

ಹೈದರಾಬಾದ್: ಹೈದರಾಬಾದ್ ಆರಂಭಿಕ ತನ್ಮಯ್ ಅಗರ್ವಾಲ್ (323*ರನ್, 160 ಎಸೆತ, 33 ಬೌಂಡರಿ, 21 ಸಿಕ್ಸರ್) ರಣಜಿ ಟ್ರೋಫಿಯಲ್ಲಿ ಅತಿವೇಗದ ತ್ರಿಶತಕದ ವಿಶ್ವದಾಖಲೆ ಬರೆದಿದ್ದಾರೆ.
ಪ್ರವಾಸಿ ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಅವರು 147 ಎಸೆತಗಳಲ್ಲೇ ತ್ರಿಶತಕ ಪೂರೈಸಿದರು. ಈ ಮೂಲಕ ದಕ್ಷಿಣ ಆಫ್ರಿಕಾದ ಮಾಕೋರ್ ಮರಾಯಿಸ್ 2017ರಲ್ಲಿ 191 ಎಸೆತಗಳಲ್ಲಿ ತ್ರಿಶತಕ ಸಿಡಿಸಿದ್ದ ದಾಖಲೆ ಮುರಿದರು.
119 ಎಸೆತಗಳಲ್ಲೇ ದ್ವಿಶತಕ ಪೂರೈಸುವ ಮೂಲಕ ಅವರು 39 ವರ್ಷ ಹಳೆಯ ರವಿಶಾಸ್ತ್ರಿ ಅವರ ಭಾರತೀಯ ದಾಖಲೆಯನ್ನೂ ಮುರಿದರು. ಜತೆಗೆ ರಣಜಿ ಇನಿಂಗ್ಸ್ ಒಂದರಲ್ಲಿ ಸರ್ವಾಧಿಕ 14 ಸಿಕ್ಸರ್ ಸಿಡಿಸಿದ್ದ ಇಶಾನ್ ಕಿಶನ್ ದಾಖಲೆಯನ್ನೂ ಮುರಿದರು.
ಅರುಣಾಚಲವನ್ನು 172 ರನ್ಗೆ ನಿಯಂತ್ರಿಸಿದ ಹೈದರಾಬಾದ್ ಮೊದಲ ದಿನದಂತ್ಯಕ್ಕೆ 48 ಓವರ್ಗಳಲ್ಲಿ 1 ವಿಕೆಟ್ಗೆ 529 ರನ್ ಪೇರಿಸಿದೆ. ತನ್ಮಯ್ ಮೊದಲ ವಿಕೆಟ್ಗೆ ನಾಯಕ ರಾಹುಲ್ ಸಿಂಗ್ ಗಹಲೌತ್ (185) ಜತೆ 449 ರನ್ ಸೇರಿಸಿದರು.