More

    ಅಶ್ವಿನ್​-ಜಡೇಜಾ ಈಗ ಭಾರತದ ಯಶಸ್ವಿ ಬೌಲಿಂಗ್​ ಜೋಡಿ; ಹಿಂದಿಕ್ಕಿದ್ದು ಯಾರನ್ನು?

    ಹೈದರಾಬಾದ್​: ಪ್ರವಾಸಿ ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್​ನ ಮೊದಲ ದಿನ ಭಾರತದ ಸ್ಪಿನ್ನರ್​ಗಳಾದ ಆರ್​. ಅಶ್ವಿನ್​ ಮತ್ತು ರವೀಂದ್ರ ಜಡೇಜಾ ತಲಾ 3 ವಿಕೆಟ್​ ಕಬಳಿಸಿ ಮಿಂಚಿದರು. ಈ ಮೂಲಕ ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ ಭಾರತ ಕಂಡ ಅತ್ಯಂತ ಯಶಸ್ವಿ ಬೌಲಿಂಗ್​ ಜೋಡಿ ಎನಿಸಿದ್ದಾರೆ.

    ಅನಿಲ್​ ಕುಂಬ್ಳೆ-ಹರ್ಭಜನ್​ ಸಿಂಗ್​ ಜೋಡಿಯ ಸಾಧನೆಯನ್ನು ಅವರು ಹಿಂದಿಕ್ಕಿದರು. ಜತೆಗೆ ಟೆಸ್ಟ್​ ಕ್ರಿಕೆಟ್​ನಲ್ಲಿ 500ಕ್ಕೂ ಅಧಿಕ ವಿಕೆಟ್​ ಕಬಳಿಸಿದ ವಿಶ್ವದ 15ನೇ ಮತ್ತು ಭಾರತದ 2ನೇ ಜೋಡಿ ಎನಿಸಿದ್ದಾರೆ. ಅನಿಲ್​ ಕುಂಬ್ಳೆ-ಹರ್ಭಜನ್​ ಸಿಂಗ್​ ಜೋಡಿ 54 ಟೆಸ್ಟ್​ಗಳಲ್ಲಿ 501 ವಿಕೆಟ್​ ಕಬಳಿಸಿದ್ದು ಹಿಂದಿನ ದಾಖಲೆಯಾಗಿದ್ದರೆ, ಅಶ್ವಿನ್​-ಜಡೇಜಾ ಈಗ 50 ಟೆಸ್ಟ್​ಗಳಲ್ಲೇ ಇದನ್ನು ಮೀರಿಸಿದ್ದಾರೆ.

    ಹರ್ಭಜನ್​-ಜಹೀರ್​ ಖಾನ್​ ಜೋಡಿ 59 ಟೆಸ್ಟ್​ಗಳಲ್ಲಿ 474 ವಿಕೆಟ್​ ಗಳಿಸಿದ್ದು ನಂತರದ ಅತ್ಯುತ್ತಮ ಭಾರತೀಯ ದಾಖಲೆಯಾಗಿದೆ. ಇಂಗ್ಲೆಂಡ್​ನ ಜೇಮ್ಸ್​ ಆಂಡರ್​ಸನ್​&ಸ್ಟುವರ್ಟ್​ ಬ್ರಾಡ್​ ಜೋಡಿ 138 ಟೆಸ್ಟ್​ಗಳಲ್ಲಿ 1,039 ವಿಕೆಟ್​ ಕಬಳಿಸಿದ್ದು ವಿಶ್ವದಾಖಲೆಯಾಗಿದೆ.

    ಭಾರತದ ನೆಲದಲ್ಲೂ ಯಶಸ್ಸು ಕಾಣುತ್ತ ಆಂಗ್ಲರ ಬಜ್​ಬಾಲ್​? ಏನಿದು ಬಜ್​ಬಾಲ್​ ತಂತ್ರಗಾರಿಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts