಬೀರಿದೆ.

ಟಾಟಾ ಹ್ಯಾರಿಯರ್‌ನ ಮುಂಭಾಗದ ಬಂಪರ್ ಭಾರೀ ಶಾಖದಿಂದಾಗಿ ಕರಗಲು ಪ್ರಾರಂಭಿಸಿತು. ಈ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.

ಸೌರವ್ ನಹತಾ ಎಂಬ ಹೆಸರಿನ ಕಾರು ಮಾಲೀಕರು ತಮ್ಮ ಟ್ವೀಟ್‌ನಲ್ಲಿ, ʻತನ್ನ ಎಸ್‌ಯುವಿಯನ್ನು ತಮ್ಮ ಕಚೇರಿಯ ಹೊರಗೆ ನಿಲ್ಲಿಸಿದ್ದರು. ನಂತರ ಕಾರಿನ ಬಳಿ ಬಂದಾಗ ಸೂರ್ಯನ ಶಾಖದಿಂದ ʻಟಾಟಾ ಹ್ಯಾರಿಯರ್‌ʼ ನ ಮುಂಭಾಗದ ಬಂಪರ್ ಕರಗಿದ್ದನ್ನು ಗಮನಿಸಿದೆ' ಎಂದು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅದರ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.

ಏಪ್ರಿಲ್ 12 ರಂದು ತನ್ನ ಕಾರನ್ನು 10 ಗಂಟೆಗಳ ಕಾಲ ಬೆಂಗಳೂರಿನ ಬಿಸಿಲಿನಲ್ಲಿ ನಿಲ್ಲಿಸಿದಾಗ ಈ ಘಟನೆ ಸಂಭವಿಸಿದೆ. ಫೋಟೋದಲ್ಲಿ ಮುಂಭಾಗದ ಗ್ರಿಲ್ ಮತ್ತು ಬಂಪರ್ ಕರಗುವುದನ್ನು ಕಾಣಬಹುದಾಗಿದೆ.

2021 ಡಿಸೆಂಬರ್ ನಿಂದ ಟಾಟಾ ಹ್ಯಾರಿಯರ್ ಕಾರ್​​ ಬಳಸುತ್ತಿದ್ದಾರೆ. ಅದರ ನಿರ್ಮಾಣ ಗುಣಮಟ್ಟ ಮತ್ತು ಸುರಕ್ಷತೆಯ ರೇಟಿಂಗ್‌ಗಳ ಸಕಾರಾತ್ಮಕ ವಿಮರ್ಶೆಗಳಿಂದಾಗಿ ಅವರು ಎಸ್‌ಯುವಿಯನ್ನು ಖರೀದಿಸಿದ್ದರು. ಆದಾಗ್ಯೂ, ಇದು ನಿರೀಕ್ಷೆಗಳಿಗೆ ತಕ್ಕಂತೆ ಬಾಳಕೆ ಬಂದಿಲ್ಲ. ಸಾಮಾನ್ಯ ಶಾಖದ ಅಲೆಯನ್ನು ನಿಭಾಯಿಸಲು ಸಾಧ್ಯವಾಗದಿದ್ದಾಗ, ಗ್ರಾಹಕರು ನಿರಾಶೆಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net