

ಪ್ರಾದೇಶಿಕ ಭಾಷೆಯ ಎಲ್ಲಾ ಚಿತ್ರರಂಗಗಳ ಎಲ್ಲಾ ಹೀರೋಗಳಿಗೂ ಬಹುಶಃ ಅದೊಂದು ಆಸೆ ಇದ್ದೇ ಇರುತ್ತದೆ. ತಮ್ಮ ಚಿತ್ರರಂಗದಲ್ಲಿ ಸ್ಟಾರ್ ಆಗಿ ಮೆರೆಯುವುದರ ಜತೆಗೆ, ಬಾಲಿವುಡ್ಗೆ ಹೋಗಬೇಕು, ಪ್ಯಾನ್ ಇಂಡಿಯಾ ಹೀರೋ ಆಗಿ ಗುರುತಿಸಿಕೊಳ್ಳಬೇಕು ಅಂತ.
ಆದರೆ, ತಾರಕ್ ಅಲಿಯಾಸ್ ಜ್ಯೂನಿಯರ್ ಎನ್.ಟಿ.ಆರ್ಗೆ ಮಾತ್ರ ಮೊದಲಿನಿಂದಲೂ ಅಂಥದ್ದೊಂದು ಆಸೆ ಇಲ್ಲವಂತೆ. ತೆಲುಗು ಚಿತ್ರರಂಗದಿಂದ ಗುರುತಿಸಿಕೊಂಡ ಅವರು, ತೆಲುಗು ಚಿತ್ರರಂಗದಲ್ಲೇ ಮಿಂಚಿದರೆ ಸಾಕು ಎಂಬುದು ಅವರ ಆಸೆಯಂತೆ.
ಈಗಾಗಲೇ ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ರಾಮ್ಚರಣ್ ತೇಜ, ರಾಣಾ ದಗ್ಗುಬಾಟಿ ಮುಂತಾದವರು ಹಾಲಿವುಡ್ಗೆ ಹೋಗಿ ಬಂದಿದ್ದಾರೆ. ಆದರೆ, ತಾರಕ್ ಮಾತ್ರ ತೆಲುಗು ಚಿತ್ರರಂಗದಿಂದ ಎಲ್ಲೂ ಕದಲಿಲ್ಲ. ಅಲ್ಲಿಗೆ ಜೀರೋ ಆಗಿ ಬಂದವರು, ಸೂಪರ್ ಹೀರೋ ಆಗಿ ಬೆಳೆದಿದ್ದಾರೆ.
ಈ ಮಧ್ಯೆ ರಾಜಮೌಳಿ ನಿರ್ದೇಶನದ 'ಆರ್ಆರ್ಆರ್' ಚಿತ್ರವು ತೆಲುಗು ಅಷ್ಟೇ ಅಲ್ಲ, ಬೇರೆ ಭಾಷೆಗಳಲ್ಲೂ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿ ಅದು ಹೊರಹೊಮ್ಮಲಿದೆ. ಆ ನಂತರ ತಾರಕ್ ಅಭಿನಯದ ಚಿತ್ರಗಳೆಲ್ಲಾ ಪ್ಯಾನ್ ಇಂಡಿಯಾ ಲೆವೆಲ್ಗೆ ಇರುತ್ತದೆ ಎಂದುಕೊಂಡರೆ ಅದು ತಪ್ಪು.
ಇದನ್ನೂ ಓದಿ: ಮೇಕಪ್ ಮ್ಯಾನ್ ಸಾವಿಗೆ ದರ್ಶನ್ ಕಂಬನಿ
ಆ ಚಿತ್ರ ಮುಗಿಯುತ್ತಿದ್ದಂತೆಯೇ, ತಾರಕ್ ತಮ್ಮದೇ ಸ್ಟೈಲ್ನ ಇನ್ನೊಂದು ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರವನ್ನು ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡುತ್ತಿದ್ದು, ಇದೊಂದು ಪಕ್ಕಾ ಫ್ಯಾಮಿಲಿ ಕಮರ್ಷಿಯಲ್ ಚಿತ್ರ ಆಗಿರಲಿದೆಯಂತೆ.
'ಬೃಂದಾವನಂ' ನಮತರ ಪಕ್ಕಾ ಫ್ಯಾಮಿಲಿ ಚಿತ್ರದಿಂದ ದೂರವೇ ಉಳಿದಿರುವ ತಾರಕ್, ಈಗ ಅಂಥದ್ದೇ ಒಂದು ಚಿತ್ರದಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ. ತಮಗೆ ಪ್ಯಾನ್ ಇಂಡಿಯಾ ಲೆವೆಲ್ನ ಚಿತ್ರಗಳು ಬೇಡ, ಲೋಕಲ್ ಮಾರ್ಕೆಟ್ಗೆ ಸರಿಹೊಂದುವಂತಹ ಚಿತ್ರ ಬೇಕು ಎಂದು ನಂಬಿರುವ ತಾರಕ್, ಅದಕ್ಕೆ ತಕ್ಕಂತಹ ಸಿನಿಮಾ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.